ದೇವರೊಂದಿಗೆ ದೇವರಾದ ಅಪ್ಪು! ಲಕ್ಷ್ಮೀ ವಿಗ್ರಹದ ಜತೆಗೆ ನಗುವಿನ ಪರಮಾತ್ಮನಿಗೂ ಪೂಜೆ

Appu
Published on

ಬೆಳಗಾವಿ: ಮದುವೆ ಆಮಂತ್ರಣ ಪತ್ರಿಕೆ, ಅಷ್ಟೆ ಯಾಕೇ ಇತ್ತಿಚಿಗಷ್ಟೆ ಕೆಎಂಎಫ್ ಸಹ ಹಾಲಿನ ಪ್ಯಾಕೇಟ್ ಮೇಲೆ ಅಗಲಿದ ರಾಜರತ್ನ ಅಪ್ಪು ಫೋಟೋ ಮುದ್ರಿಸಿ ತನ್ನ ಅಭಿಮಾನದ ಜತೆಗೆ ಗೌರವ ಸೂಚಿಸಿದೆ.

ಅಪ್ಪು ನಮ್ಮನ್ನೆಲ್ಲ ಅಗಲಿ ಎರಡು ತಿಂಗಳಾದ್ರೂ ಸಹ ಅವರ ಮೇಲಿನ ಅಭಿಮಾನ ಮಾತ್ರ ಸಾಸಿವೆ ಕಾಳಿನಷ್ಟು ಸಹ ದೂರವಾಗಿಲ್ಲ. ತಾವು ಮಾಡುವ ಕೆಲಸ ಕಾರ್ಯಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಿ ಅಪ್ಪು ಭಾವಚಿತ್ರವನ್ನಿಟ್ಟು ನಿತ್ಯವೂ ಪೂಜಿಸುವ ಮೂಲಕ ಅಭಿಮಾನಿಗಳು ತಮ್ಮ ಮನೆ ಮನಗಳಲ್ಲಿ ಪುನೀತ್​ರನ್ನು ಚಿರಸ್ಥಾಯಿಯನ್ನಾಗಿ ಮಾಡುತ್ತಿದ್ದಾರೆ.

ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಎಂದರೆ ಗೋಕಾಕನ ಕಲ್ಯಾಣಿ ಸ್ವೀಟ್ ಮಾರ್ಟ್. ನಿನ್ನೆಯಷ್ಟೆ ಹೊಸದಾಗಿ ಪ್ರಾರಂಭವಾದ ಈ ಸ್ವೀಟ್ ಮಾರ್ಟ್ ಅಂಗಡಿ ಗೃಹಪ್ರವೇಶ ಕಾರ್ಯಕ್ರಮ ಏರ್ಪಡಿಸಿತ್ತು. ಅಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಅಪ್ಪೂವಿಗೂ ಸಹ ಪೂಜೆ ಸಲ್ಲಿಸಲಾಗಿತ್ತು. ಲಕ್ಷ್ಮೀ ಮೂರ್ತಿಯ ಪಕ್ಕದಲ್ಲಿಯೇ ಅಪ್ಪು ಫೋಟೊ ಇರಿಸಿ ಕೆಳಗೆ ನಗುವಿನ ಪರಮಾತ್ಮ ಅಂತ ಸಾಲು ಬರೆದು ಅಪ್ಪುವಿಗೂ ಸಹ ಪೂಜೆ ಸಲ್ಲಿಸಲಾಯ್ತು‌.

ಅಪ್ಪು ಅಗಲಿಕೆಯ ನೋವಿನಿಂದ ಅವರ ಅಭಿಮಾನಿಗಳು ಇನ್ನೂ ಹೊರಬಂದಿಲ್ಲವಾದ್ರೂ ಸಹ ಸದಾ ಒಂದಲ್ಲ ಒಂದು ರೀತಿಯಿಂದ ಅಪ್ಪುವನ್ನ ಅಭಿಮಾನಿಗಳು ನೆನೆಸಿಕೊಳ್ಳುತ್ತಲೇ ಇದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net