ನಟ ಸುದೀಪ್ ಹೇಳಿಕೆ ನೂರಕ್ಕೆ ನೂರು ಸತ್ಯ: ಅಜಯ್​ ದೇವಗನ್​ರನ್ನು​ ತರಾಟೆಗೆ ತೆಗೆದುಕೊಂಡ ಪ್ರಶಾಂತ್​ ಸಂಬರಗಿ

Sambaragi
Published on

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು​ ಹೇಳಿರುವುದು ನೂರಕ್ಕೆ ನೂರು ಸತ್ಯ. ನಾವೆಲ್ಲರೂ ಸುದೀಪ್​ ಪರ ನಿಲ್ಲಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಅವರು ಹೇಳಿದರು.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಪ್ರಶಾಂತ್​ ಸಂಬರಗಿ, ಬಾಲಿವುಡ್ ನಟರಿಗೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಸುದೀಪ್ ಅವರ ಹೇಳಿಕೆಯನ್ನ ಬೇರೆ ತರಹ ಅರ್ಥೈಸುವ ಕೆಲಸವನ್ನು ಅಜಯ್ ದೇವಗನ್ ಮಾಡಿದ್ದಾರೆ. ಅವರಿಗೆ ಮಾಹಿತಿಯ ಕೊರತೆ ಇದೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಸಂವಿಧಾನದಲ್ಲಿ 14 ಭಾಷೆಗಳು ಅಧಿಕೃತ ಭಾಷೆಯಾಗಿವೆ. ಅದರಲ್ಲಿ ಹಿಂದಿ ಕೂಡ ಒಂದು ಎಂದರು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಪರವಾಗಿ ಕನ್ನಡಿಗರು ನಿಲ್ಲಬೇಕು. ಕನ್ನಡದ ಸಿನಿಮಾಗಳು ಈಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಆ ಹೊಟ್ಟೆ ಉರಿಗೆ ಬಾಲಿವುಡ್ ನವರು ಈ ತರಹ ಮಾಡ್ತಾಯಿದ್ದಾರೆ. ದಕ್ಷಿಣ ಭಾರತದ ಚಿತ್ರಗಳು ಇದೀಗ ಬಾಲಿವುಡ್​ಗೆ ಸೆಡ್ಡು ಹೊಡೆಯುತ್ತಿವೆ ಎನ್ನುವ ಮೂಲಕ ಸುದೀಪ್​ ಬೆಂಬಲಕ್ಕೆ ನಿಲ್ಲಲು ಕರೆ ನೀಡಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net