More

    ಯುಪಿಎಸ್​ಸಿ ರಾಜ್ಯಕ್ಕೆ ಸಿಹಿ: 30ಕ್ಕೂ ಹೆಚ್ಚು ರ‌್ಯಾಂಕ್; ಅವಿನಾಶ್ ರಾವ್ ಟಾಪ್ ಕನ್ನಡಿಗ

    ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2021-22ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ದೇಶಾದ್ಯಂತ 685 ಅಭ್ಯರ್ಥಿಗಳು ಅರ್ಹತೆ ಗಳಿಸಿದ್ದಾರೆ. ಕರ್ನಾಟಕದ 30ಕ್ಕೂ ಅಧಿಕ ವಿದ್ಯಾರ್ಥಿಗಳಿರುವುದು ರಾಜ್ಯದ ಹಿರಿಮೆ ಹೆಚ್ಚಿಸಿದೆ. ಮೊದಲ ಪ್ರಯತ್ನದಲ್ಲೇ ದಾವಣಗೆರೆಯ ವಿ. ಅವಿನಾಶ್ ರಾವ್ 31ನೇ ರ್ಯಾಂಕ್ ಪಡೆದು ರಾಜ್ಯದ ಟಾಪರ್ ಎನಿಸಿದ್ದಾರೆ.

    ಎನ್.ಜೆ. ಬೆನಕ ಪ್ರಸಾದ್ 92ನೇ ರ್ಯಾಂಕ್ ಹಾಗೂ ಮೆಲ್ವನ್ 118ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯದ ಸಾಧಕರ ಪೈಕಿ 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷವೂ ರಾಜ್ಯದ 30ಕ್ಕೂ ಅಧಿಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. 2019-20ನೇ ಸಾಲಿನಲ್ಲಿ 27 ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದರು. ಕಳೆದ ಎರಡು ವರ್ಷಗಳಿಂದ ಯುಪಿಎಸ್​ಸಿ ಸಾಧಕರ ಸಂಖ್ಯೆ ಕೊಂಚ ಹೆಚ್ಚಿದೆ. ಯುಪಿಎಸ್​ಸಿ ಮುಖ್ಯ ಪರೀಕ್ಷೆಯನ್ನು 2022ರ ಜನವರಿಯಲ್ಲಿ ನಡೆಸಲಾಗಿತ್ತು. ಏಪ್ರಿಲ್ 5ರಿಂದ ಮೇ 26ರವರೆಗೆ ವಿದ್ಯಾರ್ಥಿಗಳ ಸಂದರ್ಶನ ನಡೆಸಿತ್ತು.

    ಯುಪಿಎಸ್​ಸಿ ರಾಜ್ಯಕ್ಕೆ ಸಿಹಿ: 30ಕ್ಕೂ ಹೆಚ್ಚು ರ‌್ಯಾಂಕ್; ಅವಿನಾಶ್ ರಾವ್ ಟಾಪ್ ಕನ್ನಡಿಗ

    ಶ್ರುತಿ ಶರ್ಮ ದೇಶಕ್ಕೇ ಫಸ್ಟ್: ರಾಷ್ಟ್ರ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಮಹಿಳೆಯರೇ ಪಡೆಯುವ ಮೂಲಕ ಯುಪಿಎಸ್​ಸಿ ಫಲಿತಾಂಶದಲ್ಲಿ ಪಾರಮ್ಯ ಮೆರೆದಿದ್ದಾರೆ. ದೆಹಲಿಯ ಶ್ರುತಿ ಶರ್ಮ, ಕೋಲ್ಕತ್ತದ ಅಂಕಿತಾ ಅಗರ್​ವಾಲ್, ಚಂಡಿಗಢ್​ದ ಗಾಮಿನಿ ಸಿಂಗ್ಲಾ ಮೊದಲ ಮೂರು ಸ್ಥಾನ ಗಳಿಸಿದರೆ, ಮಧ್ಯಪ್ರದೇಶ ಐಶ್ವರ್ಯ ವರ್ವ 4ನೇ ಹಾಗೂ ಉತ್ಕರ್ಷ ದ್ವಿವೇದಿ 5ನೇ ಸ್ಥಾನ ಗಳಿಸಿದ್ದಾರೆ. ಯಕ್ಷ್ ಚೌಧರಿ, ಸಮ್ಯಕ್ ಎಸ್ ಜೈನ್, ಇಶಿತಾ ರಾಠಿ, ಪ್ರೀತಮ್ುಮಾರ್, ಹರ್ಕಿರಾತ್ ಸಿಂಗ್ ರಾಂಧ್ವಾ ಕ್ರಮವಾಗಿ ನಂತರ ಸ್ಥಾನ ಪಡೆದುಕೊಂಡಿದ್ದಾರೆ.

