ಕಿಚ್ಚನ ಬರ್ತಡೇಗೆ ವಿಕ್ರಾಂತ್​ ರೋಣ ಚಿತ್ರತಂಡದಿಂದ ಬಿಗ್​ ಸರ್ಪ್ರೈಸ್​: ಡೆಡ್ ಮ್ಯಾನ್​ ಎಂಟ್ರಿಗೆ ಕೌಂಟ್​ಡೌನ್​!

Dead Man
Published on

ಬೆಂಗಳೂರು: ಸೆಪ್ಟೆಂಬರ್​ 2 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿಮಾನಿಗಳ ಪಾಲಿಗೆ ಮರೆಯಲಾಗದ ಸುದಿನ. ಈ ಬಂತೆಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಕಾರಣ ನೆಚ್ಚಿನ ನಟ ಸುದೀಪ್​ ಹುಟ್ಟುಹಬ್ಬ. ಆದರೆ, ಈ ಬಾರಿ ಕೋವಿಡ್​ ಕಾರಣ ಹುಟ್ಟು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿ ಸುದೀಪ್​ ನಿರಾಸೆ ಮಾಡಿದ್ದರೂ ಸಹ ಅದನ್ನು ಮರೆಸಲು ಅಭಿಮಾನಿಗಳಿಗೆ ಒಂದು ಸರ್ಪ್ರೈಸ್​ ಅನ್ನು ನೀಡಿದ್ದಾರೆ.

ಹೌದು, ಕಿಚ್ಚ ಸುದೀಪ್‌‌ ನಟನೆಯ 'ವಿಕ್ರಾಂತ್‌‌ ರೋಣ' ಚಿತ್ರದ ಗ್ಲಿಮ್ಸ್ ವಿಡಿಯೋ ರಿಲೀಸ್​ಗೆ ರೆಡಿಯಾಗಿದೆ. ಸೆಪ್ಟೆಂಬರ್ 2ರಂದು ಬೆಳಗ್ಗೆ 11.05ಕ್ಕೆ 'ಡೆಡ್ ಮ್ಯಾನ್ಸ್ ಆ್ಯಂಥಮ್' ಸಾಂಗ್ ಬಿಡುಗಡೆಯಾಗಲಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಟ್ವೀಟ್​ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸೆ.2ರಂದು ಬಹುದೊಡ್ಡ ಸರ್ಪ್ರೈಸ್​ ಖಂಡಿತ ಸಿಗಲಿದೆ. ಈಗಾಗಲೇ ವಿಶ್ವದ್ಯಾಂತ ಸದ್ದು ಮಾಡಿರುವ ವಿಕ್ರಾಂತ್​ ರೋಣನ ವೈಭವಕ್ಕೆ ಡೆಡ್ ಮ್ಯಾನ್ಸ್ ಆ್ಯಂಥಮ್ ಮತ್ತಷ್ಟು ಪುಷ್ಠಿ ನೀಡಲಿದೆ.

ಸೆಪ್ಟೆಂಬರ್​ 2ಕ್ಕೆ ನಟ ಸುದೀಪ್​ 50ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಬಾರಿಯ ಅವರ ಹುಟ್ಟುಹಬ್ಬಕ್ಕೆ ಅನೇಕ ಚಿತ್ರಗಳು ಘೋಷಣೆಯಾಗುವ ಸಾಧ್ಯತೆಗಳು ಇವೆ. ತಮಿಳು ಚಿತ್ರರಂಗ ಖ್ಯಾತ ನಿರ್ದೇಶಕ ವೆಂಕಟ್​ ಪ್ರಭು ಅವರ ಹೆಸರು ಚಾಲ್ತಿಯಲ್ಲಿದೆ. ಏಕೆಂದರೆ, ಇತ್ತಿಚೆಗಷ್ಟೇ ವೆಂಕಟ್​ ಪ್ರಭು ಸುದೀಪ್​ ಅವರು ಮನೆಗೆ ಭೇಟಿ ನೀಡಿದ್ದರು.

ವಿಕ್ರಾಂತ್​ ರೋಣ ಸಿನಿಮಾ ವಿಚಾರಕ್ಕೆ ಬರುವುದಾದರೆ, ಚಿತ್ರವನ್ನು ರಂಗಿತರಂಗ ಖ್ಯಾತಿ ಅನೂಪ್​ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜಾಕ್​ ಮಂಜು ಬಂಡವಾಳವನ್ನು ಹೂಡಿದ್ದಾರೆ. ಕರೊನಾ ಎರಡನೇ ಅಲೆ ಬರದೇ ಹೋಗಿದ್ದರೆ ಈಗಾಗಲೇ ಆಗಸ್ಟ್​ 19ರಂದು ಚಿತ್ರ ತೆರೆಕಾಣಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಇನ್ನು ಮುಚ್ಚಿರುವ ಕಾರಣ ವಿಕ್ರಾಂತ್​ ರೋಣ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲಿದೆ. ಅಲ್ಲದೆ, ಚಿತ್ರದಲ್ಲಿ ಬಾಲಿವುಡ್​ ಬ್ಯೂಟಿ ಜಾಕ್ವೆಲಿನ್​ ಫರ್ನಾಂಡೀಸ್​ ಅಭಿನಯಿಸಿರುವುದು ಚಿತ್ರ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net