

ನವದೆಹಲಿ: ನೀವು ಮನೆಯಲ್ಲೇ ಕುಳಿತು 30 ಸಾವಿರ ರೂ. ಸಂಪಾದಿಸಬೇಕೆ? ಹಾಗದರೆ, ನಿಮಗಿದು ಸುವರ್ಣಾವಕಾಶವೇ ಸರಿ. ನಿಮ್ಮ ಬಳಿ ಕೇವಲ 5 ರೂಪಾಯಿ ನೋಟಿದ್ದರೆ ಇದು ಸಾಧ್ಯವಾಗಲಿದೆ. ನಿಮಗಿದು ಅಚ್ಚರಿ ಎನಿಸಿದರೂ ಖಂಡಿತವಾಗಿಯು ಇದು ಸತ್ಯವಾಗಿದೆ. ನಿಮ್ಮ ಬಳಿ ವಿಶೇಷವಾದ 5 ರೂಪಾಯಿ ನೋಟಿದ್ದರೆ ಈ ರೀತಿ ಮಾಡಿ.
ಐದು ರೂಪಾಯಿ ನೋಟಿನ ಹಿಂಭಾಗದಲ್ಲಿ ಟ್ರ್ಯಾಕ್ಟರ್ ಚಿತ್ರವಿದ್ದರೆ, ಅದನ್ನು ವಿನಿಮಯ ಮಾಡಿ 30 ಸಾವಿರ ರೂಪಾಯಿ ಗಳಿಸಬಹುದು. ಇದನ್ನು ಹೊರತುಪಡಿಸಿದರೆ, ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ನೋಟಿನಲ್ಲಿ 786 ಸಂಖ್ಯೆಯನ್ನು ಹೊಂದಿದ್ದರೆ ಅದನ್ನು ವಿನಿಮಯ ಮಾಡಿ ಹಣ ಪಡೆಯಬಹುದಾಗಿದೆ.
ನಿಮ್ಮ ಬಳಿ ಈ ರೀತಿಯ ನೋಟುಗಳಿದ್ದಲ್ಲಿ ಕಾಯಿನ್ ಬಜಾರ್ ಡಾಟ್ ಕಮ್ (coinbazzar.com) ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ಬಳಿಯಿರುವ ನೋಟಿಗೆ ಎಷ್ಟು ಹಣ ಸಿಗುತ್ತದೆ ಎಂದು ಪರಿಶೀಲಿಸಬಹುದಾಗಿದೆ. ಈ ವೆಬ್ಸೈಟ್ನಲ್ಲಿ ಹಳೆಯ ಮತ್ತು ವಿರಳವಾದ ನೋಟುಗಳನ್ನು ಮಾರಾಟ ಮಾಡುತ್ತಾರೆ.
ಇತ್ತೀಚೆಗಷ್ಟೇ ವೆಬ್ಸೈಟ್ನಿಂದ ಜಾಹಿರಾತುವೊಂದು ಪ್ರಕಟವಾಗಿದೆ. ತಮ್ಮ ವೆಬ್ಸೈಟ್ ಮಾನದಂಡಗಳಿಗೆ ಅನುಗುಣವಾದ ಒಂದು ರೂಪಾಯಿ ನೋಟಿದ್ದರೆ, ಅದನ್ನು ವಿನಿಮಯ ಮಾಡಿ 45 ಸಾವಿರದವರೆಗೂ ಹಣ ಪಡೆದುಕೊಳ್ಳಬಹುದಾಗಿ. ನಿಮ್ಮ ಹಳೆಯ ನೋಟುಗಳನ್ನು ಪರಿಶೀಲಿಸುವ ಮುನ್ನ ವೆಬ್ಸೈಟ್ನಲ್ಲಿರುವ ಷರತ್ತುಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.
1977-1979ರ ನಡುವಿನ ಒಂದು ರೂಪಾಯಿ ಹಳೆಯ ನೋಟನ್ನು ವೆಬ್ಸೈಟ್ನಲ್ಲಿ ಕೇಳಲಾಗಿದೆ. ಹಳೆಯ ಒಂದು ರೂಪಾಯಿ ನೋಟಿನಲ್ಲಿ 1977-1979ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಅಧಿಕಾರಾವಧಿಯಲ್ಲಿ ಸೇವೆ ಸಲ್ಲಿಸಿದ ಮಾಜಿ ಪ್ರಧಾನ ಕಾರ್ಯದರ್ಶಿ, ಹಣಕಾಸು ಸಚಿವಾಲಯದ ಹಿರುಭಾಯ್ ಎಂ ಪಟೇಲ್ ಅವರ ಸಹಿ ಇರಬೇಕು ಎಂಬ ಮಾನದಂಡವಿದೆ.
1917ರ ನವೆಂಬರ್ 30ರಂದು ಬ್ರಿಟಿಷ್ ರಾಜ್ ಅಡಿಯಲ್ಲಿ ಒಂದು ರೂಪಾಯಿ ನೋಟನ್ನು ಪರಿಚಯಿಸಲಾಯಿತು. ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ರೂಪಾಯಿ ನೋಟು ಮುದ್ರಿಸುವುದನ್ನು ನಿಲ್ಲಿಸಿದ್ದರೂ, ಇನ್ನೂ ಒಂದು ರೂಪಾಯಿ ನೋಟು 45,000 ರೂ ಗಳಿಸುವ ಸಾಮರ್ಥ್ಯವನ್ನು ಹೊಂದಿದೆ. (ಏಜೆನ್ಸೀಸ್)