More

    ಭೋಜ್​ಪುರಿ ನಟಿ ತ್ರಿಷಾ ಕರ್​ ಮಧು ಬೆನ್ನಲ್ಲೇ ಮತ್ತೊಬ್ಬ ನಟಿಯ ಅಶ್ಲೀಲ ವಿಡಿಯೋ ವೈರಲ್​..!

    ನವದೆಹಲಿ: ಭೋಜ್​ಪುರಿ ನಟಿ ತ್ರಿಷಾ ಕರ್​ ಮಧು ಎಂಎಂಎಸ್​ ವಿಡಿಯೋ ಲೀಕ್​ ಆದ ಬೆನ್ನಲ್ಲೇ ಮತ್ತೊಬ್ಬ ಭೋಜ್​ಪುರಿ ನಟಿ ಖಾಸಗಿ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್​ ಆಗಿದೆ. ನಟಿ ಪ್ರಿಯಾಂಕಾ ಪಂಡಿತ್​ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇನ್ನು ಭೋಜ್​ಪುರಿ ಸಿನಿಮಾ ಇಂಡಸ್ಟ್ರಿ ಕೆಟ್ಟ ಕಾರಣದಿಂದಾಗಿ ದಿನದಿಂದ ದಿನಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗಷ್ಟೇ ನಟಿ ತ್ರಿಷಾ ಕರ್​ ಮಧು ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಇದೀಗ ಮತ್ತೊಬ್ಬ ನಟಿ ಪ್ರಿಯಾಂಕ ಪಂಡಿತ್​ ವಿಡಿಯೋ ಕೂಡ ಟ್ರೋಲಿಗರ ಆಹಾರವಾಗಿದೆ.

    ಸದ್ಯ ವೈರಲ್​ ಆಗಿರುವ ಪ್ರಿಯಾಂಕಾ ವಿಡಿಯೋ ಹಳೆಯದ್ದು ಎನ್ನಲಾಗಿದ್ದು, ತ್ರಿಷಾ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪ್ರಿಯಾಂಕಾ ವಿಡಿಯೋ ಕೂಡ ಮತ್ತೆ ವೈರಲ್​ ಆಗಿದೆ. ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿರುವ ನಟಿ, ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಈ ವಿಡಿಯೋವನ್ನು ಪ್ರಕಟಿಸಲಾಗಿದೆ. ಅಲ್ಲದೆ, ಆ ವಿಡಿಯೋದಲ್ಲಿ ಇರುವುದು ನಾನಲ್ಲ. ದುರುದ್ದೇಶದಿಂದಲೇ ವಿಡಿಯೋವನ್ನು ಎಡಿಟ್​ ಮಾಡಿ ಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

    ಈ ಸಂಬಂಧ ನಟಿ ಪ್ರಿಯಾಂಕಾ ದೂರು ಸಹ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಎಂಎಂಎಸ್​ ಲಿಂಕ್​ನ ಮೂಲವನ್ನು ಹುಡುಕುತ್ತಿದ್ದಾರೆ. ಅಲ್ಲದೆ, ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋಗಳನ್ನು ತೆಗೆದು ಹಾಕುತ್ತಿದ್ದಾರೆ.

    ಇನ್ನು ಪ್ರಿಯಾಂಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ, 2013ರಲ್ಲಿ ತೆರೆಕಂಡ “ಜೀನಾ ತೇರಿ ಗಾಳಿ ಮೈನ್​” ಚಿತ್ರ ಮೂಲಕ ಪ್ರಿಯಾಂಕ ಭೋಜ್ಪುರಿ ಸಿನಿಮಾ ರಂಗವನ್ನು ಪ್ರವೇಶಿಸಿದರು. ಪವನ್​ ಪುತ್ರ, ಇಚ್ಛಾಧಾತಿ, ಅವರ ಬಲಮ್​, ಕರಮ್​ ಯುಗ್​ ಮತ್ತು ತೊಡ್​ ಡೆ ದುಶ್ಮನ್​ ಕಿ ನಲಿ ರಾಮ್​ ಔರ್​ ಅಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪ್ರಿಯಾಂಕಾ ಅಭಿನಯಿಸಿದ್ದಾರೆ.

    ಕೆಲವು ದಿನಗಳ ಹಿಂದೆ ನಟಿ ತ್ರಿಷಾ ಕರ್​ ಮಧು ಅವರ ವಿಡಿಯೋ ಲೀಕ್​ ಆಗಿತ್ತು. ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಧು, ದೇವರು ಎಲ್ಲವನ್ನು ನೋಡುತ್ತಿದ್ದಾನೆ. ನನ್ನ ಹೆಸರನ್ನು ಕೆಡಿಸಲು ಉದ್ದೇಶಪೂರ್ವಕವಾಗಿಯೇ ಕೆಲವು ಮಂದಿ ವಿಡಿಯೋವನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದ್ದಾರೆ. ಇಂತಹ ಕೀಳುಮಟ್ಟಕ್ಕೆ ಇಳಿಯುತ್ತಾರೆಂದು ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್​)

    ಬಾಯ್​ಫ್ರೆಂಡ್​ ಜತೆ ಏಕಾಂತದಲ್ಲಿರೋ ಖ್ಯಾತ ನಟಿಯ ವಿಡಿಯೋ ಲೀಕ್: ಟ್ರೋಲಿಗರಿಂದ ಗಂಭೀರ ಆರೋಪ​!

    ಪಾನೀಪುರಿ ಅಂದ್ರೆ ತುಂಬಾ ಇಷ್ಟನಾ? ಹಾಗಿದ್ರೆ ಈ ವಿಡಿಯೋ ಒಮ್ಮೆ ನೋಡಿ ಡಿಸೈಡ್​ ಮಾಡಿ…

    ತಾಲಿಬಾನ್ ಹೇಳಿದ್ದೇ ಬೇರೆ..ಆಗ್ತಿರೋದೇ ಬೇರೆ! ಬಯಲಾಗ್ತಿದೆ ತಾಲಿಬಾನಿಗಳ ಅಸಲಿ ಮುಖವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts