ಸಮಸ್ಯೆ ಬಗೆಹರಿಸುವ ಸೋಗಿನಲ್ಲಿ ಸಿಕ್ಕಸಿಕ್ಕವರಿಗೆ ಪಂಗನಾಮ ಹಾಕ್ತಿದ್ದ ಚಾಲಾಕಿ ಮಹಿಳೆಯರ ಬಂಧನ!

Women 1
Published on

ಕೊಡಗು: ಜನರ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಶಾಸ್ತ್ರ ಹೇಳುವ ನೆಪದಲ್ಲಿ ಸಾಮಾನ್ಯ ಜನರಿಗೆ ವಂಚನೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಲಕ್ಷ್ಮೀ (22) ಆರ್. ಲಕ್ಷ್ಮೀ(23) ಮತ್ತು ಸುಜಾತಾ(22) ಎಂದು ಗುರುತಿಸಲಾಗಿದೆ. ಇವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಿವಾಸಿಗಳು. ಶಾಸ್ತ್ರ ಹೇಳಿ ಸಮಸ್ಯೆ ಬಗೆಹರಿಸುವ ನೆಪದಲ್ಲಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಕುಶಾಲನಗರದ ಲಕ್ಷ್ಮೀ ಎಂಬವರ ಮನೆಯಿಂದ 135 ಗ್ರಾಂ ಚಿನ್ನಾಭರಣ, 31,000 ರೂಪಾಯಿ ನಗದು ಪಡೆದು ವಂಚಿಸಿದ್ದ, ಈ ಸಂಬಂಧ ಮೋಸ ಹೋದ ಮಹಿಳೆ ದ ಕುಶಾಲನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.

ಈ ವಂಚನೆ ಜಾಲದಲ್ಲಿ ಇನ್ನು ಅನೇಕರು ಇರುವ ಶಂಕೆ ವ್ಯಕ್ತವಾಗಿದ್ದು, ವಂಚಕಿಯರ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net