More

    ಭಾರತದ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್​ ಸಿಂಗ್ ಸಮಾಜವಾದಿ ಪಕ್ಷ ಸೇರ್ಪಡೆ ನಂತ್ರ ಹೇಳಿದ್ದು ಹೀಗೆ…

    ಲಖನೌ: ಉತ್ತರ ಪ್ರದೇಶದ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಈಗಾಗಲೇ ಇಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಸಚಿವರು, ಶಾಸಕರು ಸೇರಿದಂತೆ ಕೆಲ ಬಿಜೆಪಿ ಧುರೀಣರು ತಮ್ಮ ಪಕ್ಷ ಬಿಟ್ಟು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಸೇರ್ಪಡೆಗೊಳ್ಳುತ್ತಿದ್ದರೆ, ಅದೇ ಇನ್ನೊಂದೆಡೆ ಬಿಎಸ್‌ಪಿ ಬಿಟ್ಟು ಬಿಜೆಪಿ ಸೇರುವವರೂ ಹೆಚ್ಚಾಗುತ್ತಿದ್ದಾರೆ. ಅಲ್ಲದೆ, ಹೊಸ ಮುಖಗಳು ಕೂಡ ತಮ್ಮಿಷ್ಟದ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ.

    ಇದೀಗ ಭಾರತದ ಅತ್ಯಂತ ಎತ್ತರದ ಮನುಷ್ಯ ಎಂದು ಹೇಳಲಾದ ಧರ್ಮೇಂದ್ರ ಪ್ರತಾಪ್​ ಸಿಂಗ್​ ಶನಿವಾರ ಸಮಾಜವಾದಿ ಪಕ್ಷ(ಎಸ್​ಪಿ)ಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದ ಪ್ರತಾಪಗಢ ಮೂಲದ ಸಿಂಗ್​, 2.4 ಮೀಟರ್​ (8 ಅಡಿ) ಎತ್ತರವಿದ್ದಾರೆ. ವಿಶ್ವದಾಖಲೆಗೆ ಕೇವಲ 11 ಸೆ.ಮಿ ಕಡಿಮೆ ಇದೆ.

    ಸಿಂಗ್​ ಎಸ್​ಪಿ ಸೇರ್ಪಡೆಯ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನರೇಶ್​ ಉತ್ತಮ್​ ಪಟೇಲ್​ ಘೋಷಣೆ ಮಾಡಿದರು. ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ನರೇಶ್​ ಹೇಳಿದ್ದಾರೆ.

    ಮಿ. ಸಿಂಗ್​ ಮಾತನಾಡಿ ನನ್ನ ಎತ್ತರದಿಂದ ನಾನು ಎಷ್ಟು ಸಮಸ್ಯೆ ಅನುಭವಿಸಿದ್ದೇನೋ ಅಷ್ಟೇ ಗಮನವನ್ನು ಸೆಳೆದಿದ್ದೇನೆ. ಜನರು ನನ್ನ ಜತೆಯಲ್ಲಿ ಫೋಟೋ ತೆಗೆಸಿಕೊಳ್ಳಲು ಬಯಸಿದಾಗ ನಾನು ಒಬ್ಬ ಸೆಲೆಬ್ರಿಟಿ ಎಂದು ಭಾಸವಾಗುತ್ತದೆ. ನಾನು ಕೂಡ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದೇನೆ. ಅದಕ್ಕೆ ಕಾರಣವೇ ನನ್ನ ಎತ್ತರ ಎಂದು ಸಂದರ್ಶನವೊಂದರಲ್ಲಿ ಸಿಂಗ್​ ತಿಳಿಸಿದ್ದಾರೆ.

    ಅಂದಹಾಗೆ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಫೆಬ್ರವರಿ 10 ರಿಂದ ಆರಂಭವಾಗಲಿದ್ದು, 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್​ 7ಕ್ಕೆ ಅಂತಿಮ ಹಂತದ ಮತದಾನ ನಡೆಯಲಿದ್ದು, ಮಾರ್ಚ್​ 10ಕ್ಕೆ ಫಲಿತಾಂಶ ಹೊರಬೀಳಲಿದೆ.

    ಈ ಬಾರಿಯ ಚುನಾವಣೆಯಲ್ಲಿ ಉತ್ತರ ಪ್ರದೇಶವು ಹಲವಾರು ಉನ್ನತ ಮಟ್ಟದ ಚೊಚ್ಚಲ ಸ್ಪರ್ಧಿಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಅಖಿಲೇಶ್ ಯಾದವ್ ಅವರು ತಮ್ಮ ಕುಟುಂಬದ ತವರು ನೆಲ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶನಿವಾರ ಘೋಷಿಸಿದ್ದಾರೆ.

    ಗೋರಖ್‌ಪುರದಿಂದ ಐದು ಬಾರಿ ಲೋಕಸಭಾ ಸಂಸದರಾಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ಷೇತ್ರದ ಒಂದು ಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆ ಸಾಕಷ್ಟು ಕುತೂಹಲಗಳಿಗೆ ಸಾಕ್ಷಿಯಾಗಿದ್ದು, ಮತದಾರನ ಒಲವು ಯಾರ ಕಡೆ ಇದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ವರ್ಷಕ್ಕೆ 5 ಬಾರಿ ವೇತನ ಹೆಚ್ಚಳ!: ನಮ್ಮ ಮೆಟ್ರೊ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ

    ಪತ್ನಿಯನ್ನು ಕೊಂದು ಠಾಣೆಗೆ ತೆರಳಿದ ಪತಿ ಶರಣಾಗುವ ಮುನ್ನ ಪೊಲೀಸರ ಮುಂದೆ ಹೇಳಿದ್ದಿಷ್ಟು…

    ಲಂಚ ಕೇಳಿದ-ಮಂಚಕ್ಕೂ ಕರೆದ ಇನ್​ಸ್ಪೆಕ್ಟರ್ ವಿರುದ್ಧ ಇನ್ನಿಬ್ಬರು ಮಹಿಳೆಯರಿಂದಲೂ ಆರೋಪ!

    ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್​ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts