More

    ಯೂಕ್ರೇನ್​ ಮೇಲೆ ದಾಳಿ… ರಷ್ಯಾದ ಟಿವಿ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್​ಗಳಿಗೆ​ ಬಿಗ್​ ಶಾಕ್​ ಕೊಟ್ಟ ಗೂಗಲ್​​!

    ಕ್ಯಾಲಿಪೋರ್ನಿಯಾ: ಯೂಕ್ರೇನ್​ ವಿರುದ್ಧ ರಕ್ತಸಿಕ್ತ ದಾಳಿ ಮುಂದುವರಿಸಿರುವ ರಷ್ಯಾಗೆ ಟೆಕ್​ ದೈತ್ಯ​ ಗೂಗಲ್​ ಕಂಪನಿ ಬಿಗ್​ ಶಾಕ್​ ನೀಡಿದೆ. ರಷ್ಯಾ ಒಡೆತನದ ಮಾಧ್ಯಮಗಳು ಮತ್ತು ಇತರೆ ರಷ್ಯಾ ಚಾನೆಲ್​ಗಳ ಜಾಹೀರಾತು ಹಣದ ಮೇಲೆ ನಿರ್ಬಂಧ ವಿಧಿಸಿದೆ. ರಷ್ಯಾ ವೆಬ್​ಸೈಟ್​ಗಳು, ಆ್ಯಪ್​ ಮತ್ತು ಯೂಟ್ಯೂಬ್​ ವಿಡಿಯೋಗಳ ಮಾನಿಟೈಜೇಷನ್​ ಅನ್ನು ಗೂಗಲ್​ ಬ್ಯಾನ್​ ಮಾಡಿದೆ.

    ಯೂಕ್ರೇನ್​ ಮೇಲೆ ರಷ್ಯಾ ದಾಳಿಯ ಅಸಾಧಾರಣ ಸನ್ನಿವೇಶವನ್ನು ಉಲ್ಲೇಖಿಸಿರುವ ಗೂಗಲ್​ನ ಯೂಟ್ಯೂಬ್​ ಘಟಕವು ಯೂಟ್ಯೂಬ್​ನಲ್ಲಿ ಹಣಗಳಿಸುವ ಹಲವಾರು ರಷ್ಯಾ ಚಾನಲ್‌ಗಳ ಮಾನಿಟೈಜೇಷನ್ ಸಾಮರ್ಥ್ಯವನ್ನು ವಿರಾಮಗೊಳಿಸುತ್ತಿರುವುದಾಗಿ ಹೇಳಿದೆ. ರಷ್ಯಾ ಮೇಲೆ ಅಮೆರಿಕ, ಬ್ರಿಟನ್​, ಜರ್ಮನಿ ಮತ್ತು ಯುರೋಪಿಯನ್​ ಒಕ್ಕೂಟ ಸೇರಿದಂತೆ ಅನೇಕ ರಾಷ್ಟ್ರಗಳು ಈಗಾಗಲೇ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಇದೀಗ ಗೂಗಲ್​ ನಿಷೇಧದಿಂದ ರಷ್ಯಾ ಮಾಧ್ಯಮ ಮತ್ತು ಡಿಜಿಟಲ್​ ಮಾಧ್ಯಮಗಳ ಮೇಲೆ ಭಾರಿ ಹೊಡೆತ ಬೀಳಲಿದೆ. ಏಕೆಂದರೆ, ಜಾಹಿರಾತು ನಿಯೋಜನೆಯನ್ನು ಹೆಚ್ಚಾಗಿ ಯೂಟ್ಯೂಬ್​ ನಿಯಂತ್ರಿಸುತ್ತದೆ.

    ಸ್ವಂತ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಆದಾಯವನ್ನು ಗಳಿಸಲು ಜಾಹೀರಾತು ತಂತ್ರಜ್ಞಾನವನ್ನು ಬಳಸುವುದರಿಂದ ರಷ್ಯಾದ ಒಡೆತನದ ಮಾಧ್ಯಮಗಳನ್ನು ಸಹ ನಿರ್ಬಂಧಿಸಿರುವುದಾಗಿ ಗೂಗಲ್ ಹೇಳಿದೆ. ಹೀಗಾಗಿ ಯೂಟ್ಯೂಬ್​ ಮತ್ತು ಗೂಗಲ್​ ಎರಡು ಕಡೆಯಿಂದಲೂ ರಷ್ಯಾ ಮಾಧ್ಯಮಗಳಿಗೆ ಮಾನಿಟೈಜೇಷನ್​ ಬ್ಯಾನ್​ ಮಾಡಲಾಗಿದೆ.

    ಗೂಗಲ್​ನ ಈ ನಿರ್ಧಾರದಿಂದ ರಷ್ಯಾದ ಮಾಧ್ಯಮಗಳು ಗೂಗಲ್​ ಟೂಲ್ಸ್​ ಮೂಲಕ ಜಾಹಿರಾತ ಖರೀದಿಸಲು ಆಗುವುದಿಲ್ಲ ಅಥವಾ ಸರ್ಚಿಂಗ್​ ಮತ್ತು ಜಿಮೇಲ್​ನಂತಹ ಗೂಗಲ್​ ಸೇವೆಗಳಲ್ಲಿ ಜಾಹೀರಾತುಗಳನ್ನು ಇರಿಸಲು ಸಾಧ್ಯವಿಲ್ಲ ಎಂದು ಗುಗಲ್​ ವಕ್ತಾರ ಮೈಕೆಲ್​ ಅಸಿಮ್ಯಾನ್​ ಹೇಳಿದ್ದಾರೆ. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಅಗತ್ಯವಿದ್ದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅಸಿಮನ್ ಹೇಳಿದರು.

    ಯುರೋಪಿಯನ್​ ಒಕ್ಕೂಟ ಕೂಡ ರಷ್ಯಾ ಮಾಧ್ಯಮಗಳ ಮೇಲೆ ನಿರ್ಬಂಧವನ್ನು ಹೇರಿದೆ. ಕೇವಲ ರಷ್ಯಾದ ತುತ್ತಾರಿಯಾಗಿರುವ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಯೂಟ್ಯೂಬ್​ನಲ್ಲಿ ಕೂಡ ರಷ್ಯಾದ ವಿಡಿಯೋಗಳು ಕಡಿಮೆ ಶಿಫಾರಸು ಹೊಂದಿರಲಿದೆ ಎಂದು ವಕ್ತಾರ ಫರ್ಶಾದ್​ ಶಾಡ್ಲೂ ಹೇಳಿದ್ದಾರೆ. ಯೂಕ್ರೇನಿಯನ್​ ಸರ್ಕಾರದ ಮನವಿ ಮೇರೆಗೆ ಅನೇಕ ರಷ್ಯಾ ಚಾನೆಲ್​ಗಳು ಇನ್ಮುಂದೆ ಯೂಕ್ರೇನ್​ನಲ್ಲಿ ಹೆಚ್ಚು ದಿನ ಇರುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಜಗನ್ vs ಪವನ್​: ಭೀಮ್ಲಾ ನಾಯಕ್​ ಚಿತ್ರಕ್ಕೆ ಆಂಧ್ರದಲ್ಲಿ ಉಂಟಾದ ನಷ್ಟದ ಮೊತ್ತ ಹೀಗಿದೆ…

    ಕಿಚ್ಚ ಸುದೀಪ್​ ಕೈಯಲ್ಲಿದೆ ದುಬಾರಿ ವಾಚ್​: ಇದರ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ!

    ಬೋಲ್ಡ್ ಅಂಡ್ ಬ್ಯೂಟಿಫುಲ್ ಬೆಡಗಿ…ಇದುವರೆಗೂ ನೀವು ನೋಡಿರದ ನಟಿ ವೇದಿಕಾರ ಹಾಟ್ ಅವತಾರವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts