

ಬಳ್ಳಾರಿ: ಕೊಲ್ಲಾಪುರದ ಮಹಿಳೆಯೊಬ್ಬಳು ಹಗಲು-ರಾತ್ರಿ ಅನ್ನದೇ ಬೈಕ್ ಮೇಲೆ ದೇಶ ಸಂಚಾರ ಮಾಡುವ ಮೂಲಕ ಹೆಣ್ಣು ಮಕ್ಕಳು ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ಗಾಯತ್ರಿ ಪಟೇಲ್ ಎಂಬುವರು ಬೈಕ್ನಲ್ಲೇ ದೇಶ ಪರ್ಯಟನೆ ಮಾಡಿದ್ದಾರೆ. ರಾಷ್ಟ್ರದ 18 ವಿಶ್ವ ಪಾರಂಪರಿಕ ತಾಣಗಳು ಸೇರಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಭೇಟಿ ನೀಡಿದ್ದಾರೆ. ಈಗಾಗಲೇ 33 ಸಾವಿರ ಕಿ. ಮೀ ಪಯಣ ಮಾಡಿದ್ದಾರೆ.'
ನಾವು ಹೆಣ್ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ, ಗಂಡು-ಹೆಣ್ಣು ಎಲ್ಲದರಲ್ಲೂ ಸಮಾನವಾದ ಹಕ್ಕನ್ನು ಹೊಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಗಾಯತ್ರಿ, 2020 ಡಿಸೆಂಬರ್ 5ರಂದು ಪಯಣ ಆರಂಭ ಮಾಡಿ, ಇದೀಗ ಹಂಪಿಗೆ ಬಂದು ಪಯಣ ಅಂತ್ಯಗೊಳಿಸಿದ್ದಾರೆ.
ಎರಡನೇ ಲಾಕ್ಡೌನ್ ವೇಳೆ ಒಂದೆರಡು ಕಡೆಗಳಲ್ಲಿ ಬ್ರೇಕ್ ನೀಡಿದ್ದು ಬಿಟ್ಟರೆ, ಹಗಲು ರಾತ್ರಿ ಎನ್ನದೇ ಒಬ್ಬಂಟಿಯಾಗಿ ಬೈಕ್ ಚಾಲನೆ ಮಾಡೋ ಮೂಲಕ ಮಹಿಳೆ ಧೈರ್ಯಶಾಲಿ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)