More

    ಸೋಲಾರ್ ಡೆಕಾಥ್ಲಾನ್ ಇಂಡಿಯಾ (SDI) 2023-24 ಚಾಲೆಂಜ್ ವಿಜೇತರ ಘೋಷಣೆ

    ಮೈಸೂರು : ನಗರದ ಇನ್ನೊಸಿಸ್ ಆವರಣದಲ್ಲಿ ಶನಿವಾರ ನಡೆದ ‘ಸೋಲಾರ್ ಡೆಕಾಥ್ಲಾನ್ ಇಂಡಿಯಾ- 2023, 24’ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಎನರ್ಜಿ ಎಫಿಷಿಯೆನ್ಸಿ ಸಂಸ್ಥೆಯ ಅಧ್ಯಕ್ಷ ಸತೀಶ್ ಕುಮಾರ್ ಪ್ರಶಸ್ತಿ ವಿತರಿಸಿದರು.

    ವಿಜೇತರ ವಿವರ: ಮಲ್ಟಿ ಫ್ಯಾಮಿಲಿ ಹೌಸಿಂಗ್ ವಿಭಾಗದಲ್ಲಿ ಎನ್‌ಎಂಐಎಂಎಸ್ ಆರ್ಕಿಟೆಕ್ಟರ್‌ ಮತ್ತು ಎಂಜಿನಿಯರಿಂಗ್ ಕಾಲೇಜು ಪ್ರಥಮ, ಡಿವೈ ಪಾಟೀಲ್ ವಿಶ್ವವಿದ್ಯಾಲಯದ ತಂಡ -ದ್ವಿತೀಯ, ಶೈಕ್ಷಣಿಕ ಕಟ್ಟಡ ವಿಭಾಗದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜು ಪ್ರಥಮ, ಆರ್‌ವಿ ಕಾಲೇಜು ದ್ವಿತೀಯ, ಕಚೇರಿ ಕಟ್ಟಡ ವಿಭಾಗದಲ್ಲಿ ಬಿಎಂಎಸ್ ಕಾಲೇಜು ಪ್ರಥಮ, ಐಇಎಸ್‌ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

    ಸಮುದಾಯದ ಸ್ಥಿತಿ ಸುಧಾರಣೆಯ ಯೋಜನೆ ವಿಭಾಗದಲ್ಲಿ ಎಸ್‌ಎಂಇಎಫ್ ಕಾಲೇಜು ಪ್ರಥಮ, ಎಂಬಿಎಸ್ ಕಾಲೇಜು, ಸಿಇಪಿಟಿ ಕಾಲೇಜು, ದೆಹಲಿ ವಿಶ್ವವಿದ್ಯಾಲಯ ದ್ವಿತೀಯ, ಕಟ್ಟಡ ಕಾರ್ಮಿಕರ ವಸತಿ ವಿಭಾಗದಲ್ಲಿ ಎಸ್‌ಎಂಇಎಫ್ ಕಾಲೇಜು, ವಿಶ್ವಕರ್ಮ ಕಾಲೇಜು ದ್ವಿತೀಯ, ರೆಸಿಡೆನ್ಶಿಯಲ್ ಕೂಲಿಂಗ್ ರೆಟ್ರೋಫಿಟ್ ವಿಭಾಗದಲ್ಲಿ ಐಇಎಸ್‌ ಕಾಲೇಜು, ದ್ವಾರಕಾದಾಸ್‌ ಜೆ. ಸಾಂಫ್ಟಿ ಕಾಲೇಜು, ಯುನೈಟೆಡ್ ವರ್ಲ್ಡ್ ಕಾಲೇಜು ಪ್ರಥಮ, ನಾಗಪುರದ ವಿಶ್ವೇಶ್ವರಯ್ಯ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು.

    ಐಐಎಚ್‌ಎಸ್‌ ನಿರ್ದೇಶಕ ಅರೋಮರ್ ರೆವಿ, ಐಯುಎಸ್ ಎಸ್‌ಟಿಎಫ್ ನಿರ್ದೇಶಕಿ ಡಾ.ನಿಶಾ, ಸೋಲಾರ್ ಡೆಕಾಫ್ಲಾನ್ ಇಂಡಿಯಾದ ನಿರ್ದೇಶಕ ಪ್ರಸಾದ್ ವೈದ್ಯ, ಇನ್ನೊಸಿಸ್ ಗ್ಲೋಬಲ್ ಮುಖ್ಯಸ್ಥ ಅರುಣಾ ನ್ಯೂಟನ್, ಗುರುಪ್ರಕಾಶ್ ಶಾಸ್ತ್ರಿ, ಡಾ.ಚೈತಾಲಿ ಭಟ್ಟಾಚಾರ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts