ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ! ತನ್ನ ಹೇಳಿಕೆ ಹಿಂಪಡೆದ ವಿದ್ಯಾರ್ಥಿನಿ ಕೊಟ್ಟ ಸ್ಪಷ್ಟನೆ ಹೀಗಿದೆ..

ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ! ತನ್ನ ಹೇಳಿಕೆ ಹಿಂಪಡೆದ ವಿದ್ಯಾರ್ಥಿನಿ ಕೊಟ್ಟ ಸ್ಪಷ್ಟನೆ ಇದು..#Egg #Student - youtube
Published on

ಕೊಪ್ಪಳ: ನಮಗೆ ಮೊಟ್ಟೆ ಕೊಡಬೇಡಿ ಎಂದು ವಿರೋಧ ಮಾಡಿದರೆ, ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗುತ್ತೇವೆ ಎಂದು ಸವಾಲು ಹಾಕಿದ್ದ ವಿದ್ಯಾರ್ಥಿನಿ ಇದೀಗ ತನ್ನ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದಾಳೆ.

ಶಾಲೆಯಲ್ಲಿ ಮೊಟ್ಟೆ ನೀಡಲು ಕೆಲ‌ ಮಠಾಧೀಶರ ವಿರೋಧ ಹಿನ್ನೆಲೆಯಲ್ಲಿ ಎಸ್ಎಫ್ಐ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿನಿ ಮಾತನಾಡಿದ್ದಳು. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿತ್ತು.

ಇದೀಗ ತನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ವಿದ್ಯಾರ್ಥಿನಿ, ನಾನು ಆವೇಶದಲ್ಲಿ ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ ಅಂತಾ ಹೇಳಿದ್ದೇನೆ. ಹಾಗಂದ ಮಾತ್ರಕ್ಕೆ ನಾನು ಮಠಕ್ಕೆ ಹೋಗಿ ಮೊಟ್ಟೆ ತಿನ್ನುವುದಿಲ್ಲ. ಆದರೆ, ಮಠಾಧೀಶರು ಮೊಟ್ಟೆ ನೀಡುವುದನ್ನು ವಿರೋಧಿಸಿದ್ದು ತಪ್ಪು. ಸ್ವಾಮೀಜಿಗಳೂ ಕೂಡ ತಮ್ಮ ವಿರೋಧವನ್ನು ಕೈ ಬಿಡಬೇಕು ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈ ಯೋಜನೆ ಒಳ್ಳೆಯದು. ವೈದ್ಯರೇ ಮೊಟ್ಟೆ ತಿನ್ನುವಂತೆ ಸಲಹೆ ನೀಡುತ್ತಾರೆ. ಮೊಟ್ಟೆ ತಿನ್ನದೇ ಇದ್ದವರಿಗೆ ಬಾಳೇಹಣ್ಣು ಕೊಡುತ್ತಿದ್ದಾರೆ. ಆದರೆ, ಮೊಟ್ಟೆ ಕೊಡದಂತೆ ವಿರೋಧ ಮಾಡುವುದು ಸರಿಯಲ್ಲ. ಮೊಟ್ಟೆ ತಿನ್ನದವರು ಬಾಳೇಹಣ್ಣು ತೆಗೆದುಕೊಳ್ಳಲಿ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿದ್ಯಾರ್ಥಿನಿ ಅಂಜಲಿ ಸ್ಪಷ್ಟನೆ ನೀಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net