ಈ ಸಾವು ನ್ಯಾಯವೇ? ಗಂಡನ ಈ ಕೆಟ್ಟ ಚಟದಿಂದ ನೊಂದು ಸಾವಿನ ಹಾದಿ ಹಿಡಿದ 8 ತಿಂಗಳ ಗರ್ಭಿಣಿ

Kerala Girl
Published on

ತಿರುವನಂತಪುರಂ: ಎಂಟು ತಿಂಗಳ ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಕೇರಳದ ಕಲ್ಲಾರದಲ್ಲಿರುವ ಆಕೆಯ ಮನೆಯಲ್ಲಿ ನಡೆದಿದೆ.

ಮೃತ ಗರ್ಭಿಣಿಯನ್ನು ಭಾಗ್ಯ (21) ಎಂದು ಗುರುತಿಸಲಾಗಿದೆ. ಗಂಡನ ಮದ್ಯ ವ್ಯಸನದ ಕಾಟದಿಂದ ಖಿನ್ನತೆಗೆ ಜಾರಿದ್ದ ಭಾಗ್ಯ, ಅದರಿಂದ ಹೊರಬರಲಾಗದೇ ಇನ್ನು ಕೆಲವೇ ದಿನಗಳಲ್ಲಿ ಹೊರ ಜಗತ್ತಿಗೆ ಕಾಲಿಡಬೇಕಾಗಿದ್ದ ಕಂದಮ್ಮ ಜತೆಗೆ ಭಾಗ್ಯ ಸಾವಿನ ಹಾದಿ ಹಿಡಿದಿದ್ದಾಳೆ.

ಭಾನುವಾರ ಸಂಜೆ 4 ಗಂಟೆಗೆ ಭಾಗ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು. ಪತಿ ತನ್ನ ಸ್ನೇಹಿತರೊಂದಿಗೆ ಯಾವಾಗಲೂ ಮದ್ಯ ಸೇವಿಸಲು ಹೋಗುತ್ತಿದ್ದರಿಂದ ಇಬ್ಬರ ನಡುವೆ ಇದೇ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ಭಾಗ್ಯ ಖಿನ್ನತೆಗೆ ಜಾರಿದ್ದಳು.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಲ್ಲಾರ ಪೊಲೀಸರು ಭಾಗ್ಯಳ ಮೃತದೇಹವನ್ನು ಸರ್ಕಾರಿ ಮೆಡಿಕಲ್​ ಕಾಲೇಜಿಗೆ ಸ್ಥಳಾಂತರಿಸಿದ್ದು, ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net