ಮುಂಬೈ: ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಆಗಾಗ ಮಾಲ್ಡೀವ್ಸ್ಗೆ ಭೇಟಿ ನೀಡುತ್ತಿರುತ್ತಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸುತ್ತಿರುತ್ತಾರೆ.
ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್ ಅಂದರೆ, ತಪ್ಪಾಗಲಾರದು. ಅದರಲ್ಲೂ ನಟಿಯರಿಗಂತೂ ಸ್ವರ್ಗವೇ ಸರಿ. ಕಡಲ ಕಿನಾರೆಯಲ್ಲಿ ಮೈಚಳಿ ಬಿಟ್ಟು ಮಿಂದೇಳುತ್ತಾರೆ. ಬಿಕಿನಿ ಧರಿಸಿ ಬೋಲ್ಡ್ ಅವತಾರದಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ.
ಪ್ರಪಂಚದ ಎಲ್ಲ ಪ್ರವಾಸಿ ತಾಣಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಸೆಲೆಬ್ರಿಟಿಗಳು ಹೋಗುವುದು ಮಾತ್ರ ಮಾಲ್ಡೀವ್ಸ್ಗೆ. ಇನ್ನು ನಟಿ ಮಣಿಯರ ಮಾಲ್ಡೀವ್ಸ್ ಪ್ರವಾಸದ ಹಿಂದೆ ಒಂದು ರಹಸ್ಯವಿದೆ ಎಂದು ಹೇಳಲಾಗುತ್ತಿದೆ. ಅದೇನೆಂದರೆ, ನಟಿಯರು ಈ ಒಂದು ಒಪ್ಪಂದಕ್ಕೆ ಒಪ್ಪಿದರೆ, ಅವರಿಗೆ ಎಲ್ಲವು ಉಚಿತವಾಗಿ ಸಿಗಲಿದೆಯಂತೆ. ಅಲ್ಲಿನ ರೆಸಾರ್ಟ್, ಊಟ ಸೇರಿದಂತೆ ಎಲ್ಲ ಸೌಲಭ್ಯವು ಉಚಿತವಾಗಿಯೇ ಸಿಗಲಿದೆ ಎಂದು ಹೇಳಲಾಗಿದೆ.
ದಿಶಾ ಪಟಾಣಿ, ರಾಕುಲ್ ಪ್ರೀತ್, ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್, ಕನ್ನಡದ ಪ್ರಣೀತಾ ಸುಭಾಷ್, ವೇದಿಕಾ, ಮಾಳವಿಕಾ ಮೋಹನನ್, ಅನುಷ್ಕಾ ಶರ್ಮಾ, ತಮ್ಮನ್ನಾ, ಪೂಜಾ ಹೆಗ್ಡೆ, ರೆಬಾ ಮೋನಿಕಾ ಜಾನ್, ಆಲಿಯಾ ಭಟ್, ಶಾನ್ವಿ ಶ್ರೀವಾತ್ಸವ, ಸೋನಾಕ್ಷಿ ಸಿನ್ಹಾ ಸೇರಿದಂತೆ ಬಹುತೇಕ ನಟಿಯರು ಮಾಲ್ಡೀವ್ಸ್ನಲ್ಲಿ ಮೋಜು ಮಸ್ತಿ ಮಾಡಿ ಬಂದಿದ್ದಾರೆ. ಅಲ್ಲಿ ಸೆರೆಹಿಡಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂಗಳಲ್ಲಿ ಹಂಚಿಕೊಂಡಿದ್ದಾರೆ.
ನಟಿಯರಿಗೆ ಮಾಲ್ಡೀವ್ಸ್ ಉಚಿತ ಪ್ರವಾಸದ ಸೌಲಭ್ಯವಿದೆ ಎನ್ನಲಾಗುತ್ತಿದೆ. ನಟಿಯರು ಬಿಕಿನಿ ಉಡುಗೆಯಲ್ಲಿ ಪೋಸ್ ನೀಡಿ, ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ, ಅದಕ್ಕೆ ಪ್ರತಿಯಾಗಿ, ನಟಿಯರಿಗೆ ಮಾಲ್ಡೀವ್ಸ್ನಲ್ಲಿ ಉಚಿತ ಪ್ರವಾಸ ದೊರೆಯುತ್ತಿದೆಯಂತೆ. ಇದೊಂದು ರೀತಿಯ ಪಾವತಿಸಿದ ಪ್ರಚಾರದ ಭಾಗವಾಗಿದೆ. ನಟಿಯರ ಮೂಲಕ ಮಾಲ್ಡೀವ್ಸ್ ತನ್ನ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತಿದೆ. (ಏಜೆನ್ಸೀಸ್)
ಕಾಂಗ್ರೆಸ್ ನಾಯಕಿ ನವ್ಯಶ್ರೀ ಪ್ರಕರಣಕ್ಕೆ ಟ್ವಿಸ್ಟ್: ಬಂಧನದ ಭೀತಿಯಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ!
ಮೂರನೇ ಬಾರಿ ರೆಪೋ ದರ ಏರಿಸಿದ RBI: ಬ್ಯಾಂಕ್ ಸಾಲಗಾರರಿಗೆ ಇಎಂಐ ಮತ್ತಷ್ಟು ದುಬಾರಿ
ಕೈದಿ 2ನೇ ಭಾಗದಲ್ಲಿ ದಿಲ್ಲಿ ಎದುರು ಅಬ್ಬರಿಸಲಿದ್ದಾರಾ ರೋಲೆಕ್ಸ್ ಸರ್? ನಟ ಸೂರ್ಯ ಉತ್ತರ ಹೀಗಿತ್ತು….