More

    ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ನಟ ವಿಶಾಲ್​? ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಈ ಒಂದು ಟ್ವೀಟ್​!

    ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ವಿಶಾಲ್ ಅವರು​ ತಮಿಳುನಾಡು ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ತಮ್ಮ ಸಿನಿ ಮಾರ್ಕೆಟ್ ವಿಸ್ತರಿಸಿಕೊಂಡಿದ್ದಾರೆ. ಅವರ ಅನೇಕ ಚಿತ್ರಗಳು ಬಾಲಿವುಡ್​ಗೆ ಡಬ್​​ ಆಗಿದೆ. ಸದ್ಯ ವಿಶಾಲ್​ ಅವರು ಲಾಠಿ ಹೆಸರಿನ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ​ ಈ ಚಿತ್ರವನ್ನು ನಟರಾದ ರಮಣ ಮತ್ತು ನಂದ ಎಂಬುವರು ನಿರ್ಮಾಣ ಮಾಡುತ್ತಿದ್ದು, ಸುನೈನಾ ವಿಶಾಲ್​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

    ಅಂದಹಾಗೆ ತಮಿಳುನಾಡಿನ ನಾಡಿಗರ ಸಂಗಮ ಚುನಾವಣೆಯಲ್ಲಿ ವಿಶಾಲ್​ ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನೂ ಗೆದ್ದುಕೊಂಡಿದ್ದಾರೆ. ಇದೆಲ್ಲ ಹೀಗ್ಯಾಕೆ ಅಂತೀರಾ… ವಿಷಯ ಇದಲ್ಲ, ಬೇರೇನೆ ಇದೆ. ಅದೇನೆಂದರೆ ವಿಶಾಲ್​ ವೈಯಕ್ತಿಕ ವಿಚಾರ ಭಾರಿ ಸುದ್ದಿಯಾಗಿದೆ. ಹೌದು, ವಿಶಾಲ್​ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ಚರ್ಚೆ ಜಾಲತಾಣದಲ್ಲಿ ಜೋರಾಗಿದೆ. ಅದಕ್ಕೆ ಕಾರಣವೂ ಇದೆ. ಆ ಕಾರಣ ಏನೆಂದು ತಿಳಿಯಲು ಮುಂದೆ ಓದಿ….

    ವಿಶಾಲ್​ ಅವರು ಮತ್ತೊಮ್ಮೆ ಅಂಕಲ್​ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟ್ವಿಟರ್​ನಲ್ಲಿ ಬರೆದುಕೊಂಡಿರುವ ವಿಶಾಲ್​, ಸರಿ ನಾನು ಇನ್ನೇನು ಕೇಳಬಹುದು. ಮತ್ತೊಮ್ಮೆ ಅಂಕಲ್​ ಆಗುತ್ತಿರುವುದು ಖುಷಿಯ ವಿಚಾರ. ನನ್ನ ಪ್ರೀತಿಯ ಸಹೋದರಿ ಐಶುಗೆ ಇಂದು ರಾಜಕುಮಾರಿ ಜನಿಸಿದ್ದಾಳೆ. ದಂಪತಿ ಮತ್ತು ಹೆಣ್ಣು ಮಗುವಿಗೆ ದೇವರು ಆಶೀರ್ವದಿಸಲಿ ಎಂದಿದ್ದಾರೆ. ಇಷ್ಟೇ ಆಗಿದ್ದರೆ, ಏನು ಆಗುತ್ತಿರಲಿಲ್ಲ. ಆದರೆ, ಟ್ವೀಟ್​ನ ಕೊನೆಯಲ್ಲಿ “ಇನ್ಶಾ ಅಲ್ಲಾಹ್” ದೇವರ ಆಶೀರ್ವಾದ ಇರಲಿ ಎಂದು ಬರೆದಿದ್ದು, ಇದೇ ವಿಚಾರ ಇದೀಗ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

    ಅನೇಕರು ವಿಶಾಲ್​ ಟ್ವೀಟ್​ಗೆ ಶುಭಕೋರುತ್ತಿದ್ದರೆ, ಇನ್ನು ಕೆಲವರು ವಿಶಾಲ್​ ಉಲ್ಲೇಖಿಸಿರುವ ಇನ್ಶಾ ಅಲ್ಲಾಹ್ ಪದವನ್ನು ಗುರಿಯಾಗಿಸಿದ್ದಾರೆ. ನಟ ವಿಶಾಲ್​ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ಚರ್ಚೆಗಳು ಜೋರಾಗಿದೆ. ಅಲ್ಲದೆ, ಇದೇ ವಿಚಾರಕ್ಕೆ ಕೆಲವು ವರದಿಗಳು ಸಹ ಆಗಿದೆ.

    ಇನ್ನು ವಿಶಾಲ್ ಅವರು ಯಾವಾಗಲೂ ತಮ್ಮ ಟ್ವೀಟ್‌ನಲ್ಲಿ ದೇವರನ್ನು ಉಲ್ಲೇಖಿಸಲು ಹೆಸರುವಾಸಿಯಾಗಿದ್ದಾರೆ ಮತ್ತು ಅವರಿಗೆ ಹತ್ತಿರವಿರುವ ಕೆಲವು ಆಪ್ತ ಮೂಲಗಳ ಪ್ರಕಾರ ಅವರು ಎಲ್ಲಾ ಧರ್ಮಗಳನ್ನು ಒಂದೇ ಮಟ್ಟದಲ್ಲಿ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ. ಆದರೂ ಅವರು ಮಾಡಿರುವ ಟ್ವೀಟ್​ ಒಂದು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ. (ಏಜೆನ್ಸೀಸ್​)

    ರಕ್ತದಿಂದ ಬರೆದಿರುವ ಕಥೆ ಇದು…

    ದೇಶದಲ್ಲಿ ಈ ವರ್ಷವೂ ಹರ್ಷಧಾರೆ; ಸತತ 4ನೇ ಬಾರಿ ವಾಡಿಕೆ ಮುಂಗಾರು, ಹವಾಮಾನ ಇಲಾಖೆ ಭವಿಷ್ಯ

    ಮಹಿಳಾ ಸಹೋದ್ಯೋಗಿಗಳ ಜತೆ ಅಸಭ್ಯ ವರ್ತನೆ; ಕಾಲೇಜು ಆವರಣದಲ್ಲೇ ಉಪನ್ಯಾಸಕನಿಗೆ ಧರ್ಮದೇಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts