More

    ಈ ಮಹಿಳೆಗೆ ಬೆಳಗ್ಗೆಯಾದ್ರೆ ಬೇಕು ರಕ್ತ ಮಿಶ್ರಿತ ಕಾಫಿ…ಯಾಕೀ ಅಭ್ಯಾಸ?

    ಅಮೆರಿಕ: ಜಗತ್ತಿನಲ್ಲಿ ಅನೇಕ ತರಹದ ಜನರಿದ್ದಾರೆ. ಕೆಲವರ ವಿಚಿತ್ರ ಹವ್ಯಾಸಗಳು ಜನರನ್ನು ಬೆರಗುಗೊಳಿಸುತ್ತದೆ. ಇದೀಗ ಅಮೆರಿಕದ ಮಹಿಳೆಯೊಬ್ಬರು ಇಂತಹುದೇ ಒಂದು ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಹೌದು, ಸಾಮಾನ್ಯವಾಗಿ ನಾವೆಲ್ಲಾ ಬೆಳಗ್ಗೆ ಸಂಜೆಯಾಗುತ್ತಿದ್ದಂತೆ ಕಾಫಿ, ಟೀ ಕುಡಿಯಲು ಇಷ್ಟಪಡುತ್ತೇವೆ ಅಲ್ಲವೇ, ಆದರೆ ಇಲ್ಲೊಬ್ಬ ಮಹಿಳೆ ಮಾತ್ರ ಕಾಫಿ, ಟೀ, ಜ್ಯೂಸ್ ಯಾವುದೂ ಅಲ್ಲ…ರಕ್ತವನ್ನು ಕುಡಿಯಲು ಬಹಳ ಇಷ್ಟಪಡುತ್ತಾಳಂತೆ.

    ಅಮೆರಿಕದ ನಿವಾಸಿಯಾಗಿರುವ ಮಿಚೆಲ್ ಕಳೆದ 10 ವರ್ಷಗಳಿಂದ ಪ್ರಾಣಿಗಳ ಹಾಗೂ ಮನುಷ್ಯರ ರಕ್ತ ಕುಡಿಯುತ್ತಿದ್ದಾರೆ. ಈ ಅಭ್ಯಾಸವನ್ನು ಈಗ ಬಿಡಲಾರೆ ಎನ್ನುತ್ತಾರೆ. ಈಕೆ ಹಂದಿಗಳು, ಹಸುಗಳು ಮತ್ತು ಮನುಷ್ಯರ ರಕ್ತವನ್ನು ಕುಡಿಯುತ್ತಾರೆ.

    ಮಿಚೆಲ್ ವಯಸ್ಸು 40 ವರ್ಷ. ಕಳೆದ 10 ವರ್ಷಗಳಿಂದ ರಕ್ತ ಕುಡಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಮಹಿಳೆ ಪ್ರಾಣಿಗಳಷ್ಟೇ ಅಲ್ಲ ಮನುಷ್ಯರ ರಕ್ತವನ್ನೂ ಕುಡಿಯುತ್ತಾರೆ. ಮನುಷ್ಯರ ರಕ್ತವು ಪ್ರಾಣಿಗಳಿಗಿಂತ ಹೆಚ್ಚು ರುಚಿಯನ್ನು ಹೊಂದಿರುತ್ತದೆ ಎಂದು ಅವರು ಹೇಳುತ್ತಾರೆ.

    ಮಿಚೆಲ್ ಅವರು ಮೊದಲು ಹಸು ಮತ್ತು ಹಂದಿಯ ರಕ್ತವನ್ನು ಕುಡಿಯಲು ಪ್ರಾರಂಭಿಸಿದರಂತೆ. ನಂತರ ಅವರು ಮಾನವ ರಕ್ತವನ್ನು ಇಷ್ಟಪಡಲು ಪ್ರಾರಂಭಿಸಿದರು. ಮನುಷ್ಯನ ರಕ್ತವನ್ನು ಪಡೆಯುವುದು ಸುಲಭವಲ್ಲ ಎಂದು ಮಿಚೆಲ್ ಹೇಳುತ್ತಾರೆ. ಮಿಚೆಲ್ ಈ ಹವ್ಯಾಸ ಇಡೀ ಜಗತ್ತನ್ನೇ ಅಚ್ಚರಿಗೆ ದೂಡಿದೆ. ಆದರೆ ಮಿಚೆಲ್ ಗೆ ಈ ವಿಚಿತ್ರ ಹವ್ಯಾಸ ಸರ್ವೇಸಾಮಾನ್ಯ. ರಕ್ತವನ್ನು ಕಾಫಿಗೆ ಹಾಕಿಕೊಂಡು ಕುಡಿಯುತ್ತಾರೆ.

    ಮಿಚೆಲ್ 2013 ರಿಂದ ರಕ್ತವನ್ನು ಕುಡಿಯುತ್ತಿದ್ದಾರೆ. ಆದರೆ ಆಕೆ ತನ್ನನ್ನು ರಕ್ತಪಿಶಾಚಿ ಎಂದು ಪರಿಗಣಿಸಲು ನಿರಾಕರಿಸುತ್ತಾಳೆ. ನನ್ನ ಈ ಅಸಾಮಾನ್ಯ ಅಭ್ಯಾಸದಿಂದಾಗಿ ಅನೇಕ ಜನರು ನನ್ನನ್ನು ಹಾಗೆ ನಿರ್ಣಯಿಸುತ್ತಾರೆ ಎಂದು ಅವರು ಹೇಳುತ್ತಾರೆ. ಮೈ ಸ್ಟ್ರೇಂಜ್ ಅಡಿಕ್ಷನ್ ಎಂಬ ಟಿವಿ ಶೋನಲ್ಲಿ ಮಹಿಳೆ ತನ್ನ ಈ ಅಭ್ಯಾಸವನ್ನು ಬಹಿರಂಗಪಡಿಸಿದ್ದರು. ಒಂದು ದಿನದಲ್ಲಿ ಸುಮಾರು 1 ಲೀಟರ್ ರಕ್ತವನ್ನು ಕುಡಿಯಬಹುದು ಎಂದು ಶೋನಲ್ಲಿ ಹೇಳಿದ್ದರು. ತನಗೆ ರಕ್ತ ಕುಡಿಯುವ ಚಟವಾಗಿದ್ದು, ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಆರ್ಥಿಕ ಜಾತಕ: ಇಂದು ಲಕ್ಷ್ಮಿ ದೇವಿಯು 3 ರಾಶಿಚಕ್ರ ಚಿಹ್ನೆಗಳಿಗೆ ದಯೆ ತೋರುತ್ತಾಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts