More

    ‘ಕೋಟಿಗೊಬ್ಬ’ನ ಕಾಣದೇ ರಾಜ್ಯದೆಲ್ಲೆಡೆ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು- ಆತ್ಮಹತ್ಯೆ ಬೆದರಿಕೆ!

    ಬೆಂಗಳೂರು: ನಟ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರ ಇಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ಕಡೆಗಳಲ್ಲಿ ಮಾರ್ನಿಂಗ್‌ ಷೋ ಕ್ಯಾನ್ಸಲ್‌ ಆಗಿದ್ದರೆ,ಇನ್ನು ಹಲವೆಡೆ ತಾಂತ್ರಿಕ ಕಾರಣಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ.

    ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಅಭಿಮಾನಿಗಳಿಂದ ಭಾರಿ ಪ್ರತಿಭಟನೆ ಶುರುವಾಗಿದೆ. ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ವಿಷೇಶ ಪ್ರದರ್ಶನ ನೋಡಲು ಸುದೀಪ್‌ ಬೆಳ್ಳಂಬೆಳಗ್ಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. 7 ಗಂಟೆಗೆ ಆರಂಭವಾಗಬೇಕಿದ್ದ ಚಿತ್ರ ಪ್ರದರ್ಶನ ರದ್ದಾಗಿ 10 ಗಂಟೆಯಾದರೂ ಶುರುವಾಗದ ಕಾರಣ, ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

    ಈ ನಡುವೆಯೇ ಮಧ್ಯಾಹ್ನದ ಒಳಗೆ ಕೋಟಿಗೊಬ್ಬ 3 ಸಿನಿಮಾ ರೀಲಿಸ್ ಆಗದೆ ಇದ್ದರೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗುವುದಾಗಿ ಚಿಕ್ಕೋಡಿಯ ಸುದೀಪ್‌ ಅಭಿಮಾನಿಯೊಬ್ಬ ಚಿತ್ರಮಂದಿರ ಬಳಿ ಹೇಳಿಕೆ ನೀಡಿದ್ದಾರೆ. ಚಿತ್ರಮಂದಿರದ ಎದುರೇ ಆತ್ಮಹತ್ಯೆಗೆ ಶರಣಾಗುವದಾಗಿ ಹೇಳಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಕಿಚ್ಚನ ಸಿನಿಮಾಗಾಗಿ ಕಾಯ್ತಾ ಇದ್ದೇವೆ. ಆದರೆ ಇನ್ನೂ ಶುರುವಾಗಿಲ್ಲ. ಇದರಿಂದ ನೋವಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

    ರಾಮನಗರದ ಶ್ರೀರಾಮ ಚಿತ್ರಮಂದಿರದ ಬಳಿಯೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಮೊದಲ ಶೋ ಪ್ರದರ್ಶನವಾಗದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಗಲಾಟೆ ಶುರುವಾಗಿದೆ. ಬೆಳಗಾವಿಯ ಚಿಕ್ಕೋಡಿಯ ಅಂಕಲಿ ಗ್ರಾಮದ ಮಯೂರ ಚಿತ್ರಮಂದಿರದ ಎದುರು ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರದ ಗೇಟ್ ತೆಗೆಯದೇ ಇರುವುದು ಹಾಗೂ ಟಿಕೆಟ್ ನೀಡದ ಕಾರಣ ಅಭಿಮಾನಿಗಳ ಆಕ್ರೋಶ ಕಾರಣವಾಗಿದೆ. ಇದೇ ರೀತಿ ವಿವಿಧ ಜಿಲ್ಲೆಗಳ ಸ್ಥಿತಿಯೂ ನಿರ್ಮಾಣವಾಗಿದ್ದು, ಮಾರ್ನಿಂಗ್‌ ಷೋ ಇಲ್ಲದೇ, ಮಧ್ಯಾಹ್ನವಾದರೂ ಚಿತ್ರ ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

    ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ, ಅವಳ ಹಳ್ಳಿಯ ವೆಂಕಟೇಶ್ವರ ಥಿಯೇಟರ್ ಸೇರಿದಂತೆ ಬೆಂಗಳೂರಿನ ಹಲವು ಚಿತ್ರ ಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಆಯೋಜನೆಗೊಂಡಿದ್ದ ಮಾರ್ನಿಂಗ್ ಷೋ ರದ್ದಾಗಿದೆ.

    ವಿಟಮಿನ್‌ಗಾಗಿ ಕುಡಿದ ಸೋರೆಕಾಯಿ ಜ್ಯೂಸ್ ವಿಷವಾಯ್ತು! ಐಸಿಯುನಲ್ಲಿ ನಟಿ: ಜನರಿಗೆ ನೀಡಿದ್ದಾರೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts