ಬಿಜೆಟ್​ ಮಂಡನೆಗೂ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ವಿವಿಧ ನಗರಗಳ ಇಂದಿನ ದರ ಹೀಗಿದೆ....

gold
Published on

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆಗೆ ಒಂದು ಗಂಟೆ ಬಾಕಿ ಇರುವಾಗಲೇ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಕೆಜಿಗೆ 1000 ರೂಪಾಯಿಯಷ್ಟು ಚಿನ್ನದ ದರ ಇಳಿಕೆಯಾಗಿದ್ದು, ಚಿನ್ನ ಪ್ರಿಯರಿಗೆ ಇದು ಶುಭ ಸುದ್ದಿಯಾಗಿದೆ.

ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್​ ಚಿನ್ನದ ಬೆಲೆ 44,900 ರೂಪಾಯಿ ಇದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದರೆ, ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ದೆಹಲಿಯಲ್ಲಿ ಚಿನ್ನದ ದರ 44,900 ರೂ. ಇದ್ದರೆ, ಮುಂಬೈನಲ್ಲಿಯೂ ಅಷ್ಟೇ ಇದೆ.

ವಿವಿಧ ನಗರಗಳಲ್ಲಿರುವ ಇಂದಿನ ಚಿನ್ನದ ಬೆಲೆ ಈ ಕೆಳಕಂಡಂತಿದೆ....

  • ಚೆನ್ನೈ : 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,270 ರೂ.
  • ಮುಂಬೈ: 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 44,900 ರೂ.
  • ದೆಹಲಿ: 10 ಗ್ರಾಂ 22-ಕ್ಯಾರೆಟ್ ಚಿನ್ನಕ್ಕೆ 44,900 ರೂ.
  • ಕೋಲ್ಕತ್ತ: 10 ಗ್ರಾಂ 22-ಕ್ಯಾರೆಟ್ ಚಿನ್ನಕ್ಕೆ 44,900 ರೂ.
  • ಬೆಂಗಳೂರು: 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 44,900 ರೂ.
  • ಹೈದರಾಬಾದ್ : 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 44,900 ರೂ.
  • ಪುಣೆ : 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 44,850 ರೂ.
  • ಅಹಮದಾಬಾದ್ : 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 45,000 ರೂ.
  • ಚಂಡೀಗಢ: 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 45,600 ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net