ಮೂರು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಸಮಂತಾ-ನಾಗಚೈತನ್ಯ ಜೀವನದಲ್ಲಿ ನಿಜವಾಗೋಯ್ತು..!

Samantha
Published on

ಹೈದರಾಬಾದ್​: ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಮತ್ತು ನಾಗಚೈತನ್ಯ ಟಾಲಿವುಡ್​ ಮತ್ತು ಕಾಲಿವುಡ್​ ಸಿನಿ ಅಂಗಳದಲ್ಲಿ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿದೆ. ಆದರೆ, ಇದುವರೆಗೂ ಸಮಂತಾ ಆಗಲಿ, ನಾಗಚೈತನ್ಯವಾಗಲಿ ಅಥವಾ ಅಕ್ಕಿನೇನಿ ಕುಟುಂಬವಾಗಲಿ ಯಾರೋಬ್ಬರು ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಇಬ್ಬರು ಬೇರೆಯಾಗುವುದು ಖಚಿತ ಎಂಬ ಮಾತುಗಳು ಸಿನಿ​ ಗಲ್ಲಿಯಲ್ಲಿ ಕೇಳಿಬರುತ್ತಿವೆ.

ಇದರ ನಡುವೆ ಮೂರು ವರ್ಷದ ಹಿಂದಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ರಖ್ಯಾತ ಸಿನಿಮಾ ಮತ್ತು ರಾಜಕೀಯ ಜ್ಯೋತಿಷಿ ವೇಣು ಸ್ವಾಮಿ ಅವರು ಮೂರು ವರ್ಷಗಳ ಹಿಂದೆಯೇ ಮಾಧ್ಯಮ ಸಂದರ್ಶನದಲ್ಲಿ ಸಮಂತಾ ಮತ್ತು ನಾಗಚೈತನ್ಯ ಮದುವೆಯನ್ನು ಪ್ರಸ್ತಾಪಿಸಿ, ಅವರಿಬ್ಬರ ಜಾತಕದ ಪ್ರಕಾರ ಮದುವೆ ನಂತರ ಮನಸ್ತಾಪ ಉಂಟಾಗಿ ಬೇರೆ ಬೇರೆ ಆಗಲಿದ್ದಾರೆ ಎಂದು ಹಿಂದೆಯೇ ಹೇಳಿದ್ದರು. ಇದೀಗ ಸಮಂತಾ-ನಾಗಚೈತನ್ಯ ವೈವಾಹಿಕ ಜೀವನವು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ.

ನನಗೆ ಅಕ್ಕಿನೇನಿ ಕುಟುಂಬದ ಮೇಲೆ ಯಾವುದೇ ದ್ವೇಷ ಇಲ್ಲ. ಅಕ್ಕಿನೇನಿ ಅಖಿಲ್​ ನಿಶ್ಚಿತಾರ್ಥ ರದ್ದಾಗುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ. ಈ ವಿಚಾರ ಅನೇಕ ವೆಬ್​ಸೈಟ್​ಗಳಲ್ಲಿ ಸುದ್ದಿಯಾಗಿತ್ತು. ಬಳಿಕ ನಾಗಾರ್ಜುನ ನನ್ನ ಮೇಲೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಆದರೆ, ನಾನು ಹೇಳಿದಂತೆ ಒಂದೇ ವರ್ಷದಲ್ಲಿ ಅಖಿಲ್​ ನಿಶ್ಚಿತಾರ್ಥ ಮುರಿದುಬಿತ್ತು. ನಾನು ಜಾತಕವನ್ನು ನೋಡಿ ಏನಾಗಲಿದೆ ಎಂದು ವಿಶ್ಲೇಷಣೆ ಮಾಡಿ ಹೇಳಿದ್ದೆ. ಅಖಿಲ್​ಗೆ ಮದುವೆ ಆಗುವುದಿಲ್ಲ ಮತ್ತು ಆತನ ನಿಶ್ಚಿತಾರ್ಥ ರದ್ದಾಗುತ್ತದೆ ಎಂದು ಹೇಳಿದ್ದೆ ಅದರಂತೆ ಹಾಗಿದೆ. ನಾನು ಭವಿಷ್ಯ ನುಡಿದೆ ಅಂತಾ ಅಲ್ಲ. ಅವರ ಜಾತಕದಲ್ಲಿ ಏನು ಇದೆಯೋ ಅದನ್ನು ಮಾತ್ರ ಹೇಳಿದೆ ಎಂದು ವೇಣು ಸ್ವಾಮಿ ತಿಳಿಸಿದ್ದಾರೆ.

ಸಮಂತಾ ಮತ್ತು ನಾಗಚೈತನ್ಯ ನಡುವೆ ಮದುವೆ ನಂತರ ಸಮಸ್ಯೆಗಳು ಬರಲಿವೆ ಎಂದು ಹೇಳಿದೆ. ಆ ಸಮಸ್ಯೆಗಳೇನೆಂದರೆ, ಇಬ್ಬರ ನಡುವೆ ಅಂತರ ಹೆಚ್ಚಾಗಬಹುದು ಮತ್ತು ಇಬ್ಬರು ಬೇರೆ ಬೇರೆಯಾಗಬಹುದು ಅಥವಾ ಮಗು ಆಗದೇ ಇರಬಹುದು ಒಟ್ಟಿನಲ್ಲಿ ವೈಯಕ್ತಿಕ ಜೀವನದಲ್ಲಿ ತೊಂದರೆಗಳು ಎದುರಾಗಲಿವೆ ಎಂದು ಹೇಳಿದ್ದೆ. ಆದರೆ, ಸಿನಿಮಾ ರಂಗದಲ್ಲಿ ಯಾವುದೇ ಸಮಸ್ಯೆ ಇಬ್ಬರು ಎದುರಾಗುವುದಿಲ್ಲ ಎಂದು ತಿಳಿಸಿದ್ದೆ. ಮದುವೆ ಆದರೂ ಕೂಡ ಸಮಂತಾ ಸಿನಿಮಾ ಮುಂದುವರಿಸಲಿದ್ದಾರೆ ಎಂದು ಹೇಳಿದ್ದೆ. ಇದೀಗ ಅವರಿಬ್ಬರ ಮನಸ್ತಾಪದ ಬಗ್ಗೆ ಸುದ್ದಿಯಾಗುತ್ತಿದೆ. ಇಬ್ಬರು ಡಿವೋರ್ಸ್​ ಹಂತಕ್ಕೆ ತಲುಪಿದ್ದಾರೆಂದು ತಿಳಿದುಬಂದಿದೆ ಎಂದರು. ಅವರ ಹಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net