    ಯುಪಿಎಸ್​ಸಿ ರಾಜ್ಯಕ್ಕೆ ಸಿಹಿ: 30ಕ್ಕೂ ಹೆಚ್ಚು ರ‌್ಯಾಂಕ್; ಅವಿನಾಶ್ ರಾವ್ ಟಾಪ್ ಕನ್ನಡಿಗ

    ನಾಗರಿಕ ಸೇವಾ ಪರೀಕ್ಷೆಯ ಸಾಧಕರಿಗೆ ಅಭಿನಂದನೆಗಳು. ದೇಶ ಸ್ವಾತಂತ್ರೊ್ಯೕತ್ಸವದ ಅಮೃತ ಮಹೋತ್ಸವದಲ್ಲಿರುವ ಸಂದರ್ಭದಲ್ಲಿ ನಿಮ್ಮ ಆಡಳಿತಾತ್ಮಕ ವೃತ್ತಿಯು ಭಾರತದ ಅಭಿವೃದ್ಧಿಯ ಪಯಣಕ್ಕೆ ಬಹಳ ಮಹತ್ವದ್ದಾಗಿದೆ. ಯುವ ಸಮುದಾಯಕ್ಕೆ ಶುಭ ಹಾರೈಕೆಗಳು.

    | ನರೇಂದ್ರ ಮೋದಿ ಪ್ರಧಾನಿ

    ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್​ನಲ್ಲಿ ಪದವಿ ಪಡೆದಿದ್ದು, ಕುಟುಂಬದ ಪ್ರೋತ್ಸಾಹದಿಂದ ಮೊದಲ ಪ್ರಯತ್ನದಲ್ಲೇ ಉತ್ತೀರ್ಣನಾಗಿದ್ದು ಅತ್ಯಂತ ಸಂತೋಷ ತಂದಿದೆ. ಪರೀಕ್ಷೆಯಲ್ಲಿ ಕಾನೂನು ವಿಷಯವನ್ನೇ ಐಚ್ಛಿಕವಾಗಿ ತೆಗೆದುಕೊಂಡಿದ್ದೆ. ಪ್ರತಿದಿನ 6-7 ಗಂಟೆಗಳ ಅಧ್ಯಯನ ಮಾಡುತ್ತಿದ್ದೆ.

    | ಅವಿನಾಶ್ ರಾವ್ 31ನೇ ರ‌್ಯಾಂಕ್

    ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು. ನನ್ನ ಕನಸಿಗೆ ಕುಟುಂಬದವರು ಅಗತ್ಯ ಸಹಕಾರ ನೀಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಸೋಲಾದಾಗ ಕುಗ್ಗದೇ ಸತತ ಅಭ್ಯಾಸ ಮಾಡಿದೆ. ಎರಡನೇ ಯತ್ನದಲ್ಲಿ ಉತ್ತಮ ರ್ಯಾಂಕ್ ಗಳಿಸಿರುವುದು ಖುಷಿ ನೀಡಿದೆ.

    | ಅಪೂರ್ವ ಬಾಸೂರ 191 ನೇ ರ‌್ಯಾಂಕ್

    ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಯುಪಿಎಸ್​ಸಿ 4ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇನೆ. ಪ್ರತಿದಿನ 8-9 ಗಂಟೆ ಓದುತ್ತಿದ್ದೆ. ಕನ್ನಡ ಸಾಹಿತ್ಯ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೆ.

    | ನಿಖಿಲ್ ಬಿ. ಪಾಟೀಲ್ 139 ರ‌್ಯಾಂಕ್

    ಯುಪಿಎಸ್​ಸಿ ರಾಜ್ಯಕ್ಕೆ ಸಿಹಿ: 30ಕ್ಕೂ ಹೆಚ್ಚು ರ‌್ಯಾಂಕ್; ಅವಿನಾಶ್ ರಾವ್ ಟಾಪ್ ಕನ್ನಡಿಗ

    ಮೇಘನಾ ಸಾಧನೆ: ದೃಷ್ಟಿದೋಷ ಹೊಂದಿರುವ ಮೈಸೂರಿನ ಕೆ.ಟಿ. ಮೇಘನಾ 425ನೇ ರ್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ. ಕಠಿಣವಾದ ಈ ಪರೀಕ್ಷೆಯಲ್ಲಿ ಒಂದು ಸಲ ಉತ್ತೀರ್ಣವಾಗುವುದೇ ಬಲು ಕಷ್ಟ. ಆದರೆ,ಇವರು 2020ರಲ್ಲಿ ಗಳಿಸಿದ್ದ 465ನೇ ರ್ಯಾಂಕ್​ಗೆ ತೃಪ್ತಿ ಪಡದೆ ಮತ್ತೆ ಬರೆದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts