

ಲಂಡನ್: ಬ್ರಿಟನ್ ಪಾಲಿಗೆ ಆಶಾದಾಯಕ ವರದಿಯೊಂದು ಬಂದಿದ್ದು, ಆಗಸ್ಟ್ ವೇಳೆಗೆ ಬ್ರಿಟನ್ ಸಂಪೂರ್ಣ ಕರೊನಾ ವೈರಸ್ ಮುಕ್ತವಾಗಲಿದೆ ಎಂದು ಸರ್ಕಾರದ ನಿರ್ಗಮಿತ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಕ್ಲೈವ್ ಡಿಕ್ಸ್ ಟೆಲಿಗ್ರಾಫ್ ಮಾಧ್ಯಮಕ್ಕೆ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಆಗಸ್ಟ್ ವೇಳೆ ಯುನೈಟೆಡ್ ಕಿಂಗ್ಡಮ್ನಲ್ಲಿ ಯಾವುದೇ ಪರಿಚಲನೆಯ ವೈರಸ್ ಇರುವುದಿಲ್ಲ. ಲಸಿಕೆ ಉತ್ತೇಜನ ಕಾರ್ಯಕ್ರಮವನ್ನು 2022ರ ಆರಂಭಕ್ಕೂ ಮುನ್ನವೇ ಹಿಂಪಡೆಯಬಹುದು ಎಂದು ಡಿಕ್ಸ್ ಹೇಳಿದ್ದಾರೆ.
ಇನ್ನು ಈ ವರ್ಷದ ಕೊನೆಯಲ್ಲಿ ಯಾವ ಕೋವಿಡ್ ಲಸಿಕೆಗಳು ದುರ್ಬಲ ಜನರಿಗೆ ಅತ್ಯುತ್ತಮ ಉತ್ತೇಜನ ನೀಡುತ್ತವೆ ಎಂದು ಸರ್ಕಾರ ನೋಡುತ್ತಿದೆ. ಜುಲೈ ಅಂತ್ಯದ ವೇಳೆ ಯುಕೆಯಲ್ಲಿ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳುವ ನಿರೀಕ್ಷೆ ಇದೆ. ಆ ಹೊತ್ತಿಗೆ ನಾವು ತಿಳಿದಿರುವ ಎಲ್ಲಾ ರೂಪಾಂತರ ವೈರಸ್ಗಳಿಂದ ನಮ್ಮ ಜನರನ್ನು ರಕ್ಷಿಸಿದಂತಾಗುತ್ತದೆ ಎಂದು ಡಿಕ್ಸ್ ಅಭಿಪ್ರಾಯ ಪಟ್ಟರು.
ಬ್ರಿಟನ್ 51 ದಶಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ಈಗಾಗಲೇ ನೀಡಿದೆ ಮತ್ತು ಕನಿಷ್ಠ ಅರ್ಧದಷ್ಟು ವಯಸ್ಕ ಜನಸಂಖ್ಯೆಗೆ ಮೊದಲ ಡೋಸ್ ನೀಡಿದ ಎರಡನೇ ತ್ವರಿತ ದೇಶವಾಗಿದೆ. ರಕ್ತ ಹೆಪ್ಪುಗಟ್ಟುವಿಕೆಯ ಸಣ್ಣ ಅಪಾಯದಿಂದಾಗಿ 40 ವರ್ಷದೊಳಗಿನ ಜನರಿಗೆ ಆಕ್ಸ್ಫರ್ಡ್/ ಅಸ್ಟ್ರಾಜೆನೆಕಾ (ಎಝಡ್ಎನ್.ಎಲ್) ಕೋವಿಡ್ -19 ಲಸಿಕೆಗೆ ಪರ್ಯಾಯವಾಗಿ ಬೇರೆ ಲಸಿಕೆ ನೀಡಬೇಕೆಂದು ಬ್ರಿಟಿಷ್ ಅಧಿಕಾರಿಗಳು ತಿಳಿಸಿದ್ದಾರೆ.
ಡಿಸೆಂಬರ್ನಲ್ಲಿ ಕಾರ್ಯಪಡೆಯ ಹಂಗಾಮಿ ನಾಯಕರಾಗಿ ನೇಮಕಗೊಂಡ ಕ್ಲೈವ್ ಡಿಕ್ಸ್ ಕಳೆದ ವಾರ ತಮ್ಮ ಸ್ಥಾನದಿಂದ ಕೆಳಗಿಳಿದರು. (ಏಜೆನ್ಸೀಸ್)