More

    ಮುಗಿಯದ ‘ಕೋಟಿಗೊಬ್ಬ’ ವಿವಾದ: ಕೊಲೆ ಬೆದರಿಕೆ ದೂರು ದಾಖಲು- ನಿಖಿಲ್‌ ಕುಮಾರಸ್ವಾಮಿ ಹೇಳಿದ್ದೇನು?

    ಬೆಂಗಳೂರು: ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ಸುದೀಪ್‌ ಅಭಿನಯದ ಕೋಟಿಗೊಬ್ಬ-3 ತಾಂತ್ರಿಕ ದೋಷದಿಂದ ಅಂದುಕೊಂಡ ದಿನ ರಿಲೀಸ್‌ ಆಗಿರಲಿಲ್ಲ. ಈ ಬಗ್ಗೆ ರಾಜ್ಯಾದ್ಯಂತ ಸುದೀಪ್‌ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಮಾರನೆಯ ದಿನ ಅದರ ರಿಲೀಸ್‌ ಆಯಿತು ನಿಜ. ಆದರೆ ಇದರ ವಿವಾದ ಮಾತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಮೊದಲಿಗೆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ತಮಗೆ ಅನ್ಯಾಯ ಆಗಿರುವ ಬಗ್ಗೆ ಹೇಳಿದ್ದರು. ಆದರೆ ಇದೀಗ ಫಿಲಂ ವಿತರಕರು ಸೂರಪ್ಪ ಬಾಬು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಕುರಿತು ಚಿತ್ರ ವಿತರಕ ಖಾಜಾಪೀರ್‌ ಚಿತ್ರದುರ್ಗದಲ್ಲಿ ದೂರು ದಾಖಲು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸೂರಪ್ಪ ಬಾಬು ಅವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

    ದೂರಿನಲ್ಲಿ ಏನಿದೆ? ಕೋಟಿಗೊಬ್ಬ-3 ಚಿತ್ರ ವಿತರಣೆಗಾಗಿ 1 ಕೋಟಿ 90 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೆವು. ಅವರು ಮುಂಗಡವಾಗಿ 60 ಲಕ್ಷ ಹಣ ಪಡೆದಿದ್ದರು. ಆದರೆ ನಮಗೆ ಚಿತ್ರವೂ ನೀಡದೆ ಇತ್ತ ಹಣವೂ ನೀಡದೆ ಧಮ್ಕಿ ಹಾಕುತ್ತಿದ್ದಾ ಎಂದು ಖಾಜಾಪೀರ್‌ ಆರೋಪಿಸಿದ್ದಾರೆ.

    ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಈ ಚಿತ್ರವನ್ನು ವಿತರಣೆ ಮಾಡಬೇಕಿತ್ತು. ಇದಕ್ಕಾಗಿ ಕುಮಾರ್ ಫಿಲಂಸ್ ಮೂಲಕ ಡಿಸ್ಟ್ರಿಬ್ಯೂಷನ್ ಪಡೆಯಲಾಗಿತ್ತು. ಮಾರ್ಚ್ 31ಕ್ಕೆ ಕಾಳಿಂಗ ಹ್ಯಾಡ್ಸ್ ಮೂಲಕ ರಾಂಬಾಬು ಫಿಲ್ಮ್ಸ್‌ಗೆ ಹಣ ಕೂಡ ಸಂದಾಯವಾಗಿದೆ. 45 ಲಕ್ಷ ರೂಪಾಯಿಗಳನ್ನು ಚೆಕ್‌ ಮೂಲಕ ಹಾಗೂ ಬಾಕಿ ಹಣವನ್ನು ನಗದಿನ ರೂಪದಲ್ಲಿ ನೀಡಲಾಗಿದೆ. ಈ ವೇಳೆ ಉಳಿದ ಹಣ ನೀಡದ ಕಾರಣ ಸಿನಿಮಾ ರಿಲೀಸ್ ಲೈಸನ್ಸ್ ಕೊಟ್ಟಿರಲಿಲ್ಲ ಎಂದು ಆರೋಪಿಸಿದ್ದಾರೆ.

    ಸಿನಿಮಾ ಬಿಡುಗಡೆ ಆಗದೇ ಇರುವುದಕ್ಕೆ ಸುದೀಪ್ ಅಭಿಮಾನಿಗಳನ್ನು ಎತ್ತಿಕಟ್ಟಿ ನಮಗೆ ಬೆದರಿಸಿದ್ದಾರೆ. ನನ್ನ ಹಣ ವಾಪಸ್ ನೀಡುವಂತೆ ಕೇಳು ಮೂಲಕ ಸೂರಪ್ಪಬಾಬು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿರುವ ಅವರು ರಕ್ಷಣೆ ಕೋರಿ ಎಂದು ಚಿತ್ರದುರ್ಗ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್‌ ದಾಖಲಾಗಿದೆ.

    ಇದರ ನಡುವೆ, ಚಿತ್ರನಟ ನಿಖಿಲ್‌ ಕುಮಾರಸ್ವಾಮಿ ಪ್ರವೇಶ ಮಾಡಿದ್ದು, ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಅಡ್ಡಿ ಉಂಟಾಗಿರುವ ವಿಚಾರ ಆರೋಗ್ಯಕರವಲ್ಲ. ಇದರಿಂದ ಕನ್ನಡ ಇಂಡಸ್ಟ್ರಿ ಮರ್ಯಾದೆ ಹೋಗುತ್ತದೆ. ಯಾವುದೇ ವಿವಾದ ಇದ್ದರೂ ಒಳಗಡೆ ಕುಳಿತು ಬಗೆಹರಿಸಿಕೊಳ್ಳಬೇಕು. ನಮ್ಮ ಚಿತ್ರರಂಗದ ಮರ್ಯಾದೆ ಹೊರಗಡೆಯವರು ತೆಗೆಯುವಂತಾಗಬಾರದು ಎಂದಿದ್ದಾರೆ.

    ಕೈ, ಕಾಲು ಕತ್ತರಿಸಿ ದಲಿತ ರೈತನ ಹತ್ಯೆ ಮಾಡಿದ ಹಿಂದಿದೆ ಭಯಾನಕ ಕಥೆ! ಕುಟುಂಬಸ್ಥರು ಹೇಳಿದ್ದೇನು?

    ಭೀಕರ ಅಪಘಾತ- ಹೂವಿನ ಜತೆಯೇ ಹೆಣವಾದ ತುಮಕೂರಿನ ವ್ಯಾಪಾರಸ್ಥರು! ಮನಸ್ಸು ಬದಲಿಸಿದ್ದೇ ಸಾವಿಗೆ ಕಾರಣವಾಯಿತಾ?

    VIDEO: ‘ಹೆಂಗಸರೇ, ಒಂದು ಪೆಗ್‌ ಹಾಕಿ ಮಲಗಿ ನೋಡಿ…’ ಎಂದು ಸಲಹೆ ಕೊಟ್ರು ಮಹಿಳಾ ಕಲ್ಯಾಣ ಸಚಿವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts