VIDEO| ಬ್ಯೂಟಿಗೆ ಬೋಲ್ಡ್​ ಆದ ಕಾಮೆಂಟೇಟರ್​: ಜೂಮ್​ ಮಾಡಿದ ಜಾಗದ ಬಗ್ಗೆ ನೆಟ್ಟಿಗರ ತೀವ್ರ ಆಕ್ಷೇಪ! ​

Arab Woman
Published on

ದುಬೈ: ಕ್ರಿಕೆಟ್​, ಬಾಸ್ಕೆಟ್​ ಬಾಲ್​ ಅಥವಾ ಫುಟ್​ಬಾಲ್​ ಯಾವುದೇ ಆಗಿರಲಿ ಅಭಿಮಾನಿಗಳಿಲ್ಲದ ಕ್ರೀಡೆ ಮನರಂಜನಿಯವಾಗಿರದು. ಈ ಮಾತು ಅಕ್ಷರಶಃ ನಿಜ. ಕ್ರೀಡಾಭಿಮಾನಿಗಳು ಮೈದಾನದಲ್ಲಿ ಕುಳಿತು ಆಟವನ್ನು ಎಂಜಾಯ್​ ಮಾಡಿದರೆ ಜೋಶ್​ ಇಮ್ಮಡಿಯಾಗುತ್ತದೆ. ಅದರಲ್ಲೂ ಗ್ಲಾಮರ್​ ಸೇರಿಕೊಂಡರಂತೂ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದನ್ನು ಕಾಮೆಂಟೇಟರ್​ ಮಾತಿನಲ್ಲೇ ಕೇಳಬಹುದು.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ಮಹಿಳೆಯೊಬ್ಬಳು ಕ್ರೀಡಾಂಗಣದಲ್ಲಿ ಕುಳಿತು ಚಿವಿಂಗ್​ ಗಮ್​ ಜಗಿಯುತ್ತಾ ಸುತ್ತಾಮುತ್ತಾ ನೋಡುತ್ತಿರುವ ದೃಶ್ಯವಿದೆ. ವಿಡಿಯೋದಲ್ಲಿರುವ ಮಹಿಳೆ ತನ್ನ ಮಾದಕ ಸೌಂದರ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದಾಳೆ.

ಆಕೆಯ ಸೌಂದರ್ಯಕ್ಕೆ ಮಾರುಹೋದ ಅರಬ್​ ಕಾಮಂಟೇಟರ್ ಆಟದ ಬಗ್ಗೆ ಕಾಮೆಂಟರಿ ಮಾಡುವುದರ ಬದಲಾಗಿ, ಆಕೆಯ ಸೌಂದರ್ಯವನ್ನು ಕಣ್ಣಲ್ಲೇ ಸವಿಯುತ್ತಾ ಹಾಡು ಹಾಡಿರುವುದು ವಿಡಿಯೋದಲ್ಲಿದೆ. ಆಕೆಯ ಸೌಂದರ್ಯವನ್ನು ಜೂಮ್​ ಇನ್​ ಮಾಡಿ, ಮಾದಕತೆಯನ್ನು ಪ್ರದರ್ಶಿಸಿರುವುದು ಸಹ ವಿಡಿಯೋದಲ್ಲಿದೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವಿಡಿಯೋದಲ್ಲಿ ಜೂಮ್​ ಮಾಡಿರುವ ಜಾಗದ ಬಗ್ಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಇಲ್ಲಿಯವರೆಗೂ ವಿಡಿಯೋ 3 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ಕ್ಯಾಮೆರಾಮೆನ್​ ಮತ್ತು ಕಾಮಂಟೇಟರ್​​ ವಿರುದ್ಧ ಭಾರಿ ಅಸಮಾಧಾನ ಹೊರಹಾಕಿದ್ದಾರೆ.

ವಿಡಿಯೋ ತುಣುಕಿನ ಖಚಿತತೆ ಬಗ್ಗೆ ತಿಳಿದುಬಂದಿಲ್ಲ. ಬಹುಶಃ ವಿಡಿಯೋ ಎಡಿಟ್​ ಮಾಡಿರುವ ವಿಡಿಯೋ ಆಗಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಕೆಲವರು ಹೇಳಿದ್ದರೆ, ಇದು ಸೂಕ್ತವಲ್ಲ ಆದರೂ ಅಪರಾಧವೇನಲ್ಲ ಎನ್ನುವ ಮೂಲಕ ಮಹಿಳೆಯ ಸೌಂದರ್ಯವನ್ನು ಹೊಗಳಲು ಕವಿತೆಯನ್ನು ಹೇಳುವುದು ಸಹಜ ಎಂದು ಕೆಲವು ಟ್ವೀಟ್ ಮಾಡಿದ್ದಾರೆ.

ಹಾಡಿನ ಸಾಹಿತ್ಯ ಅರ್ಥವಾಗದ ಕಾರಣ ಅನೇಕ ಜನರು ಗೊಂದಲಕ್ಕೊಳಗಾಗಿದ್ದಾರೆ. ಆದ್ದರಿಂದ, ಟ್ವಿಟರ್ ಬಳಕೆದಾರರೊಬ್ಬರು ಹಾಡಿನ ಅನುವಾದವನ್ನೂ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net