ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ ಮತ್ತು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ ಮತ್ತು ಹುಬ್ಬೇರಿಸುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ ನೋಡಿದರೆ ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ. ಹೌದು, ಪ್ರಾಣಿ-ಪಕ್ಷಿಗಳು ಉಸಿರಾಡುವುದನ್ನು ನೋಡಿದ್ದೇವೆ. ಆದರೆ, ಮರ ಉಸಿರಾಡುವುದನ್ನು ಎಂದಾದರೂ ನೋಡಿದ್ದೀರಾ? ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮರ ಉಸಿರಾಡುವುದನ್ನು ನೋಡಬಹುದಾಗಿದೆ. ಉಸಿರಾಡುವಾಗ ಜೀವಿಗಳ ಎದೆಯ ಏರಿಳಿತ ಯಾವ ರೀತಿ ಇರುತ್ತದೋ ಅದೇ ಮಾದರಿಯಲ್ಲಿ ಮರದ ಉಸಿರಾಟವು ಇದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮರದ ಮಧ್ಯ ಭಾಗದಲ್ಲಿ ಬಿರುಕು ಮೂಡಿದೆ. ಮನುಷ್ಯರು ಉಸಿರಾಡುವಂತೆಯೇ ಮರವು ಬಿರುಕನ್ನು ಮುಚ್ಚುವ ಮತ್ತು ತೆರೆಯುವ ಮೂಲಕ ಉಸಿರಾಡುವುದನ್ನು ಮತ್ತು ಉಸಿರು ಬಿಡುವುದನ್ನು ವೀಡಿಯೊ ತೋರಿಸುತ್ತದೆ. ಈ ಅಪರೂಪದ ವಿದ್ಯಾಮಾನ ಕೆನಡಾದ ಕಾಲ್ಗರಿಯಲ್ಲಿ ನಡೆದಿದೆ.
ಅಂದಹಾಗೆ ಭಾರಿ ಮಳೆ ಮತ್ತು ಗಾಳಿಯ ನಂತರ ಮರದಲ್ಲಿ ಬಿರುಕು ಉಂಟಾಗುತ್ತದೆ ಮತ್ತು ಗಾಳಿ ಬೀಸುವ ಸಮಯದಲ್ಲಿ ಈ ಬಿರುಕು ತೆರೆದು ಮುಚ್ಚುತ್ತದೆ. ಹೀಗಾಗಿ ಮರವು ಉಸಿರಾಡುತ್ತಿರುವಂತೆ ಭಾಸವಾಗುತ್ತದೆ. ಈ ವಿಡಿಯೋವನ್ನು ವೈರಲ್ ಹಗ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದು, ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಈ ಹಿಂದೆಯೂ ಬ್ರೀಥಿಂಗ್ ಟ್ರೀ ಎಂಬ ವಿಡಿಯೋಗಳು ಬಂದಿವೆ. ಇಂತಹ ವಿದ್ಯಮಾನಗಳ ಹಿಂದೆ ಭೂವೈಜ್ಞಾನಿಕ ಬದಲಾವಣೆಗಳಿವೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ವೈರಲ್ ಹಗ್)
ಕಾರಿಗೆ ಆಂಬ್ಯುಲೆನ್ಸ್ ಸೈರೆನ್ ಹಾಕ್ಕೊಂಡು ಓಡಾಟ: ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಬಿತ್ತು ಭಾರಿ ದಂಡ
ಥಾಯ್ಲೆಂಡ್ ವಿಮಾನದಲ್ಲಾದ ಅತ್ಯಂತ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ ಮಲಯಾಳಿ ಬ್ಯೂಟಿ ನಜ್ರಿಯಾ!
ಸಾಮಾಜಿಕ ಜಾಲತಾಣ ಕೂ ಮೂಲಕ ಕನಸು ಈಡೇರಿಸಿಕೊಂಡ ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್