More

    ಬಿಗ್​ಬಾಸ್​ ನಿರೂಪಕರ ವಿರುದ್ಧವೇ ನಾಲಿಗೆ ಹರಿಬಿಟ್ಟ ಸ್ಪರ್ಧಿ: ಸಿಂಬುಗೆ ಅವಮಾನ, ಅಭಿಮಾನಿಗಳ ಆಕ್ರೊಶ

    ಚೆನ್ನೈ: ಜನಪ್ರಿಯ ಹಾಗೂ ವಿವಾದಿತ ಶೋಗಳಲ್ಲಿ “ಬಿಗ್​ಬಾಸ್”​ ರಿಯಾಲಿಟಿ ಶೋ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ, ಇಲ್ಲಿ ಮನರಂಜನೆಗಿಂತ ವಿವಾದವೇ ಹೆಚ್ಚು ಸುದ್ದಿ ಮಾಡುತ್ತದೆ. ಹಿಂದಿ, ಕನ್ನಡ, ತಮಿಳು, ತೆಲುಗೆ ಹಾಗೂ ಮಲಯಾಳಂ ಎಲ್ಲ ಭಾಷೆಗಳಲ್ಲೂ ಈ ಜನಪ್ರಿಯ ಶೋ ಮೂಡಿಬರುತ್ತಿದೆ. ಈಗಾಗಲೇ ತಮಿಳಿನಲ್ಲಿ 5 ಸೀಸನ್​ ಮುಗಿಸಿದೆ. ಐದೂ ಆವೃತ್ತಿಯಲ್ಲಿ ಸಕಲಕಲಾವಲ್ಲಭ ಕಮಲ್​ ಹಾಸನ್​ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ.

    ಇದೀಗ “ಬಿಗ್​ಬಾಸ್​” ರಿಯಾಲಿಟಿ ಶೋನ ಓಟಿಟಿ ಆವೃತ್ತಿಯಾದ ‘ಬಿಗ್ ಬಾಸ್ ಅಲ್ಟಿಮೇಟ್’ ಶೋ ಹಿಂದಿನ ಐದು ಸೀಸನ್‌ಗಳಲ್ಲಿ ಪಾಲ್ಗೊಂಡಿದ್ದ 14 ಸ್ಪರ್ಧಿಗಳೊಂದಿಗೆ ಪ್ರಾರಂಭವಾಗಿ, ಉತ್ಸಾಹಭರಿತ ಹಂತವನ್ನು ತಲುಪಿದೆ. ಆದರೆ, ಈ ಬಾರಿ ಕಮಲ್​ ಬದಲು ನಟ ಸಿಂಬು ಕಾರ್ಯಕ್ರಮ ನೆಡೆಸಿಕೊಡುತ್ತಿದ್ದಾರೆ. ಕಮಲ್​ ಹಾಸನ್​ ಶೂಟಿಂಗ್​ನಲ್ಲಿ ತುಂಬಾ ಬಿಜೆಯಾಗಿರುವುದರಿಂದ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಇದೀಗ ಆ ಸ್ಥಾನವನ್ನು ಸಿಂಬು ತುಂಬುತ್ತಿದ್ದು, ಇದು ಅವರ ಮೊದಲ ಬಿಗ್​ಬಾಸ್​ ನಿರೂಪಣೆಯಾಗಿದೆ.

    ತಾಜಾ ಬೆಳವಣಿಗೆ ಏನೆಂದರೆ, ಈಗಾಗಲೇ ಕಳೆದ ಆವೃತ್ತಿಗಳಲ್ಲಿ ಪಾಲ್ಗೊಂಡು ಪ್ರೇಕ್ಷಕರನ್ನು ಗೆದ್ದಿರುವ ಸ್ಪರ್ಧಿಗಳೊಂದಿಗೆ ವ್ಯವಹರಿಸುವಾಗ ಹೆಚ್ಚು ಸ್ನೇಹಪರ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಸಿಂಬು ಕಾರ್ಯಕ್ರಮಕ್ಕೆ ತಮ್ಮದೇ ಆದ ಸ್ಪರ್ಶವನ್ನು ತಂದಿದ್ದಾರೆ. ಆದರೆ, ‘ಬಿಗ್ ಬಾಸ್ 4’ ಮೂಲಕ ಗಮನ ಸೆಳೆದಿರುವ ಅನಿತಾ ಸಂಪತ್, ಸಿಂಬು ಅವರ ಕಾರ್ಯವೈಖರಿಯ ಬಗ್ಗೆ ವಿವಾದವನ್ನು ಹುಟ್ಟುಹಾಕಿದ್ದು ಅವರ ಅಭಿಮಾನಿಗಳನ್ನು ಕೆರಳಿಸಿದೆ.

    ವಿಡಿಯೋವೊಂದು ವೈರಲ್​ ಆಗಿದ್ದು, ಅದರಲ್ಲಿ ಅನಿತಾ ಸಿಂಬು ಅವರ ಬಗ್ಗೆ ಮಾತನಾಡಿದ್ದಾರೆ. ಪ್ರತಿಸ್ಪರ್ಧಿ ಸುರುಥಿ ಜತೆ ಮಾತನಾಡುತ್ತಾ, ನಾನು ಏನು ಹೇಳಿದೆನೋ ಅದು ಸಿಂಬುಗೆ ಅರ್ಥವಾಗಲು ತುಂಬಾ ಆಳವಾಗಿತ್ತು ಮತ್ತು ಅವರು ನನ್ನ ರೀತಿ ಯೋಚಿಸುವುದೇ ಇಲ್ಲ. ಏಕೆಂದರೆ, ಈ ಶೋಗೆ ಸಿಂಬು ತುಂಬಾ ಹೊಸಬರು. ಕಳೆದ ಐದು ಸೀಸನ್​ ನಡೆಸಿರುವ ಅನುಭವ ಹೊಂದಿರುವುದರಿಂದ ಕಮಲ್​ ಅವರು ತುಂಬಾ ಸುಲಭವಾಗಿ ನಿರ್ವಹಿಸುತ್ತಿದ್ದರು ಎಂದು ಹೇಳಿದ್ದಾರೆ.

    ಅನಿತಾ ಅವರ ಈ ಮಾತು ಸಿಂಬು ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. ಇದು ಸಿಂಬುಗೆ ಮಾಡಿದ ಅವಮಾನ ಎಂದಿರುವ ಫ್ಯಾನ್ಸ್​, ಅನಿತಾ ಅವರನ್ನು ಈ ವಾರ ‘ಬಿಗ್ ಬಾಸ್ ಅಲ್ಟಿಮೇಟ್’ ನಿಂದ ಹೊರಹಾಕಬೇಕು ಎಂದು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಮತ್ತು ಅವರ ವಿರುದ್ಧ ಮತ ಚಲಾಯಿಸಲು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅನಿತಾ ಅವರ ವಿವಾದಾತ್ಮಕ ವೀಡಿಯೊ ಶೋನಲ್ಲಿ ಉಳಿಯುವ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)

    ಬಾಲಕಿ ಪರ ಹೈಕೋರ್ಟ್ ನೀಡಿದ ತೀರ್ಪಿಗೆ ಹೆದರಿ ಮೇಲ್ಮನವಿಯಲ್ಲಿ ಅಳಲು ತೋಡಿಕೊಂಡ ಕೇರಳ ಸರ್ಕಾರ!

    ಈ ಸಾವು ನ್ಯಾಯವೇ? ಗಂಡನ ಈ ಕೆಟ್ಟ ಚಟದಿಂದ ನೊಂದು ಸಾವಿನ ಹಾದಿ ಹಿಡಿದ 8 ತಿಂಗಳ ಗರ್ಭಿಣಿ

    ನನ್ನ ಬಳಿ ರೆಕಾರ್ಡಿಂಗ್ಸ್​ ಇವೆ…ಟಾಲಿವುಟ್​ ನಟಿ, ನಿರೂಪಕಿ ರಶ್ಮಿ ವಿರುದ್ಧ ಶಾಕಿಂಗ್​ ಹೇಳಿಕೆ ಕೊಟ್ಟ ನಿರ್ಮಾಪಕ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts