ಇವನೇನು ಮನುಷ್ಯಾನಾ ಇಲ್ಲಾ ಮೃಗಾನಾ? ಖ್ಯಾತ ನಿರ್ಮಾಪಕ ಬಾಮೈದನಿಂದ ಯುವಕನ ಮೇಲೆ ಹಲ್ಲೆ

Bamaida
Published on

ಬೆಂಗಳೂರು: ಖ್ಯಾತ ನಿರ್ಮಾಪಕ ಬಾಮೈದನೊಬ್ಬ ಮನಷ್ಯತ್ವ ಮರೆತು ಮನಸೋ ಇಚ್ಛೆ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ವಾಸು ಅಲಿಯಾಸ್​ ಗುಟ್ಟಹಳ್ಳಿ ವಾಸು ಎಂಬಾತ ತಮ್ಮ ತಂಡದ ಜತೆ ಸೇರಿಕೊಂಡು ಯತೀಶ್ ಎಂಬ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಹೊಡಿಬೇಡಿ ಸಾರ್ ಅಂತಾ ಬೇಡಿ ಕೊಂಡ್ರು ಕೂಡ ಅರೆಬೆತ್ತಲೆಗೊಳಿಸಿ ಹಾಕಿ ಸ್ಟಿಕ್​ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕಳೆದ ತಿಂಗಳ 15ನೇ ತಾರೀಖು ಯುವಕನ ಕೆಲಸದ ಸ್ಥಳಕ್ಕೆ ಹೋಗಿ ಯತೀಶನ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲಲ್ಲಿ ಒದ್ದು ಚಿತ್ರಹಿಂಸೆ ನೀಡಿದ್ದಾರೆ. ಬಡ್ಡಿ ಹಣದ ವಿಚಾರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಇದೀಗ ವಾಸು ಅಂಡ್ ಟೀಂ ವಿರುದ್ಧ ಕೆಜಿ ನಗರ ಪೊಲೀಸ್ ಠಾಣೆಯಲ್ಲಿ ಯತೀಶ್ ತಂದೆಯಿಂದ ದೂರು ದಾಖಲಾಗಿದೆ. ಹಲ್ಲೆ ಮಾಡಿದ್ದಾರೆ ಹಾಗು ನನ್ನ ಮಗ ಕಾಣಿಸ್ತಿಲ್ಲ ಅಂತಾ ದೂರು ನೀಡಿದ್ದು, ಬಂಧನದ ಭೀತಿಯಲ್ಲಿರುವ ವಾಸು ತಲೆ ಮರೆಸಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net