More

  ಸಾವಿತ್ರಿಬಾಯಿ ಫುಲೇ ಚಿತ್ರ ನಾಳೆ ಬಿಡುಗಡೆ

  ಬಾಗಲಕೋಟೆ: ಶೈಕ್ಷಣಿಕ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೇ ಅವರ ಚಲನಚಿತ್ರ ಜು.31ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಅಂದು ಸಂಜೆ 6 ಗಂಟೆಗೆ ನವನಗರದ ಚಂದನ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವ ಚಿತ್ರ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಉಚಿತ ಪ್ರವೇಶ ನೀಡಲಾಗಿದೆ ಎಂದು ನಿರ್ಮಾಪಕ ಘನಶ್ಯಾಮ ಭಾಂಡಗೆ ಹೇಳಿದರು.

  ನವನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.31ರಂದು ಬಾಗಲಕೋಟೆಯ ಚಂದನ ಚಿತ್ರಮಂದಿರದಲ್ಲಿ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳುವ ಎರಡನೇ ಶೋ ನೋಡಲು ಬರುವ ಜನರ ಟಿಕೆಟ್‌ಹಣವನ್ನು ಉದ್ಯಮಿ ಮಲ್ಲಿಕಾರ್ಜುನ ಚರಂತಿಮಠ ಅವರು ಭರಿಸಲಿದ್ದಾರೆ ಎಂದು ತಿಳಿಸಿದರು.

  ಹುನಗುಂದದಲ್ಲಿ ಒಂದು ಪ್ರದರ್ಶನದ ಹಣವನ್ನು ಎಸ್.ಆರ್. ನವಲಿಹಿರೇಮಠ ಅವರು ಭರಿಸಲಿದ್ದಾರೆ. ಇದೇ ರೀತಿ ಮುಧೋಳ, ಬಾದಾಮಿ, ಜಮಖಂಡಿ ಹೀಗೆ ಪ್ರತಿಯೊಂದು ಕಡೆ ಉದ್ಯಮಿಗಳು ರಾಜಕೀಯ ಮುಖಂಡರು ಸಾವಿತ್ರಿಬಾಯಿ ಫುಲೆ ಚಿತ್ರ ವೀಕ್ಷಿಸಲು ಬರುವ ಜನರ ಟಿಕೆಟ್ ಹಣವನ್ನು ಅವರೇ ಭರಿಸಲಿದ್ದು, ಚಿತ್ರವನ್ನು ನೋಡಲು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ನಾನು ನಿರ್ಮಿಸುತ್ತಿರುವ ‘ಕೆಂಗುಲಾಬಿ’ ಚಿತ್ರವೂ ಸಹ ಶೀಘ್ರದಲ್ಲೇ ತೆರೆಗೆ ಬರಲಿದೆ ಎಂದು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts