More

    ಮದ್ವೆಯಾದ ಮೂರೇ ವಾರಕ್ಕೆ ಪತ್ನಿ ನಾಪತ್ತೆ: ಮನೆಯಲ್ಲಿದ್ದ ಮೊಬೈಲ್​ನಲ್ಲಿ ಅಡಗಿತ್ತು ಹೆಂಡತಿಯ ರಹಸ್ಯ!

    ನಲ್ಲಕುಂಟ: ಮದುವೆಯಾದ ಮೂರೇ ವಾರದಲ್ಲಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನ ನಲ್ಲಕುಂಟದಲ್ಲಿ ನಡೆದಿದೆ.

    ಅದಿಕ್ಮೆಟ್​ ಬಾಲಾಜಿನಗರದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಸಾಯಿಕುಮಾರ್​ ಮೇ 30ರಂದು ಸಿದ್ದಿಪೇಟೆಯ ತೌಗುಟಾ ಗ್ರಾಮದ ನಾಗ್ರಾಣಿ (20) ಎಂಬಾಕೆಯನ್ನು ಮದುವೆಯಾಗಿದ್ದಾನೆ. ಮಂಗಳವಾರ ಬೆಳಗ್ಗೆ ಎಂದಿನಂತೆ ಸಾಯಿಕುಮಾರ್​ ಕೆಲಸಕ್ಕೆಂದು ಮನೆಬಿಟ್ಟಿದ್ದಾನೆ. ಈ ವೇಳೆ ಮನೆಯಲ್ಲಿದ್ದ ನಾಗ್ರಾಣಿ, ಯಾರಿಗೂ ಹೇಳದೆ ಬಟ್ಟೆ, ಚಿನ್ನಾಭರಣದೊಂದಿಗೆ ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ.

    ನಾಗ್ರಾಣಿ ಮನೆ ಬಿಟ್ಟು ಹೋಗುವುದನ್ನು ನೋಡಿದ ಸ್ಥಳೀಯರೊಬ್ಬರು ಸಾಯಿಕುಮಾರ್​ಗೆ ಫೋನ್​ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಆತ ಮನೆಗೆ ಮರಳಿದ್ದಾನೆ. ಆದರೆ, ಪತ್ನಿ ಮನೆಯಲ್ಲಿರಲಿಲ್ಲ. ಬದಲಾಗಿ ಆಕೆಯ ಫೋನ್​ ಅಲ್ಲಿಯೇ ಬಿದ್ದಿತ್ತು. ಸ್ವಿಚ್​ ಆಫ್​ ಆಗಿದ್ದ ಫೋನ್​ ಅನ್ನು ಆನ್​ ಮಾಡಿದಾಗ ಆತನಿಗೆ ಶಾಕ್​ ಆಗಿದೆ.

    ನಾಗ್ರಾಣಿಗೆ ಆಕೆ ಬಾಯ್​ಫ್ರೆಂಡ್​ ಮಾಡಿದ್ದ ಮಸೇಜ್​ಗಳು ಫೋನ್​ನಲ್ಲಿತ್ತು. ಇದರಿಂದ ಆತಂಕಕ್ಕೀಡಾದ ಸಾಯಿಕುಮಾರ್​ ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಮದುವೆಗೂ ಮುನ್ನ ಪರಿಚಯವಿದ್ದ ಯುವಕನೊಂದಿಗೆ ನಾಗ್ರಾಣಿ ಮನೆಬಿಟ್ಟು ಹೋಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಗಂಡನ ಕಿರುಕುಳಕ್ಕೆ ಯುವ ವೈದ್ಯೆ ಸಾವು: 2 ವರ್ಷದ ಹಿಂದೆ ನಟನಿಗೆ ಲವ್​ ಲೆಟರ್​ ಬರೆದಿದ್ದ ವಿಸ್ಮಯ!

    ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಹತ್ಯೆ!

    28 ಬಾರಿ ಚಿನ್ನ ಗೆದ್ದೆ, ನನ್ನ ಈ ಸ್ಥಿತಿ ಬರಬಾರದು… ದೇಶದ ಮೊದಲ ಪ್ಯಾರಾಶೂಟರ್‌ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts