

ಭುವನೇಶ್ವರ್: ಪವ್ಲಾಕ್ ಕಂಪನಿಯ ಸಂಸ್ಥಾಪಕ ಭಾರತೀಯ ಮೂಲದ ಅಮೆರಿಕ ಉದ್ಯಮಿ ಮನೀಶ್ ಸೇಥಿ ಅವರು ತಮ್ಮ ಕುರಿತಾದ ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಪ್ರತಿ ಬಾರಿ ಫೇಸ್ಬುಕ್ ನೋಡಿದಾಗ ತಮ್ಮ ಕೆನ್ನೆಗೆ ಬಾರಿಸಲು ಮಹಿಳೆಯೊಬ್ಬರನ್ನು ಸೇಥಿ ಅವರು ನೇಮಕ ಮಾಡಿಕೊಂಡಿದ್ದರಂತೆ.
ಸೇಥಿ ಅವರ ಪವ್ಲಾಕ್ ಕಂಪನಿಯು ಸುಲಭವಾಗಿ ಧರಿಸಬಹುದಾದಂತಹ ಸಾಧನಗಳನ್ನು ತಯಾರಿಸುತ್ತದೆ. ತಮ್ಮ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಯೋಗ ಒಂದನ್ನು ಮಾಡಿದ ಸೇಥಿ, 2012ರಲ್ಲಿ ಕ್ರೈಗ್ಸ್ಲೀಸ್ಟ್ ಕಂಪನಿಗೆ ತೆರಳಿದ್ದರು. ಕೆಲಸ ಸಮಯದಲ್ಲಿ ಫೇಸ್ಬುಕ್ಗೆ ಲಾಗಿನ್ ಆದರೆ ಕಪಾಳಕ್ಕೆ ಬಾರಿಸಿ, ಎಚ್ಚರಿಸುವಂತಹ ವ್ಯಕ್ತಿಯ ಹುಡುಕಾಟಕ್ಕಾಗಿ ಭೇಟಿ ನೀಡಿದ್ದರು.
ಭೇಟಿಯ ಬಳಿಕ ಯುವತಿಯೊಬ್ಬರನ್ನು ಆಯ್ಕೆ ಮಾಡಿದರು. ಕೆಲಸದ ಸಮಯದಲ್ಲಿ ಪ್ರತಿ ಬಾರಿ ಫೇಸ್ಬುಕ್ ಬಳಸಿದಾಗ ಕೆನ್ನೆಗೆ ಬಾರಿಸುವುದು ಆಕೆಯ ಕೆಲಸವಾಗಿತ್ತು. ಈ ವಿಚಾರವನ್ನು ತಮ್ಮ ಬ್ಲಾಗ್ ಮೂಲಕ ಸೇಥಿ ಅವರು ವಿವರಿಸಿದ್ದು, ಈ ಪ್ರಯೋಗದ ಫಲಿತಾಂಶ ನಿಜಕ್ಕೂ ಬೆರಗು ಮೂಡಿಸಿತು ಎಂದಿದ್ದಾರೆ.
ಗಂಟೆಗೆ 8 ಡಾಲರ್ (594 ರೂಪಾಯಿ)ನಂತೆ ಕಾರಾ ಎಂಬ ಮಹಿಳೆಯನ್ನು ನೇಮಕ ಮಾಡಿದೆ. ಕೆಲಸವನ್ನು ಮೈಮರೆತಾಗಲೆಲ್ಲ ಕೆನ್ನೆಗೆ ಬಾರಿಸಿ ಎಚ್ಚರಿಸುವುದು ಆಕೆಯ ಕೆಲಸವಾಗಿತ್ತು. ಇದರಿಂದ ನನ್ನ ಉತ್ಪಾದಕತೆ ರಾಕೇಟ್ ವೇಗದಲ್ಲಿ ಶೇ.98 ರಷ್ಟು ಬೆಳೆಯಿತು ಎಂದಿದ್ದಾರೆ.
ಸೇಥಿ ಅವರ ಕೆನ್ನೆಗೆ ಕಾರಾ ಬಾರಿಸುತ್ತಿರುವ ಫೋಟೋ ಇತ್ತೀಚೆಗೆ ಫೇಸ್ಬುಕ್ನಲ್ಲಿ ಅಪ್ಲೋಡ್ ಆಗಿದ್ದು, ಭಾರೀ ವೈರಲ್ ಆಗಿದೆ. ಟೆಸ್ಲಾ ಮತ್ತು ಸ್ಪೇಸ್ ಎಕ್ಷ್ ಕಂಪನಿಯ ಸಿಇಒ ಎಲನ್ ಮಸ್ಕ್ ವೈರಲ್ ಫೋಟೋಗೆ ಎಡರು ಫೈಯರ್ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)