More

    VIDEO: ‘ಹೆಂಗಸರೇ, ಒಂದು ಪೆಗ್‌ ಹಾಕಿ ಮಲಗಿ ನೋಡಿ…’ ಎಂದು ಸಲಹೆ ಕೊಟ್ರು ಮಹಿಳಾ ಕಲ್ಯಾಣ ಸಚಿವೆ!

    ರಾಯ್‌ಪುರ: ಮಹಿಳೆಯರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಒತ್ತಡ ನಿವಾರಣೆಗೆ ಮಹಿಳೆಯರು ಒಂದು ಪೆಗ್‌ ಹಾಕಿಕೊಂಡು ಮಲಗಬೇಕಿದೆ ಎಂದಿದ್ದಾರೆ ಛತ್ತೀಸಗಢದ ಕಾಂಗ್ರೆಸ್‌ ಸಚಿವೆ ಅನಿಲಾ ಭೇಡಿಯಾ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಇವರು, ಮಹಿಳೆಯರು ಕೂಡ ಕುಡಿಯಬೇಕಿದೆ ಎಂದಿದ್ದಾರೆ.

    ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಸಚಿವೆ ‘ಒತ್ತಡದಿಂದ ದೂರವಿರಲು ಮಲಗುವ ಮುನ್ನ ಮದ್ಯಪಾನ ಮಾಡಿ ಎನ್ನುವ ಹೇಳಿಕೆ ನೀಡಿರುವುದು ಇದೀಗ ಭಾರಿ ವಿವಾದ ಸೃಷ್ಟಿಸಿದೆ.

    ಮಹಿಳೆಯರು ಮನೆ ಮತ್ತು ಕುಟುಂಬವನ್ನು ನೋಡಿಕೊಳ್ಳುತ್ತಾರೆ, ಹೀಗಾಗಿ ಅವರಿಗೆ ಸಹಜವಾಗಿ ಮಾನಸಿಕ ಒತ್ತಡವಿರುತ್ತದೆ. ಆದ್ದರಿಂದ ಸ್ವಲ್ಪ ಕುಡಿದು ಮಲಗಲು ಹೋಗಿ ಎಂದಿರುವ ಸಚಿವೆಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಚಿವೆಯ ಈ ಹೇಳಿಕೆಯಲ್ಲಿ ಸರ್ಕಾರ ಭಾರಿ ಇಕ್ಕಟ್ಟಿಗೆ ಸಿಲುಕಿಸಿದೆ. ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮದ್ಯ ನಿಷೇಧ ಹೇರುವುದಾಗಿ ಕಾಂಗ್ರೆಸ್ ಪ್ರತಿಜ್ಞೆ ಮಾಡಿದ್ದು, ಸಚಿವೆ ಈ ರೀತಿ ಹೇಳುತ್ತಿರುವ ಅರ್ಥವೇನು ಎಂದು ಬಿಜೆಪಿ ಕುಹಕವಾಡುತ್ತಿದೆ. ಇದೊಂದು ನಾಚಿಕೆಗೇಡಿನ ಹೇಳಿಕೆ ಎಂದು ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಇಲ್ಲಿದೆ ಕೇಳಿ ಸಚಿವೆಯ ಮಾತು:

    ‘ಯತ್ನಾಳ್‌ರ ಸಿಡಿ ಬಿಡುಗಡೆಗೆ ಕ್ಷಣಗಣನೆ’- ಜಾಲತಾಣದ ತುಂಬ ಹರಿದಾಡ್ತಿದೆ ಪೋಸ್ಟ್‌: ದೂರು ದಾಖಲು

    ‘ಗುಂಡು ಹಾರಿಸಿ ಕೊಂದರೂ ಕಾಶ್ಮೀರ ಪಾಕ್‌ ಪಾಲಾಗಲು ಬಿಡಲ್ಲ: ಶಿಕ್ಷಕನನ್ನು ಕೊಂದು ಭೂತಸೇವೆ ಮಾಡುವವರಿವರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts