ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ ಕೇಸ್​: ಚಿಕ್ಕಮನ ಜತೆ ಅಕ್ರಮ ಸಂಬಂಧ, ಸಹೋದರನಿಂದಲೇ ಹತ್ಯೆ

Photographer
ಕೊಲೆಯಾದ ಶಿವಕುಮಾರ್​
Published on

ಕಲಬುರಗಿ: ಫೋಟೊಗ್ರಾಫರ್ ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸರು ಐವರು ಹಂತಕರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಾಂತೇಶ್ ಆಳಂದಕರ್, ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಹಾಗೂ ಅಶೋಕ ಜಮಾದಾರ್​ ಎಂದು ಗುರುತಿಸಲಾಗಿದೆ.

ಕೊಲೆಯಾದ ಶಿವಕುಮಾರ್, ಆರೋಪಿ ಮಹಾಂತೇಶ್​ ತಾಯಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ವರಸೆಯಲ್ಲಿ ಇಬ್ಬರು ಸಹೋದರರು. ಮಹಾಂತೇಶ್​ಗೆ ಶಿವಕುಮಾರ್​ ದೊಡ್ಡಪ್ಪನ ಮಗನಾಗಬೇಕು. ಚಿಕ್ಕಮ್ಮನ ಜತೆಯಲ್ಲೇ ಅಕ್ರಮ ಸಂಬಂಧ ಹೊಂದಿದ್ದನ್ನು ಮಹಾಂತೇಶ್​ ಕಣ್ಣಾರೆ ಕಂಡಿದ್ದ.

ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ದೊಡ್ಡಪ್ಪನ ಮಗನ ಮೇಲೆ ಸೇಡು ತಿರಿಸಿಕೊಳ್ಳಲು ಮಾವ ಬಸವರಾಜ್ ಜತೆ ಸೇರಿಕೊಂಡು ಶಿವಕುಮಾರ್​ ಕೊಲೆಗೆ ಮಹಾಂತೇಶ್​ ಸಂಚು ರೂಪಿಸಿದ್ದ. ಜನವರಿ 25 ರಂದು ಆಳಂದ ತಾಲ್ಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್​ನನ್ನು ಬೈಕ್ ಮೇಲೆ‌ ಕರೆದುಕೊಂಡು ಬಂದಿದ್ದ ಮಹಾಂತೇಶ್, ಕೊಲೆ ಮಾಡಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಯ ಮೇಲೆ ಬಿಸಾಕಿ ಎಸ್ಕೇಪ್ ಆಗಿದ್ದರು.

ಶಿವಕುಮಾರ್​ ರುಂಡವನ್ನು ಚೆಂಡಾಡಿ ಭೀಕರ ಹತ್ಯೆ ಮಾಡಿ ರೈಲ್ವೆ ಹಳಿಯ ಮೇಲೆ ಎಸೆದು ಆತ್ಮಹತ್ಯೆ ಎಂದು ಬಿಂಬಿಸಲು ಹಂತಕರು ಮುಂದಾಗಿದ್ದರು. ಆದರೆ, ಅನುಮಾನಗೊಂಡು ತನಿಖೆ ನಡೆಸಿದ ರೈಲ್ವೆ ಪೊಲೀಸರಿಗೆ ಪ್ರಕರಣದ ಅಸಲಿಯತ್ತು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net