ಕೆ.ಎಲ್​. ರಾಹುಲ್​ ಒಳಉಡುಪು ಜಾಹೀರಾತು ನೋಡಿ ನಟಿ ಕಸ್ತೂರಿ ಮಾಡಿದ ಹಾಟ್​ ಕಾಮೆಂಟ್​ ವೈರಲ್​!

Kasthuri
Published on

ಹೈದರಾಬಾದ್​: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ.

ಕಸ್ತೂರಿ ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಇತ್ತೀಚೆಗೆ ಅಜಯ್​ ದೇವಗನ್​ ಮತ್ತು ಕಿಚ್ಚ ಸುದೀಪ್​ ನಡುವೆ ಭಾಷಾ ವಿಚಾರವಾಗಿ ನಡೆದ ಚರ್ಚೆಯಲ್ಲಿ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಕಸ್ತೂರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಕಿಚ್ಚನ ಪರ ಬ್ಯಾಟ್​ ಬೀಸಿದರು.

ತಾಜಾ ಸಂಗತಿ ಏನೆಂದರೆ, ಟೀಮ್​ ಇಂಡಿಯಾದ ಆಟಗಾರ ಹಾಗೂ ಕನ್ನಡಿಗ ಕೆ.ಎಲ್​. ರಾಹುಲ್ ಬಗ್ಗೆ ಕಸ್ತೂರಿ ಅವರು ಮಾಡಿರುವ ಟ್ವೀಟ್​ ಇದೀಗ ಭಾರೀ ವೈರಲ್​ ಆಗಿದೆ. ರಾಹುಲ್​ ಅವರು ಒಳಉಡುಪಿನ ಬ್ರ್ಯಾಂಡ್​ಗೆ ಜಾಹೀರಾತು ನೀಡಿದ್ದು, ಅದರ ಬಗ್ಗೆ ಕಾಮೆಂಟ್​ ಮಾಡುವ ಮೂಲಕ ಕಸ್ತೂರಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಕ್ರಿಕೆಟಿಗರು ತಂಪು ಪಾನೀಯಗಳು, ಚಿಪ್ಸ್​ಗಳು ಹಾಗೂ ಆನ್​ಲೈನ್​ ಗೇಮ್​ಗಳ ಬಗ್ಗೆ ಜಾಹೀರಾತು ನೀಡುವುದನ್ನು ನೋಡಿದ್ದೇವೆ. ಅನೇಕ ಭಾರತೀಯ ಕ್ರೀಡಾಪಟುಗಳು ಬಟ್ಟೆ ಬ್ರ್ಯಾಂಡ್​ಗಳಿಗೆ ಜಾಹೀರಾತು ನೀಡಿದ್ದಾರೆ. ಆದರೆ, ಒಳಉಡುಪು ಜಾಹೀರಾತುಗಳಿಗೆ ಬಹುತೇಕರು ದೂರ ಸರಿದಿದ್ದಾರೆ. ಕೆ.ಎಲ್​.ರಾಹುಲ್​ ಅವರನ್ನು ಈ ಲುಕ್​ನಲ್ಲಿ ನೋಡಲು ಚೆನ್ನಾಗಿದೆ. ಕಪಾಟಿನಲ್ಲಿರುವ ಪುರುಷರ ಒಳಉಡುಪುಗಳು ಹೊರ ಬರುವ ಭರವಸೆ ಇದೆ ಎನ್ನುವ ಮೂಲಕ ಕೊನೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಕಸ್ತೂರಿ ಅವರ ಟ್ವೀಟ್​ ವೈರಲ್​ ಆಗಿದ್ದು, ಕಾಮೆಂಟ್​ಗಳು ಹರಿದುಬರುತ್ತಿವೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಸ್ತೂರಿ ಅವರು ಪ್ರಸ್ತುತ ವಿಜಯ್ ಆಂಟೋನಿ ಅವರ 'ತಮಿಲರಸನ್', 'ಉನ್ ಕಾದಲ್ ಇರುಂದಾಲ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಹಬ್ಬ, ಜಾಣ ಹಾಗೂ ತುತ್ತಾಮುತ್ತಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಕಸ್ತೂರಿ ಪರಿಚಿತರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net