ಕ್ಷೇತ್ರವಾರು ಟ್ರೆಂಡ್ ಹೇಗಿದೆ ಗೊತ್ತಾ?: ವಿಜಯವಾಣಿ ಮತದಾನೋತ್ತರ ಸಮೀಕ್ಷೆ; ವಿಧಾನಪರಿಷತ್ ಕಣ ಸಂಭವನೀಯ ಚಿತ್ರಣ

ವಿಧಾನಪರಿಷತ್​ನಲ್ಲಿ ಬಹುಮತ ಪಡೆದುಕೊಳ್ಳಬೇಕೆಂಬ ಆಡಳಿತ ಪಕ್ಷದ ಛಲ, ತನ್ನ ಹಿಂದಿನ ಸಾಧನೆಯನ್ನು ವಿಸ್ತರಿಸಿಕೊಳ್ಳಬೇಕೆಂಬ ಕಾಂಗ್ರೆಸ್ ಹಠ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಾನು ಅನಿವಾರ್ಯವಾಗಬೇಕೆಂಬ ಗುರಿ ಹೊಂದಿದ ಜೆಡಿಎಸ್ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಕಾರಣವಾದ ಚುನಾವಣೆ ಪ್ರಧಾನ ಹಂತವನ್ನು ತಲುಪಿದೆ. ಜಿಲ್ಲೆಯಿಂದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಪ್ರತಿನಿಧಿಯಾಗಿ ಆಯ್ಕೆಯಾಗುವ ಚುನಾವಣೆ ರಾಜಕೀಯ ಪಕ್ಷಗಳಿಗೆ ಅಷ್ಟು ಸುಲಭವಲ್ಲ. ಜನಪ್ರತಿನಿಧಿಗಳೇ ಮತದಾರರಾದರೂ ಅವರನ್ನು ಓಲೈಸುವುದು ಅಷ್ಟು ಸಲೀಸಾಗಿರಲಿಲ್ಲ. ಇದೀಗ ಮತದಾನ ಮುಗಿದಿದೆ, ಮತದಾರರು ಯಾವ ಅಭ್ಯರ್ಥಿಯತ್ತ ದೃಷ್ಟಿ ನೆಟ್ಟಿರಬಹುದು ಎಂಬ ಲೆಕ್ಕಾಚಾರದ … Continue reading ಕ್ಷೇತ್ರವಾರು ಟ್ರೆಂಡ್ ಹೇಗಿದೆ ಗೊತ್ತಾ?: ವಿಜಯವಾಣಿ ಮತದಾನೋತ್ತರ ಸಮೀಕ್ಷೆ; ವಿಧಾನಪರಿಷತ್ ಕಣ ಸಂಭವನೀಯ ಚಿತ್ರಣ