ಅಕ್ಕ or ಆಂಟಿ ಎಂದು ಕರೆಯಬೇಕೆ? ನೆಟ್ಟಿಗನ ಪ್ರಶ್ನೆಗೆ ಖ್ಯಾತ ನಿರೂಪಕಿ ಅನಸೂಯಾ ಉತ್ತರ ಹೀಗಿತ್ತು....

Anasuya
Published on

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಸೂಯ ಭಾರದ್ವಾಜ್ ಅವರು ನೆಟ್ಟಿಗರು ಕೇಳಿದ ಪ್ರಶ್ನೆಯೊಂದಕ್ಕೆ ಗರಂ ಆಗಿದ್ದಾರೆ.

ಟಿವಿ ಕಾರ್ಯಕ್ರಮಗಳು ಮಾತ್ರವಲ್ಲದೇ ಸಿನಿಮಾ ಶೂಟಿಂಗ್​ನಲ್ಲಿಯೂ ಬಿಜಿಯಾಗಿರುವ ಅನುಸೂಯ ಅವರು ತೆಲುಗು ಮನರಂಜನಾ ಲೋಕದ ಬಹುಬೇಡಿಕೆಯ ಕಲಾವಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರೀಯರಾಗಿರುವ ಅನುಸೂಯ ಆಗಾಗ ತಮ್ಮ ಬೋಲ್ಡ್​ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಇತ್ತೀಚೆಗೆ ಸಂಕ್ರಾಂತಿ ಹಬ್ಬವನ್ನು ಕುಟುಂಬ ಸಮೇತ ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಈ ವೇಳೆ ತಮ್ಮ ಪತಿಯ ಜತೆ ಗಾಳಿಪಟ ಹಾರಿಸುವ ಫೋಟೋಗಳನ್ನು ಅನುಸೂಯ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಫೋಟೋ-ವಿಡಿಯೋ ಮಾತ್ರವಲ್ಲದೇ, ಅಭಿಮಾನಿಗಳ ಜತೆಯಲ್ಲಿ ಜಾಲತಾಣ ಮೂಲಕ ಚರ್ಚೆಯನ್ನು ನಡೆಸುತ್ತಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಟ್ಟಿಗೆ ಚಾಟ್​ ಮಾಡುವಾಗ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆ ಅನುಸೂಯ ಕೋಪಕ್ಕೆ ಕಾರಣವಾಗಿದೆ.

ನಾನು ನಿಮ್ಮನ್ನು ಅಕ್ಕ ಅಥವಾ ಆಂಟಿ ಎಂದು ಕರೆಯಬೇಕೆ ಎಂದು ನೆಟ್ಟಿಗನೊಬ್ಬ ಪ್ರಶ್ನಿಸಿದ್ದ. ಇದಕ್ಕೆ ಕೆಂಡಾಮಂಡಲರಾದ ಅನುಸೂಯ ನನ್ನನ್ನು ಯಾವ ರೀತಿಯು ಕರೆಯಬೇಡಿ. ನನ್ನ ಬಗ್ಗೆ ಏನೂ ಗೊತ್ತಿಲ್ಲದ ಮೇಲೆ ನನ್ನನ್ನು ಆಂಟಿ ಎಂದು ಕರೆಯೋಕೆ ನೀನ್ಯಾರು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತ ನೆಟ್ಟಿಗರು ಸಹ ಅನಸೂಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಕ ಅಥವಾ ಆಂಟಿ ಎಂದು ಕರೆಯುವುದರಲ್ಲಿ ಏನು ತಪ್ಪಿದೆ. ಈ ರೀತಿ ಕರೆದರೆ ಅವಮಾನ ಹೇಗಾಗುತ್ತದೆ? ಎಂದು ಪ್ರಶ್ನಿಸುವ ಮೂಲಕ ಅನಸೂಯಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಇತ್ತೀಚೆಗೆ ಬಿಡುಗೊಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿರುವ ಅಲ್ಲು ಅರ್ಜುನ್​ ನಟನೆಯ ಪುಷ್ಪ ಚಿತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ಟಿವಿ ಕಾರ್ಯಕ್ರಮಗಳಲ್ಲೂ ತುಂಬಾ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net