ಹಾರ್ದಿಕ್​ ಪಾಂಡ್ಯ ಬಳಿಯಿರುವ ದುಬಾರಿ ವಾಚ್​ಗಳ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!

Watches
Published on

ನವದೆಹಲಿ: ಸೆಲೆಬ್ರಿಟಿಗಳದ್ದು ದುಬಾರಿ ಜೀವನ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಚಿಕ್ಕ ವಾಚ್​ನಿಂದ ಹಿಡಿದು ದೊಡ್ಡ ಕಾರುಗಳವರೆಗೂ ಸೆಲೆಬ್ರಿಟಿಗಳು ಬಳಸುವ ವಸ್ತುಗಳೆಲ್ಲ ತುಂಬಾ ದುಬಾರಿಯಾಗಿರುತ್ತವೆ. ಒಮ್ಮೆಮ್ಮೆ ಅವರು ಬಳಸುವ ವಸ್ತುಗಳ ಬೆಲೆ ತಿಳಿದು ಹುಬ್ಬೇರಿಸಿರುತ್ತೀವೆ. ಇದೀಗ ಅಂಥದ್ದೇ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ.

ಟೀಮ್​ ಇಂಡಿಯಾದ ಆಟಗಾರ ಹಾರ್ದಿಕ್​ ಪಾಂಡ್ಯ ಬಳಿ ಬೆಲೆ ಬಾಳುವ ವಸ್ತುಗಳಿವೆ. ಹಾರ್ದಿಕ್ ಬಳಿ ಇರುವ ವಸ್ತುಗಳ ಸಂಗ್ರಹಣೆಯಲ್ಲಿ ಅತ್ಯಂತ ದುಬಾರಿಯೆಂದರೆ ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ವಾಚ್​. ಇದು 32 ಬ್ಯಾಗೆಟ್-ಕಟ್ ಪಚ್ಚೆಗಳನ್ನು ಹೊಂದಿದ್ದು, ಸಂಪೂರ್ಣವಾಗಿ ಪ್ಲಾಟಿನಂ ಆಗಿದೆ. ಇದರ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ.

ಪಾಂಡ್ಯ ಬಳಿ ಮತ್ತೊಂದು ದುಬಾರಿ ವಾಚ್​ ಇರುವುದು ಅವರು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿರುವ ಫೋಟೋದಿಂದ ತಿಳಿಯುತ್ತದೆ. ಅದರ ಹೆಸರು ಪಾಟೆಕ್ ಫಿಲಿಪ್ ನಾಟಿಲಸ್ 5712R. ಇದರಲ್ಲಿ ವಜ್ರದ ಡಿಸೈನ್​ ಇದ್ದು, ಇದರ ಬೆಲೆ 1.65 ಕೋಟಿ ರೂಪಾಯಿ.

ಹಾರ್ದಿಕ್ ಸ್ಪಷ್ಟವಾಗಿ ಪಾಟೆಕ್ ಫಿಲಿಪ್ ವಾಚ್‌ಗಳ ಸರಣಿಯನ್ನೇ ಹೊಂದಿದ್ದಾರೆ ಎಂಬುದು ಅವರು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿರುವ ಫೋಟೋಗಳಲ್ಲಿ ಸ್ಪಷ್ಟವಾಗಿದೆ. ಪಾಟೆಕ್ ಫಿಲಿಪ್ ನಾಟಿಲಸ್ ಹೆಸರಿನ ವಾಚ್​ನಲ್ಲಿ 18 ಕ್ಯಾರೆಟ್​ ಚಿನ್ನದ ಡಯಲ್ ಪ್ಲೇಟ್‌ನಲ್ಲಿ 255 ವಜ್ರಗಳು ಆವರಿಸಿದೆ. ಇದರ ಬೆಲೆ 2.7 ಕೋಟಿ ರೂಪಾಯಿ.

ರೋಲೆಕ್ಸ್ ಆಯ್ಸ್ಟರ್ ಪರ್ಪೆಚುವಲ್ ಡೇಟೋನಾ ಕಾಸ್ಮೊಗ್ರಾಫ್ ಹೆಸರಿನ 1 ಕೋಟಿ ರೂ. ಬೆಲೆ ಬಾಳುವ ವಾಚ್​ ಹಾಗೂ 38 ಲಕ್ಷ ರೂ. ಬೆಲೆ ಬಾಳುವ ಆಡೆಮಾರ್ಸ್ ಪಿಗುಯೆಟ್ ಓಕ್ ಸೆಲ್ಫ್‌ವಿನ್‌ಫಿಂಗ್ ಕ್ರೋನೋಗ್ರಾಫ್ ರೋಸ್ ಗೋಲ್ಡ್ ವಾಚ್​ ಸೇರಿದಂತೆ ಎಲ್ಲ ವಾಚ್​ಗಳು ಸೇರಿ 10 ಕೋಟಿ ರೂಪಾಯಿ ಮೌಲ್ಯದ ವಾಚ್​ ಹಾರ್ದಿಕ್​ ಪಾಂಡ್ಯರ ಬಳಿ ಇದೆಯಂತೆ.

ಇನ್ನು ವಾಚ್​ ವಿಚಾರದಲ್ಲಿ ಹಾರ್ದಿಕ್​ ಪಾಂಡ್ಯ ವಿವಾದಕ್ಕೂ ಗುರಿಯಾಗಿದ್ದಾರೆ. ಹಿಂದೊಮ್ಮೆ ದುಬೈನಿಂದ ಮರಳಿದಾಗ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್​ ಅಧಿಕಾರಿಗಳು ಹಾರ್ದಿಕ್​ ಪಾಂಡ್ಯರಿಂದ ವಶಕ್ಕೆ ಪಡೆದಿದ್ದರು. ಟಿ20 ವಿಶ್ವಕಪ್​ ಟೂರ್ನಿ ಮುಗಿದ ಬಳಿಕ ಹಾರ್ದಿಕ್​ ಪಾಂಡ್ಯ ದುಬೈನಿಂದ ತವರಿಗೆ ವಾಪಾಸ್ಸಾಗಿದ್ದರು. ಈ ವೇಳೆ ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ನಡೆಸಿದಾಗ 5 ಕೋಟಿ ರೂ. ಮೌಲ್ಯದ ಎರಡು ವಾಚ್​ಗಳು ಪತ್ತೆಯಾಗಿದ್ದವು. ಅದರ ಬಿಲ್​ ಕೇಳಿದ್ದಕ್ಕೆ ಇಲ್ಲ ಎಂಬ ಉತ್ತರ ಪಾಂಡ್ಯರಿಂದ ಬಂದಿದೆ. ಹೀಗಾಗಿ ವಾಚ್​ಗಳನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ ಎಂದು ವರದಿಯಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net