ಕಾನ್ಸ್​ಟೇಬಲ್ ಮೇಲೆ ಮಚ್ಚಿನಿಂದ ಹಲ್ಲೆ: ಮಾಜಿ ಸಚಿವರ ಕಿಡ್ನಾಪ್​ ಪ್ರಕರಣದ ಆರೋಪಿ ಕಾಲಿಗೆ ಗುಂಡೇಟು

Rowdysheeter
Published on

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ತುಪಾಕಿ ಸದ್ದು ಮಾಡಿದ್ದು, ಮಾಜಿ ಸಚಿವ ವರ್ತೂರು ಪ್ರಕಾಶ್​ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿಶೀಟರ್​​​ ಕಾಲಿಗೆ ಗುಂಡಿಕ್ಕಿ ಬಂಧಿಸಲಾಗಿದೆ.

ಜೆ.ಬಿ.ನಗರ ಠಾಣಾ ವ್ಯಾಪ್ತಿಯ ಚಲ್ಲಘಟ್ಟ ಏರಿಯಾದ ರೌಡಿಶೀಟರ್​ ಲೋಹಿತ್ ಅಲಿಯಾಸ್​ ರೋಹಿತ್​ ಬಲಗಾಲಿಗೆ ಇಂದಿರಾನಗರ ಠಾಣೆ ಪಿಎಸ್ಐ ಅಮರೇಶ್ ಜೇಗರಕಲ್​ ಗುಂಡಿಕ್ಕಿದ್ದಾರೆ.

ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ನಡೆದುಕೊಂಡ ರೋಹಿತ್​, ಕಾನ್ಸ್​ಟೇಬಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಕಾಲಿಗೆ ಗುಂಡಿಕ್ಕಿ ಬಂಧಿಸಿಲಾಗಿದೆ.

ಆರೋಪಿ ರೋಹಿತ್ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಮಾತ್ರವಲ್ಲದೆ, ಇಂದಿರಾನಗರ ಠಾಣೆಯಲ್ಲಿ ಕೊಲೆ, ಅಪಹರಣ ಪ್ರಕರಣ ಸೇರಿದಂತೆ ಇತರೆ 17 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net