ಮದ್ವೆಗೆ ಇನ್ನೆರೆಡು ತಿಂಗಳು ಇರುವಾಗಲೇ ಪ್ರೇಯಸಿಯನ್ನು ಹತ್ಯೆ ಮಾಡಿದ ಪ್ರಿಯಕರ‌‌‌‌: ಆ ಕರಾಳ ರಾತ್ರಿ!

Lover
Published on

ಬೆಂಗಳೂರು: ಪ್ರಿಯಕರನೊಬ್ಬ ಹಣಕ್ಕಾಗಿ ಪ್ರೇಯಸಿಯನ್ನೇ ಹತ್ಯೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉಡುಪಿ ಮೂಲದ ಗಂಗಾ ( 34) ಕೊಲೆಯಾದ ಯುವತಿ. ಕೊಲೆ ಆರೋಪಿ ಶ್ಯಾಮು (27) ದಾಂಡೇಲಿ ಮೂಲದವನಾಗಗಿದ್ದು, ಯೋಗ ಶಿಕ್ಷಕ ವೃತ್ತಿ ಮಾಡುತ್ತಿದ್ದ. ಆತನ ತರಬೇತಿ ಕೇಂದ್ರದಲ್ಲಿ ಗಂಗಾ ಯೋಗ ಕಲಿಯುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುವಾಗಿತ್ತು. ಇತ್ತ ಶ್ಯಾಮ್​ನಿಂದ ಯೋಗ ತರಬೇತಿ ಪಡೆದಿದ್ದ ಗಂಗಾ ಪ್ರತ್ಯೇಕವಾಗಿ ಕ್ಲಾಸ್ ಮಾಡುತ್ತಿದ್ದಳು. ಅದಕ್ಕಾಗಿ ಶ್ಯಾಮ್​ನಿಂದ ಗಂಗಾ ಒಂದು ಲಕ್ಷ ಹಣ ಪಡೆದಿದ್ದಳು.

ಇಬ್ಬರ ಮನೆಯಲ್ಲೂ ಒಪ್ಪಿಸಿ ಫೆಬ್ರವರಿಯಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಪ್ರೇಯಸಿಗಾಗಿ ಯಲಹಂಕ ನ್ಯೂ ಟೌನ್​ನಲ್ಲಿ ಶ್ಯಾಮ್​ ರೂಮ್ ಮಾಡಿಕೊಟ್ಟಿದ್ದ. ಬುಧವಾರ ರಾತ್ರಿ ಮನೆಗೆ ಬಂದಾಗ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಇದೇ ವೇಳೆ ಕೋಪಗೊಂಡ ಶ್ಯಾಮ್​, ಗಂಗಾ ತಲೆಯನ್ನು ಗೋಡೆಗೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net