ಕೋಟಿಗೊಬ್ಬ-3 ಚಿತ್ರದ ಶೋ ರದ್ದಾದ ಬೆನ್ನಲ್ಲೇ ಚಿತ್ರತಂಡಕ್ಕೆ ಕಾಡುತ್ತಿದೆ ಮತ್ತೊಂದು ಭಯ..!

Kotigobba 3 - Final
Published on

ಬೆಂಗಳೂರು: ನಟ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಇಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ವಿತರಕರು ಮತ್ತು ನಿರ್ಮಾಪಕರ ನಡುವಿನ ಆರ್ಥಿಕ ವ್ಯವಹಾರದ ಸಮಸ್ಯೆಯಿಂದ ಇಂದು ಚಿತ್ರ ಬಿಡುಗಡೆಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಸೂರಪ್ಪ ಬಾಬು, ವಿತರಕರು ಮಾಡಿದ ಮೋಸದಿಂದ ಇಂದು ಚಿತ್ರ ತೆರೆಗೆ ಬರಲು ಸಾಧ್ಯವಾಗಲಿಲ್ಲ. ನಾಳೆ ಬೆಳಗ್ಗೆ ಖಂಡಿತ ಸಿನಿಮಾ ಬಿಡುಗಡೆಯಾಗಲಿದೆ ಎಂದಿದ್ದಾರೆ. ಅಲ್ಲದೆ, ನಟ ಸುದೀಪ್​ ಕೂಡ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಇನ್ನು ಸಿನಿಮಾ ಬಿಡುಗಡೆಯಾಗದಿರುವ ಬಗ್ಗೆ ರಾಜ್ಯಾದ್ಯಂತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮುಂಗಡವಾಗಿ ಟಿಕೆಟ್​ ಬುಕ್​ ಮಾಡಿದ್ದವರಿಗೆ ಭಾರೀ ನಿರಾಶೆ ಆಗಿದೆ. ಆದರೂ ನಾಳೆ ಚಿತ್ರ ತೆರೆಗೆ ಬರುವ ಬಗ್ಗೆ ನಿರೀಕ್ಷೆ ಇರುವುದರಿಂದ ಆಕ್ರೋಶವಿದ್ದರೂ ತಾಳ್ಮೆಯಿಂದಿದ್ದಾರೆ.

ಇದೀಗ ಸಿನಿಮಾ ತಂಡಕ್ಕೆ ಹೊಸ ತಲೆನೋವು ಶುರುವಾಗಿದೆ. ಅದೇನೆಂದರೆ ಕೋಟಿಗೊಬ್ಬ 3 ಚಿತ್ರ ಪೈರಸಿ ಆಗುವ ಭಯ ಕಾಡುತ್ತಿದೆ. ಹೀಗಾಗಿ ಅಭಿಮಾನಿಗಳು ಪೈರಸಿ ಕಾಪಿಗಳ ಹುಡುಕಾಟ ನಡೆಸುತ್ತಿದ್ದಾರೆ. ಮೂವೀರೂಲ್ಜ್​ ಮತ್ತು ತಮಿಳು ರಾಕರ್ಸ್​ ಸಿನಿಮಾ ಲೀಕ್​ ಮಾಡುವ ಬಗ್ಗೆ ಅಭಿಮಾನಿಗಳಿಗೆ ಆತಂಕ ಉಂಟಾಗಿದ್ದು, ಪೈರಸಿ ಕಾಪಿಗಳನ್ನು ನೋಡಬೇಡಿ ಎಂದು ಅಭಿಮಾನಿಗಳು ಮನವಿ ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಕೋಟಿಗೊಬ್ಬ 3 ಪೈರಸಿ ಲಿಂಕ್​ಗಳೇನಾದರೂ ಸಿಕ್ಕಿದರೆ, ಅವುಗಳನ್ನು ಸೈಬರ್​ ಕ್ರೈಂಗೆ ವರದಿ ಮಾಡುವಂತೆ ಅಭಿಮಾನಿಗಳು ಕೋರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net