ಯುವರಾಜ್​ ಸಿಂಗ್​-ಹೆಜೆಲ್ ಕೀಚ್​ ದಂಪತಿಗೆ ಗಂಡು ಮಗು ಜನನ: ಅಪ್ಪನಾದ ಖುಷಿ ಹಂಚಿಕೊಂಡ ಯುವಿ

Yuvi
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್ ಅವರ ಪತ್ನಿ ಹಜೆಲ್​ ಕೀಚ್​ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಪ್ಪನಾದ ಖುಷಿಯನ್ನು ಯುವಿ ತಮ್ಮ ಟ್ವಿಟ್ಟರ್​ ಖಾತೆಯ ಮೂಲಕ ನಿನ್ನೆ (ಜ.25) ಹಂಚಿಕೊಂಡಿದ್ದಾರೆ.

ಎಲ್ಲ ನನ್ನ ಅಭಿಮಾನಿಗಳು, ಕುಟುಂಬದ ಸದಸ್ಯರು ಮತ್ತು ಫ್ರೆಂಡ್ಸ್​ ಜತೆಗೆ ಹಂಚಿಕೊಳ್ಳುವ ವಿಚಾರವೇನೆಂದರೆ, ಪತ್ನಿ ಹೆಜೆಲ್ ಮತ್ತು ನನಗೆ ದೇವರು​ ಗಂಡು ಮಗುವನ್ನು ಕರುಣಿಸಿದ್ದಾನೆ. ಇದಕ್ಕಾಗಿ ದೇವರಿಗೆ ಧನ್ಯವಾದಗಳು. ನಮ್ಮ ಮಗುವನ್ನು ಈ ಜಗತ್ತಿಗೆ ಸ್ವಾಗತಿಸುತ್ತಿದ್ದೇವೆ ಎಂದಿರುವ ಯುವಿ, ಕೊನೆಯಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಯುವಿ ಮಾಡಿರುವ ಪೋಸ್ಟ್​ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮತ್ತು ಕ್ರಿಕೆಟ್​ ಬಳಗದ ಅನೇಕ ಸದಸ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಯುವಿ ಪತ್ನಿ ಹೆಜೆಲ್​ ಕೂಡ ಪೋಸ್ಟ್​ ಶೇರ್​ ಮಾಡಿದ್ದು, ಅವರಿಗೂ ಅಭಿನಂದನೆಗಳ ಮಹಾಪೂರ ಹರಿದುಬಂದಿವೆ.

ಅಂದಹಾಗೆ ಯುವಿ ಮತ್ತು ಹೆಜೆಲ್​ 2016 ನವೆಂಬರ್​ 30ರಂದು ಮದುವೆಯಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net