More

    ದುಷ್ಕರ್ವಿುಯಿಂದ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ: ತುಂಡಾದ ನರಗಳು, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

    ಷಟೌಕ್ವಾ: ಅಮೆರಿಕದ ನ್ಯೂಯಾರ್ಕ್ ಪಶ್ಚಿಮದಲ್ಲಿರುವ ಷಟೌಕ್ವಾದಲ್ಲಿ ಲೇಖಕ ಸಲ್ಮಾನ್ ರಶ್ದಿ (75) ಮೇಲೆ ಶುಕ್ರವಾರ ಚಾಕುವಿನಿಂದ ಹಲ್ಲೆ ಆಗಿದೆ. ಷಟೌಕ್ವಾ ಸಂಸ್ಥೆಯಲ್ಲಿ ಉಪನ್ಯಾಸ ನಡೆಯುತ್ತಿದ್ದ ವೇಳೆ ವೇದಿಕೆಗೆ ನುಗ್ಗಿದ ದುಷ್ಕರ್ವಿು, ರಶ್ದಿಗೆ ಗುದ್ದಿ, ಕುತ್ತಿಗೆ ಹಾಗೂ ಕಿಬ್ಬೊಟ್ಟೆ ಭಾಗಕ್ಕೆ ಇರಿದಿದ್ದಾನೆ.

    ಕುಸಿದು ಬಿದ್ದ ರಶ್ದಿ ಅವರನ್ನು ಕೂಡಲೇ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ವೆಂಟಿಲೇಟರ್​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ರಶ್ದಿ ಅವರ ತೋಳಿನಲ್ಲಿ ನರಗಳು ತುಂಡಾಗಿವೆ ಮತ್ತು ಅವರ ಯಕೃತ್ತಿಗೆ ಹಾನಿಯಾಗಿದೆ ಮತ್ತು ಕಣ್ಣು ಕಳೆದುಕೊಳ್ಳಬಹುದು ಎಂದು ಲೇಖಕರ ಸಹಾಯಕ ತಿಳಿಸಿದ್ದಾರೆ.

    ಘಟನೆಯ ಬೆನ್ನಲ್ಲೇ ದುಷ್ಕರ್ವಿುಯನ್ನು ಸಭಾಸದರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ದಾಳಿಕೋರ ಯಾರು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ನ್ಯೂಜರ್ಸಿ ಮೂಲದ ಹದಿ ಮತಾರ್​ (24) ಎಂದು ಗುರುತಿಸಲಾಗಿದೆ. ದಾಳಿ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನ್ಯೂಯಾರ್ಕ್​ನ ಷಟೌಕ್ವಾದಲ್ಲಿರುವ ಷಟೌಕ್ವಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎರಡೂವರೆ ಸಾವಿರ ಜನರು ಭಾಗಿಯಾಗಿದ್ದರು. ‘ಉದ್ಘೋಷಕರು ರಶ್ದಿಯನ್ನು ಪರಿಚಯಿಸುತ್ತಿದ್ದ ವೇಳೆ ಏಕಾಏಕಿ ವೇದಿಕೆ ನುಗ್ಗಿದ ದುಷ್ಕರ್ವಿು, ಉದ್ಘೋಷಕರನ್ನು ತಳ್ಳಿಕೊಂಡು ರಶ್ದಿ ಮೇಲೆ ದಾಳಿ ಮಾಡಿದ್ದಾನೆ. ಸುಮಾರು 10 ರಿಂದ 15 ಬಾರಿ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅವರ ಜೀವಕ್ಕೆ ಅಪಾಯ ಇಲ್ಲ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಗರ್ವನರ್ ಕ್ಯಾಥಿ ಹೊಚಲ್ ಹೇಳಿದ್ದಾರೆ. ಈ ಘಟನೆಯಿಂದ ಉದ್ಘೋಷಕರ ತಲೆಗೂ ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆ ಬಗ್ಗೆ ವಿದ್ವತ್ ವಲಯದಲ್ಲಿ ಆಘಾತ ವ್ಯಕ್ತಪಡಿಸಿದೆ.

    ಭಾರತ ಮೂಲದ ಬ್ರಿಟನ್ ನಾಗರಿಕ ರಶ್ದಿ, ಅವರ ಹಲವು ಲೇಖನಗಳು ವಿವಾದಕ್ಕೆ ಕಾರಣವಾಗಿವೆ. 1980ರ ದಶಕದಲ್ಲೇ ಅವರಿಗೆ ಕೊಲೆ ಬೆದರಿಕೆ ಇತ್ತು.‘ದಿ ಸಟಾನಿಕ್ ವರ್ಸಸ್’ (1988) ಪುಸ್ತಕ ಬಿಡುಗಡೆಯಾದಾಗ ಇರಾನ್ ಕಟ್ಟಾ ಮುಸ್ಲಿಮರು ರಶ್ದಿಯನ್ನು ಧರ್ಮದ್ರೋಹಿ ಎಂದು ಅವರ ವಿರುದ್ಧ ಫತ್ವಾ ಹೊರಡಿಸಿದ್ದರು. ಈ ಪುಸ್ತಕವನ್ನು ಇರಾನ್ ನಿಷೇಧಿಸಿತು. ರಶ್ದಿ ತಲೆ ತಂದವರಿಗೆ 3 ದಶಲಕ್ಷ ಡಾಲರ್ ಬಹುಮಾನವನ್ನು ಘೋಷಿಸಲಾಗಿತ್ತು. 1981ರಲ್ಲಿ ಪ್ರಕಟವಾದ ‘ಮಿಡ್ ನೈಟ್ ಚಿಲ್ಡ›ನ್’ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ತಂದುಕೊಟಿತು. 2007ರಲ್ಲಿ ಅವರಿಗೆ ಬ್ರಿಟನ್ ಸರ್ಕಾರ ’ಸರ್’ ಪದವಿ ನೀಡಿ ಗೌರವಿಸಿತು. (ಏಜೆನ್ಸೀಸ್​)

    ಬಾಲಿವುಡ್​ಗೆ ತಟ್ಟಿದ ಬಾಯ್ಕಾಟ್​ ಬಿಸಿ: ಲಾಲ್​ಸಿಂಗ್​, ರಕ್ಷಾ ಬಂಧನ್​ಗೆ ಪ್ರೇಕ್ಷಕರ ಪೆಟ್ಟು…

    ಕ್ಯಾಮೆರಾ ಬಳಿ ಬಂದು ಕಣ್ಣೀರಿಟ್ಟ ಖಲಿ! ಕಾರಣ ಗೊತ್ತಾಗದೇ ಪಾಪರಾಜಿಗಳು ಗಲಿಬಿಲಿ, ಫ್ಯಾನ್ಸ್​ಗೆ ಶಾಕ್​

    ಸಿನಿಮಾ ವಿಮರ್ಶೆ: ಮಗು ಹುಡುಕಾಟದಲ್ಲಿ ಸಿಗುವ ನಗುವಿನ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts