More

    ಶೀಘ್ರ ಚಿತ್ರಮಂದಿರಕ್ಕೆ ಶೋಕಿವಾಲ ಆಗಮನ; ಗಾಯಕರಾದ ಶ್ರೀಧರ್ ಸಂಭ್ರಮ್

    ಬೆಂಗಳೂರು: ಅಜೇಯ್ ರಾವ್, ಸಂಜನಾ ಆನಂದ್ ನಟಿಸಿರುವ ‘ಶೋಕಿವಾಲ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಚಾರ ಕೆಲಸಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದಲೂ ‘ಯೂ/ಎ’ ಪ್ರಮಾಣ ಪತ್ರ ಪಡೆದುಕೊಂಡಿರುವ ಈ ಚಿತ್ರ, ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.

    ಕಳೆದ ವರ್ಷವೇ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದ್ದ ‘ಶೋಕಿವಾಲ’, ಕಾರಣಾಂತರಗಳಿಂದ ಬಿಡುಗಡೆ ಆಗಿರಲಿಲ್ಲ. ಈ ಹಿಂದೆ ಹಲವು ಸಿನಿಮಾಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಜಾಕಿ, ‘ಶೋಕಿವಾಲ’ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಅಜೇಯ್ ರಾವ್ ಮತ್ತು ಸಂಜನಾ ಆನಂದ್ ಹಳ್ಳಿಗರಾಗಿ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ, ಗಿರೀಶ್ ಶಿವಣ್ಣ, ತಬಲಾ ನಾಣಿ, ಪ್ರಮೋದ್ ಶೆಟ್ಟಿ, ಚಂದನಾ, ಲಾಸ್ಯಾ ನಾಗರಾಜ್ ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ.

    45 ದಿನಗಳಲ್ಲಿ ಮಂಡ್ಯ, ಮೈಸೂರು, ತುಮಕೂರು, ಮಾಗಡಿ ಸೇರಿ ಹಲವೆಡೆ ಚಿತ್ರದ ಶೂಟಿಂಗ್ ನಡೆದಿದೆ. ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಡುಗಳಿಗೆ ಸಾಹಿತ್ಯ ಒದಗಿಸಿದರೆ, ಈ ಚಿತ್ರಕ್ಕೆ ಸಂಗೀತ ನೀಡುವುದರ ಜತೆ ಹಾಡೊಂದಕ್ಕೂ ಧ್ವನಿ ನೀಡಿದ್ದಾರೆ ಶ್ರೀಧರ್ ವಿ. ಸಂಭ್ರಮ್ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​ನಲ್ಲಿ ಟಿ.ಆರ್. ಚಂದ್ರಶೇಖರ್ ಈ ಚಿತ್ರ ನಿರ್ವಿುಸಿದ್ದಾರೆ.

    ಅಮ್ಮನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದವ ಬಾವಿಯಲ್ಲಿ ಶವವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts