More

    ಕೊನೆಗೂ ಪ್ರಭಾಸ್​ ಮದುವೆಗೆ ಕೂಡಿ ಬಂತು ಕಾಲ​! ವಧು ಫಿಕ್ಸ್​, ಈ ವರ್ಷವೇ ಅದ್ಧೂರಿ ವಿವಾಹ

    ಹೈದರಾಬಾದ್​: ತೆಲುಗು ಚಿತ್ರರಂಗದ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್ ಅಂದರೆ ಅದು​ ಪ್ರಭಾಸ್​. ವಯಸ್ಸು 42 ವರ್ಷವಾದರೂ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಇತ್ತೀಚೆಗೆ ಅವರ ನಟನೆಯ ರಾಧೆಶ್ಯಾಮ್​ ಚಿತ್ರ ಬಿಡುಗಡೆಯಾಯಿತು. ಅಲ್ಲದೆ ಸಾಲು ಸಾಲು ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಸಿನಿಮಾಗಳಲ್ಲೇ ಮುಳುಗಿ ಹೋಗಿರುವ ಪ್ರಭಾಸ್​ ಮದುವೆಯನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳು ಪ್ರಭಾಸ್​ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಮದುವೆ ಕುರಿತು ಹಾಗೂ ಪ್ರಭಾಸ್​ ಅಭಿಮಾನಿಗಳು ಖುಷಿಯಾಗುವಂತಹ ವಿಚಾರವೊಂದು ಹೊರಬಿದ್ದಿದೆ.

    ಹೌದು. ಶೀಘ್ರದಲ್ಲೇ ಪ್ರಭಾಸ್​ ಮದುವೆಯಾಗಲಿದ್ದಾರೆ. ಪ್ರಭಾಸ್​ ಕುಟುಂಬ ಈಗಾಗಲೇ ವಧು ಯಾರೆಂಬುದನ್ನು ಅಂತಿಮಗೊಳಸಿದ್ದು, ಈ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲೇ ಮದುವೆ ನಡೆಯುವ ಸಾಧ್ಯತೆ ಇದೆ.

    ಇತ್ತೀಚೆಗೆ ಪ್ರಭಾಸ್​ ಅಭಿಮಾನಿಗಳ ಸಂಘದ ಅಧ್ಯಕ್ಷ ಸಂದರ್ಶನವೊಂದರಲ್ಲಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಈ ವರ್ಷವೇ ಪ್ರಭಾಸ್​ ಮದುವೆ ಆಗಲಿದ್ದಾರೆ ಎಂದು ಹೇಳಿದ್ದಾರೆ. ಪ್ರಭಾಸ್​ ಕುಟುಂಬ ವಧುವನ್ನು ಅಂತಿಮಗೊಳಿಸಿದ್ದು, ಮುಂದಿನ ದಿನಗಳಲ್ಲಿ ಕೃಷ್ಣಂರಾಜು ಕುಟುಂಬ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಲಿದೆ ಎಂದಿದ್ದಾರೆ.

    ಸಾಕಷ್ಟು ಬಾರಿ ಪ್ರಭಾಸ್​ ಹೆಸರು ಅನುಷ್ಕಾ ಶೆಟ್ಟಿ ಜತೆ ತಳುಕು ಹಾಕಿಕೊಂಡಿತ್ತು. ಆದಾಗ್ಯೂ ಇಬ್ಬರ ನಡುವೆ ಒಳ್ಳೆಯ ಸ್ನೇಹವಿದ್ದು, ಮದುವೆ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಭಾಸ್, ಪ್ರತಿಯೊಬ್ಬ ತಾಯಿಯೂ ತನ್ನ ಮಗ ಮದುವೆಯಾಗಿ ಮಕ್ಕಳನ್ನು ಹೊಂದಬೇಕೆಂದು ಬಯಸುತ್ತಾರೆ. ಕೆಲವೊಮ್ಮೆ ನನ್ನ ತಾಯಿ ಕೂಡ ನನ್ನನ್ನು ಜೀವನದಲ್ಲಿ ಸೆಟಲ್​ ಆಗುವ ಬಗ್ಗೆ ಯೋಚಿಸಲು ಕೇಳುತ್ತಾರೆ. ನನೆಗೆ ಒತ್ತಡ ಹೇರಬೇಡಿ ಮತ್ತು ಅದು ಯಾವಾಗ ಸಂಭವಿಸಬೇಕು ಆಗ ಸಂಭವಿಸುತ್ತದೆ. ನಾನು ಮದುವೆಯಾಗಿ ಸೆಟಲ್​ ಆಗಲು ಬಯಸುತ್ತೇನೆ. ಆದರೆ, ಮದುವೆ ಸರಿಯಾದ ಸಮಯದಲ್ಲಿ ನಡೆಯುತ್ತದೆ ಎಂದು ಹೇಳಿದ್ದರು. (ಏಜೆನ್ಸೀಸ್​)

    9 ವರ್ಷದ ಬಾಲಕನನ್ನು ಮದ್ವೆಯಾಗಿ ಭಾರಿ ಸುದ್ದಿ ಮಾಡಿದ್ದ ನಟಿಗಿಂದು ಹುಟ್ಟುಹಬ್ಬದ ಸಂಭ್ರಮ

    ಇನ್ನೆರಡು ದಿನದಲ್ಲಿ ಈ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮತ್ತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ವಿದ್ಯಾರ್ಥಿನಿಯರ ಬಟ್ಟೆಯೊಳಗೆ ಬೇಕಂತಲೇ ಸೀಮೆಸುಣ್ಣ ಬೀಳಿಸ್ತಿದ್ದ: ನಿವೃತ್ತ ಶಿಕ್ಷಕನ ವಿಕೃತಿ ಬಯಲು, ಜಾಮೀನಿಗೆ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts