More

    ವಿಟಮಿನ್‌ಗಾಗಿ ಕುಡಿದ ಸೋರೆಕಾಯಿ ಜ್ಯೂಸ್ ವಿಷವಾಯ್ತು! ಐಸಿಯುನಲ್ಲಿ ನಟಿ: ಜನರಿಗೆ ನೀಡಿದ್ದಾರೆ ಎಚ್ಚರಿಕೆ

    ಮುಂಬೈ: ದೇಹಕ್ಕೆ ವಿಟಮಿನ್‌ ಸಿಗಲು, ಫಿಟ್‌ಗಾಗಿ, ತೆಳ್ಳಗೆ ಮಾಡಲು… ಹೀಗೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ತರಕಾರಿಗಳನ್ನು, ಅವುಗಳ ಜ್ಯೂಸ್‌ಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಇದಕ್ಕಾಗಿ ಗೂಗಲ್‌ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆ ಏನಿಲ್ಲ.

    ಆದರೆ ವಿಟಮಿನ್‌ ಸಿಗುತ್ತದೆ ಎನ್ನುವ ಕಾರಣಕ್ಕೆ ಸೋರೆಕಾಯಿ ಜ್ಯೂಸ್‌ ಕುಡಿದ ನಟಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು, ಸುದ್ದಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ. ಬರಹಗಾರ್ತಿ, ನಟಿ ಮತ್ತು ಸಿನಿಮಾ ನಿರ್ಮಾಪಕಿ ತಾಹಿರಾ ಕಶ್ಯಪ್ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಜನರಿಗಾಗಿ ಈ ವಿಷಯವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಜ್ಯೂಸ್‌ ತಮಗೆ ಹೇಗೆ ವಿಷವಾಯ್ತು ಎಂದು ವಿವರಿಸಿದ್ದಾರೆ.

    ಸೋರೆಕಾಯಿ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದೇ. ಇದನ್ನು ನಾನು ಈ ಹಿಂದೆಯೂ ಸೇವಿಸಿದ್ದೇನೆ. ಪ್ರತಿದಿನ ಅರಶಿನ ಮತ್ತು ಆಮ್ಲಾದೊಂದಿಗೆ ಸೋರೆಕಾಯಿಯ ಜ್ಯೂಸ್ ಕುಡಿಯುತ್ತಿದ್ದೇನೆ. ಇದು ತುಂಬಾ ಒಳ್ಳೆಯದು ಕೂಡ. ಆದರೆ ಒಂದೇ ಒಂದು ಎಡವಟ್ಟಿನಿಂದ ನನಗೆ ಹೀಗೆ ಆಯಿತು. ಈ ಬಾರಿ ಸೇವಿಸಿದಾಗ ನನಗೆ 17 ಬಾರಿ ವಾಂತಿಯಾಯಿತು. ರಕ್ತ ಪರೀಕ್ಷೆ ಮಾಡಿಸಿದಾಗ ರಕ್ತದೊತ್ತಡ 40 ಕ್ಕೆ ಇಳಿದಿತ್ತು. ನಂತರ ವೈದ್ಯರಿಗೆ ವಿಷಯ ತಿಳಿಸಿದಾಗ ಈ ರೀತಿ ನೀವು ಜ್ಯೂಸ್‌ ಕುಡಿದದ್ದು ಸೆನೈಡ್‌ಗೆ ಸಮ ಎಂದರು. ಇದರಿಂದ ನಾನು ಗಾಬರಿಯಾದೆ.

    ಕೊನೆಗೆ ವಿಷಯ ತಿಳಿದದ್ದು ಇಷ್ಟೇ. ಸೋರೆಕಾಯಿ ಜ್ಯೂಸ್‌ನಲ್ಲಿ ವಿಟಮಿನ್‌ ಇರುವುದು ಹಾಗೂ ಇದರ ಸೇವನೆಯಿಂದ ತೂಕ ಇಳಿಯುವುದು ಎಲ್ಲವೂ ನಿಜ. ಆದರೆ ಒಂದೇ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ, ಸೋರೆಕಾಯಿಯನ್ನು ಮೊದಲು ತಿಂದು ನೋಡಬೇಕು. ಇದು ತುಂಬಾ ಕಹಿಯಾಗಿದ್ದರೆ ದಯವಿಟ್ಟು ಯಾವುದೋ ಕಾರಣಕ್ಕೂ ಅದರ ಜ್ಯೂಸ್‌ ಮಾಡುವ ಸಾಹಸ ಮಾಡಬೇಡಿ. ಏಕೆಂದರೆ ಕಹಿ ಸೋರೆಕಾಯಿ ಜ್ಯೂಸ್ ಕುಡಿಯುವುದು ವಿಷಕ್ಕೆ ಸಮ.

    ಇದು ಗೊತ್ತಿಲ್ಲದೇ ನಾನು ಕುಡಿದಿದ್ದೆ. ವಾಂತಿಯಿಂದ ಎರಡು ದಿನ ಐಸಿಯುನಲ್ಲಿ ಇರಬೇಕಾಯಿತು. ಈ ರೀತಿ ಕಹಿ ಸೋರೆಕಾಯಿಯ ಜ್ಯೂಸ್‌ ಕುಡಿಯುವುದರಿಂದ ಬಹುತೇಕರು ಅನಾರೋಗ್ಯಪೀಡಿತರಾಗಿದ್ದಾರೆ ಎಂದಿರುವ ನಟಿ, ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

    ಚಿಂದಿ ಆಯುವವನಿಂದಾಗಿ ಮರುಜನ್ಮ ಪಡೆದ ಬೆಂಗಳೂರು ಮಕ್ಕಳು! ಸಾಧನೆ ಮಾಡಲು ಮನೆಬಿಟ್ಟವರು ಸಿಕ್ಕಿದ್ದೇ ರೋಚಕ

    ‘ನಾನು ಅಮ್ಮ ಆಗ್ಬೇಕು, ಶಕುಂತಲಾ ಬೇಗ ಮುಗಿಸಿ’ ಎಂದಿದ್ರು ಸಮಂತಾ: ಡಿವೋರ್ಸ್‌ಗೆ ನಿರ್ಮಾಪಕಿ ಅಚ್ಚರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts