ಟಿವಿ ನೋಡೋ ಆಸೆಯಿಂದ ಮನೆಗೆ ಬಂದ ಬಾಲಕಿ ಮೇಲೆ ಕಾಮುಕನ ಅಟ್ಟಹಾಸ ಬೆಚ್ಚಿಬೀಳಿಸುವಂತಿದೆ!

Minor
Published on

ಶ್ರೀಕಾಕುಳಂ: ಬಡತನವನ್ನೇ ದಾಳವಾಗಿಸಿಕೊಂಡು ಟಿವಿ ನೋಡಲು ಅಪ್ರಾಪ್ತೆಯನ್ನು ಮನೆಗೆ ಕರೆಯುತ್ತಿದ್ದ ಕಾಮುಕನೊಬ್ಬ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ. ಅಪ್ರಾಪ್ತೆಯು ಗರ್ಭಿಣಿಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಅಂದಹಾಗೆ ಈ ಘಟನೆ ಶ್ರೀಕಾಕುಳಂ ಜಿಲ್ಲೆಯ ಜಿ. ಸಿಗಡಂ ವಲಯದ ಗೆಡ್ಡಕಂಚರಂ ಗ್ರಾಮದಲ್ಲಿ ನಡೆದಿದೆ. ದಿನಗೂಲಿ ನೌಕರನಾಗಿರುವ ಆರೋಪಿ ಅನಿಲ್​ (26) ಎಂಬಾತನನ್ನು ಬಂಧಿಸಲಾಗಿದೆ.

ವಿವರಣೆಗೆ ಬರುವುದಾದರೆ, ತಮ್ಮದೇ ಗ್ರಾಮದ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಆರೋಪಿ ಅನಿಲ್​ ಕಾಮದೃಷ್ಟಿ ಬಿದ್ದಿತ್ತು. ಮೊದಲೇ ಬಾಲಕಿ ಕುಟುಂಬ ತುಂಬಾ ಬಡವರು. ಅವರ ಬಳಿ ಟಿವಿಯು ಸಹ ಇರಲಿಲ್ಲ. ಹೀಗಾಗಿ ಬಾಲಕಿ ಪಕ್ಕದ ಮನೆಗೆ ಹೋಗಿ ಬಿಡುವಿನ ಸಮಯದಲ್ಲಿ ಟಿವಿ ನೋಡುತ್ತಿದ್ದಳು. ಇದನ್ನು ಗಮನಿಸಿದ್ದ ಆರೋಪಿ, ನಮ್ಮ ಮನೆಗೆ ಬಂದರೆ ನಿನಗೆ ಇಷ್ಟವಾದ ಚಾನೆಲ್​ ಮತ್ತು ಪ್ರೋಗ್ರಾಮ್​ ನೋಡಬಹುದು ಎಂದು ಆಮಿಷವೊಡ್ಡಿದ್ದಾನೆ. ಆತನ ಮಾತನ್ನು ನಂಬಿದ ಬಾಲಕಿ ಅವನ ಮನೆಗೆ ಹೋಗಲು ಆರಂಭಿಸಿದ್ದಾಳೆ.

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಬ್ಲ್ಯಾಕ್​ಮೇಲ್​ ಮಾಡಿ ಅನೇಕ ಬಾರಿ ಬಾಲಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಬೆದರಿಕೆ ಹೆದರಿದ್ದ ಬಾಲಕಿ ಯಾರೊಂದಿಗೆ ಹೇಳಿಕೊಂಡಿರಲಿಲ್ಲ. ಆದರೆ, ಗುಟ್ಟು ಹೊಟ್ಟೆಯಿಂದ ರಟ್ಟಾಯಿತು ಎಂಬಂತೆ ಬಾಲಕಿ ನಂತರದ ದಿನಗಳಲ್ಲಿ ಗರ್ಭಿಣಿಯಾಗಿದ್ದಾಳೆ. ಕರೊನಾ ಹಿನ್ನೆಲೆಯಲ್ಲಿ ವಲಸೆ ಬಂದ ಪೋಷಕರು ಮಗಳಲ್ಲಿ ಉಂಟಾದ ದೈಹಿಕ ಬದಲಾವಣೆಗಳನ್ನು ನೋಡಿ ಅನುಮಾನಗೊಂಡು ರಾಜಮಂಡ್ರಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಪರೀಕ್ಷಿಸಿದ ವೈದ್ಯರು ಒಮ್ಮೆ ಶಾಕ್​ ಆಗಿದ್ದಾರೆ. ಏಕೆಂದರೆ ಚಿಕ್ಕವಯಸಿನಲ್ಲೇ ಯುವತಿ ಗರ್ಭಿಣಿಯಾಗಿದ್ದಳು. ಮನೆಗೆ ಕರೆತಂದು ವಿಚಾರಿಸಿದಾಗ ಎಲ್ಲವನ್ನು ವಿವರಿಸಿದ್ದಾಳೆ. ಬಳಿಕ ಸಂತ್ರಸ್ತೆಯ ಕುಟುಂಬ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಲು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net