ಹೊಂಬಾಳೆ ಸಂಸ್ಥೆಯಿಂದ ಮತ್ತೊಂದು ಹೊಸ ಸಿನಿಮಾ ಘೋಷಣೆ: ನೈಜ ಕತೆಗೆ ಸುಧಾ ಕೊಂಗಾರ ನಿರ್ದೇಶನ

Hombale Films
Published on

ಬೆಂಗಳೂರು: ಕೆಜಿಎಫ್​ 2 ಬಳಿಕ ಒಂದರ ಹಿಂದೆ ಒಂದರಂತೆ ಸಲಾರ್​, ರಾಘವೇಂದ್ರ ಸ್ಟೋರ್ಸ್​, ರಿಚರ್ಡ್​ ಆಂಟೋನಿ ಹಾಗೂ ಕಾಂತಾರ ಸಿನಿಮಾಗಳನ್ನು ಘೋಷಣೆ ಮಾಡಿದ್ದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​ ಇದೀಗ ಮತ್ತೊಂದು ಸಿನಿಮಾವನ್ನು ಘೋಷಣೆ ಮಾಡಿದೆ.

ಆಸ್ಕರ್​ ರೇಸಿನಲ್ಲಿದ್ದ ಯಶಸ್ವಿ ಚಿತ್ರ ಸೂರರೈ ಪೊಟ್ರು ನಿರ್ದೇಶಕಿ ಸುಧಾ ಕೊಂಗಾರ ಅವರ ಜತೆ ಮುಂದಿನ ಸಿನಿಮಾ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್​ ಅಧಿಕೃತ ಘೋಷಣೆ ಮಾಡಿದೆ. ಸೂರರೈ ಪೊಟ್ರು ಸಿನಿಮಾ ಮೂಲಕ ಕಾಲಿವುಡ್ ಸೂಪರ್​ ಸ್ಟಾರ್ ಸೂರ್ಯಗೆ ಸುಧಾ ಕೊಂಗಾರ ಅವರು ಮರುಜನ್ಮ ನೀಡಿದ್ದರು.

ಕ್ಯಾ.ಗೋಪಿನಾಥ್ ಅವರು ನೈಜ ಕಥೆ ಆಧರಿಸಿ ಸೂರರೈ ಪೊಟ್ರು ಸಿನಿಮಾವನ್ನು ಸುಧಾ ನಿರ್ದೇಶನ ಮಾಡಿದ್ದರು. ಇದೀಗ ಮತ್ತೊಮ್ಮೆ ನೈಜ ಕತೆ ಆಧರಿಸಿದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್​ ಅಡಿಯಲ್ಲಿ ಸುಧಾ ಕೊಂಗಾರ ಅವರು ಮಾಡಲಿದ್ದಾರೆ.

ಸದ್ಯ ಸಿನಿಮಾ ನಿರ್ಮಾಣ ಕುರಿತ ಸುದ್ದಿ ಅಧಿಕೃತವಾಗಿದ್ದು, ನಾಯಕ ಯಾರು ಎಂಬುದು ಇನ್ನು ಬಹಿರಂಗವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವು ತಿಳಿಯಲಿದೆ.

Koo App
𝐒𝐨𝐦𝐞 𝐭𝐫𝐮𝐞 𝐬𝐭𝐨𝐫𝐢𝐞𝐬 𝐝𝐞𝐬𝐞𝐫𝐯𝐞 𝐭𝐨 𝐛𝐞 𝐭𝐨𝐥𝐝, 𝐚𝐧𝐝 𝐭𝐨𝐥𝐝 𝐫𝐢𝐠𝐡𝐭. To a new beginning with a riveting story #SudhaKongara, based on true events.
View attached media content
-Hombale Films (@HombaleFilms)21 Apr 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net