ಕೆಲವೊಂದನ್ನು ತೋರಿಸಿ, ಕೆಲವೊಂದನ್ನು ಮುಚ್ಚಿಕೊಳ್ಳಬೇಕಾಗುತ್ತೆ! ಹಾಟ್​ ಬ್ಯೂಟಿ ಹೆಬ್ಬಾ ಪಟೇಲ್ ಬೋಲ್ಡ್​ ಹೇಳಿಕೆ​

Hebba Patel
Published on

ಹೈದರಾಬಾದ್​: ನಟ ಶರಣ್​ ಅಭಿನಯದ ಅಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನ ಗೆದ್ದ ಟಾಲಿವುಡ್​ ಬ್ಯೂಟಿ ಹೆಬ್ಬಾ ಪಟೇಲ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಂಚಿಕೊಂಡು ಅದಕ್ಕೆ ಹೆಬ್ಬಾ ನೀಡುವ ಅಡಿಬರಹ ನೆಟ್ಟಿಗರ ಹುಬ್ಬೇರಿಸಿದೆ.

ಮಾದಕ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಹೆಬ್ಬಾ ಪಟೇಲ್​, ಕೆಲವೊಂದನ್ನು ತೋರಿಸಬೇಕಾಗುತ್ತದೆ...ಕೆಲವೊಂದನ್ನು ಮುಚ್ಚಿಕೊಳ್ಳಬೇಕಾಗುತ್ತದೆ ಎಂದು ಅಡಿಬರಹ ನೀಡಿದ್ದಾರೆ. ಇದೀಗ ಫೋಟೋ ವೈರಲ್​ ಆಗಿದ್ದು, ಹೆಬ್ಬಾ ನೀಡಿರುವ ಅಡಿಬರಹ ನೋಡಿ ಜಾಲತಾಣಿಗರು ಹುಬ್ಬೇರಿಸಿದ್ದಾರೆ.

ಯಾವುದನ್ನು ಮರೆಮಾಚಬೇಡಿ ಎಂದು ಕೆಲವು ನೆಟ್ಟಿಗರು ಹೆಬ್ಬಾರನ್ನು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಒಳ್ಳೆಯ ಅಡಿಬರಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮಾದಕ ಫೋಟೋಗೆ 81 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕುಮಾರಿ 21ಎಫ್​ ಚಿತ್ರ ಹೆಬ್ಬಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಎಕ್ಕಡಿ ಪೊತಾವು ಚಿನ್ನವಾಡ ಮತ್ತು 24 ಕಿಸಸ್​ ಚಿತ್ರಗಳು ಹೆಬ್ಬಾರ ಸಿನಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಾದವು. ಸದ್ಯ ಡಿಗ್ಲಾಮರ್​ ಚಿತ್ರದ ಮೂಲಕ ಸಿನಿ ರಸಿಕರನ್ನು ರಂಜಿಸಲು ಹೆಬ್ಬಾ ತಯಾರಾಗಿದ್ದಾರೆ. ಒಡೆಲಾ ರೈಲ್ವೇ ಸ್ಟೇಷನ್​ ಹೆಸರಿನ ಕ್ರೈಂ, ಥ್ರಿಲ್ಲರ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net