More

    ಸಿಕ್ಕಾಪಟ್ಟೆ ಟ್ರೋಲ್​ ಆದ ರಶ್ಮಿಕಾ: ಕಿರಿಕ್​ ಬ್ಯೂಟಿಯ ತುಂಡುಡುಗೆ ಹಿಂದಿನ ಉದ್ದೇಶ ಇದೆನಾ?

    ಬೆಂಗಳೂರು: ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರು ಸುದ್ದಿ ಆಗುತ್ತಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಅವರು ಟ್ರೋಲ್​ ಆಗ್ತಾನೆ ಇರ್ತಾರೆ. ಸ್ಯಾಂಡಲ್​ವುಡ್​ಗಿಂತ ಟಾಲಿವುಡ್​ನಲ್ಲೇ ಹೆಚ್ಚು ಸದ್ದು ಮಾಡುತ್ತಿರುವ ಕಿರಿಕ್ ಬ್ಯೂಟಿ ಕೆಲವೊಮ್ಮೆ ಸಿನಿಮಾಗಿಂತ ಬೇರೆ ಕಾರಣಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇದೀಗ ಅಂಥದ್ದೇ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾರೆ.

    ಪುಷ್ಪ ಚಿತ್ರ ಹಿಟ್​ ಆಗಿದ್ದೇ ತಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ರಶ್ಮಿಕಾ, ತಮ್ಮ ಮೈಮೇಲೆ ಬಟ್ಟೆ ಹಾಕೋದನ್ನೇ ಮರೆತು ಬಿಟ್ಟಿದ್ದಾರಾ ಎಂದು ನೆಟ್ಟಿಗರು ರಶ್ಮಿಕಾರನ್ನು ಟ್ರೋಲ್​ ಮಾಡುತ್ತಿದ್ದಾರೆ. ಆಗಾಗ ಫೋಟೋಶೂಟ್​ಗಳಲ್ಲಿ ಅರ್ಧಂಬರ್ಧ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ, ಇದೀಗ ವಿಚಿತ್ರ ಉಡುಗೆಯೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

    ಚಳಿಗಾಲದಲ್ಲಿ ಅದರಲ್ಲೂ ಮುಂಬೈ ವಿಮಾನ ನಿಲ್ದಾಣದಲ್ಲಿ ಬಿಳಿ ಬಣ್ಣದ ಸ್ವಟ್​ ಶರ್ಟ್​ ಧರಿಸಿ, ಗುಲಾಬಿ ಬಣ್ಣದ ಟೋಪಿ ತೊಟ್ಟು ಶಾರ್ಟ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಉಡುಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಈಕೆಗೇನು ಚಳಿ ಆಗಲ್ವಾ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದರೆ, ರಶ್ಮಿಕಾ ಪ್ಯಾಂಟ್​ ಹಾಕೋದನ್ನೇ ಮರೆತಿದ್ದಾರೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.

    ಸದ್ಯ ರಶ್ಮಿಕಾ ಬಾಲಿವುಡ್​ನತ್ತ ಗಮನ ಹರಿಸಿದ್ದು, ಈಗಿನಿಂದಲೇ ಅಲ್ಲಿನ ಸಂಸ್ಕೃತಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾರಾ ಎಂಬ ಚರ್ಚೆಗಳು ಆರಂಭವಾಗಿವೆ. ಬಾಲಿವುಡ್​ ನಿರ್ಮಾಪಕರನ್ನು ಸೆಳೆಯಲು ರಶ್ಮಿಕಾ ಈ ತಂತ್ರ ಅನುಸರಿಸುತ್ತಿದ್ದಾರಾ? ಬಿಟೌನ್​ ಟಾಪ್​ ನಾಯಕಿಯರನ್ನು ಹಿಂದಿಕ್ಕಲು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರಾ? ಯಾವುದೇ ಬೋಲ್ಡ್​ ಪಾತ್ರಕ್ಕೂ ಸೈ ಎನ್ನುವ ಸಂದೇಶವನ್ನು ಬಟ್ಟೆಯಿಂದಲೇ ರವಾನಿಸುತ್ತಿದ್ದಾರಾ? ಎಂಬ ಮಾತುಗಳು ಇದೀಗ ಕೇಳಿಬರುತ್ತಿದ್ದು, ತುಂಡುಡುಗೆ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

    ಯುವರಾಜ್​ ಸಿಂಗ್​-ಹೆಜೆಲ್ ಕೀಚ್​ ದಂಪತಿಗೆ ಗಂಡು ಮಗು ಜನನ: ಅಪ್ಪನಾದ ಖುಷಿ ಹಂಚಿಕೊಂಡ ಯುವಿ

    ಹಣ ಕೇಳಿದ ಬಡ ಹುಡುಗಿಯ ಬಳಿ ನಟಿ ರಶ್ಮಿಕಾ ಮಂದಣ್ಣ ನಡೆದುಕೊಂಡ ರೀತಿಗೆ ತೀವ್ರ ಆಕ್ರೋಶ!

    ಕಾರು ಖರೀದಿಗೆ ಹೋಗಿದ್ದ ತುಮಕೂರು ರೈತನಿಗೆ ಅವಮಾನ: ಆನಂದ್ ಮಹೀಂದ್ರಾ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts