More

    ನಮಸ್ತೆ ಘೋಷ್ಟ್​ ಚಿತ್ರಕ್ಕೂ ಸುದೀಪ್​ಗೂ ಸಂಬಂಧವಿಲ್ಲ: ಸುಳ್ಳು ಸುದ್ದಿ ಬೆನ್ನಲ್ಲೇ ಚಿತ್ರತಂಡದಿಂದ ಸ್ಪಷ್ಟನೆ

    ಬೆಂಗಳೂರು: ಭರತ್​ ನಂದ ನಿರ್ದೇಶನದ ನಮಸ್ತೆ ಘೋಷ್ಟ್​ ಹೆಸರಿನ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಬಗ್ಗೆ ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿತ್ತು. ಆದರೆ, ಆ ಸುದ್ದಿ ಸುಳ್ಳಾಗಿದ್ದು, ನಮಸ್ತೆ ಘೋಷ್ಟ್​ ಚಿತ್ರದಲ್ಲಿ ಸುದೀಪ್​ ನಟಿಸುತ್ತಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

    ನಮಸ್ತೆ ಸರ್… ‌ನನ್ನ ಹೆಸರು ಭರತ್ ನಂದ, ನನ್ನ ಮೊದಲನೇಯ ಸಿನಿಮಾ “ಡಯಾನ ಹೌಸ್” ಅಂತ ಹಾರರ್ ಮೂವಿ. ಈಗ ಮತ್ತೊಂದು ಹಾರರ್ ಸಿನಿಮಾ “ನಮಸ್ತೆ ಘೋಷ್ಟ್” ಅಂತ ಶೂಟಿಂಗ್ ಮುಕ್ತಾಯ ಆಗಿದೆ. ಈ ಒಂದು ವಿಷಯಕ್ಕಾಗಿ ಇದೇ ಜನವರಿ 3ನೆಯ ತಾರೀಖಿನಂದು ಫಸ್ಟ್ ಲುಕ್‌ ಪೋಸ್ಟರ್​ನ ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಲಾಯಿತು.

    ಮರುದಿನ ಆ ಪೋಸ್ಟರಲ್ಲಿ ನಿಂತಿರುವ ನಟ ಕಿಚ್ಚ ಸುದೀಪ್ ರವರೆಂದು ಸುದೀಪರವರ ಮುಂದಿನ ಚಿತ್ರವೆಂದು ತಪ್ಪಾಗಿ ಭಾವಿಸಿ ಸೋಷಿಯಲ್‌ ಮೀಡಿಯಾ ದಲ್ಲಿ ವೈರಲಾಯ್ತು. ಈ ವಿಷಯ ತಿಳಿದು ನಮ್ಮ “ಚಿರಾಯು ಕ್ರಿಯೇಟಿವ್ ಸಿನಿಮಾಸ್” ಅಫೀಶಿಯಲ್ ಪೇಜ್​ನಲ್ಲಿ ಇದು ಸುಳ್ಳು ಸುದ್ದಿ ಆ ಪೋಸ್ಟರಲ್ಲಿರುವ ನಟ ಭರತ್‌ನಂದ ಹಾಗೂ ರಚನೆ ನಿರ್ದೇಶನ ಕೂಡ ಅವರದೇ” ಎಂದು ಹೇಳಿ ಪೋಸ್ಟ್ ಮಾಡಿದಿವಿ. ಆದ್ರೂನೂ ಎಲ್ಲಾ ಮೀಡಿಯಾದಲ್ಲಿ ಇನ್ನೂ ಜಾಸ್ತಿ ವೈರಲ್ಲಾಗ್ತಿರೋದ್ರಿಂದ ಇದು ಬೇರೆ ರೀತಿಯಲ್ಲಿ ಕಿಚ್ಚ ಸುದೀಪ್​ರವರಿಗಾಗಲಿ ಅವರ ಅಭಿಮಾನಿಗಳಿಗಾಗಲಿ ನಮ್ಮ ಸಿನಿಮಾ ಕಂಟೆಂಟ್​ ಉಪಯೋಗಿಸಿ ಬೇರೆ ಯಾರೋ ಮಾಡಿರುವ ಫೇಕ್ ನ್ಯೂಸ್​ನಿಂದ ನೆಗೆಟಿವ್​ ಆಗಿ ರೀಚಾಗಬಾರದೆಂದು ಇದನ್ನು ನಿಮಗೆ ತಿಳಿಸುತಿದ್ದೇವೆ.

    ಇಷ್ಟರಲ್ಲೆ ಒಂದು ಪ್ರೆಸ್ ಮೀಟ್ ಮಾಡಿ ನಮ್ಮ “ನಮಸ್ತೆ ಘೋಷ್ಟ್” ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಸಂಪೂರ್ಣವಾಗಿ ಮಾಹಿತಿ ನೀಡಿ ಕ್ಲಾರಿಫಿಕೇಷನ್ ನೀಡುತ್ತೇವೆ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

    ನೀನು ಬಿಗ್​ಬಾಸ್​ನಲ್ಲಿದ್ದಾಗ ತನೀಶ್​ ಜತೆ ಮಾಡಿದ್ದೇನು? ದೀಪ್ತಿ ವಿರುದ್ಧ ಶಾಕಿಂಗ್​ ಹೇಳಿಕೆ ನೀಡಿದ ಶ್ರೀರೆಡ್ಡಿ

    ದೂರು ಕೊಟ್ಟವನೇ ಅಪರಾಧಿ: ಪತ್ನಿ ಜತೆ ಸೇರಿ ರೈಲ್ವೆ ಟಿಕೆಟ್​ ಕ್ಲರ್ಕ್ ರೂಪಿಸಿದ್ದ ಸಂಚು ಕೇಳಿ ಪೊಲೀಸರೇ ಶಾಕ್​

    ಸಿಂಹವನ್ನು ಬೆಕ್ಕಿನಂತೆ ಹೊತ್ತು ಸಾಗಿದ ಮಹಿಳೆ! ಎದೆ ಝಲ್​ ಎನಿಸುವ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts