More

    ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಕ್ಕೆ ತೀವ್ರ ಅಸಮಾಧಾನ: ಪವಿ ಟೀಚರ್​ ಕೊಟ್ಟ ಸ್ಪಷ್ಟನೆ ಹೀಗಿದೆ…

    ಚೆನ್ನೈ: ಹಿರಿಯ ನಟ ಹಾಗೂ ನಿರ್ದೇಶಕ ಪಾರ್ಥಿಬನ್​ ಅಭಿನಯದ ಪ್ರಯೋಗಾತ್ಮಕ ಸಿನಿಮಾ “ಇರವಿನ್​ ನಿಹಾಲ್​” ಜುಲೈ 15ರಂದು ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಗಳಿಸಿದೆ. ಅಲ್ಲದೆ, ಪಾರ್ಥಿಬನ್​ ತಾಯಿಯ ಪಾತ್ರ ಮಾಡಿರುವ ನಟಿ ರೇಖಾ ನಾಯರ್ ಅವರ ಎದೆಯ ಭಾಗವನ್ನು ತೋರಿಸುವ ಮೂಲಕ ಈ ಚಿತ್ರ ವಿವಾದವನ್ನು ಮೈಮೇಲೆ ಎಳೆದುಕೊಂಡಿತು. ​

    ಇದೇ ದೃಶ್ಯದಿಂದಾಗಿ ನಟ-ವಿಮರ್ಶಕ ಬೈಲ್ವಾನ್ ರಂಗನಾಥನ್​ ಅವರು ರೇಖಾ ನಾಯರ್ ಅವರನ್ನು ಕಟುವಾಗಿ ಟೀಕಿಸಿದರು. ಇದಾದ ಬೆನ್ನಲ್ಲೇ ರಂಗನಾಥನ್​ ಅವರು ಮುಂಜಾನೆ ಜಾಗಿಂಗ್​ ಮಾಡುವಾಗ ಸಾರ್ವಜನಿಕ ಸ್ಥಳದಲ್ಲಿ ಎದುರಾದಂತ ಸಂದರ್ಭದಲ್ಲಿ ರೇಖಾ ನಾಯರ್​ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಇದು ಭಾರೀ ಸುದ್ದಿಯಾಗಿತ್ತು.

    ಇದೇ ಚಿತ್ರದಲ್ಲಿ ನಟಿ ಬ್ರಿಗಿದಾ ಪಾರ್ಥಿಬನ್​ ಪತ್ನಿಯ ಪಾತ್ರವನ್ನು ಮಾಡಿದ್ದಾರೆ. ಒಂದು ಪ್ರಮುಖ ದೃಶ್ಯದಲ್ಲಿ ಬೆತ್ತಲೆ ರೀತಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಬ್ರಿಗಿದಾ ಅವರ ಅಭಿಮಾನಿಗಳು ಅವರ ಮೇಲೆ ಅಸಮಾಧಾನಗೊಂಡಿದ್ದಾರೆ. ಪವಿ ಟೀಚರ್​ ವೆಬ್​ ಸರಣಿಯಲ್ಲಿ ಅವರ ಪಾತ್ರವನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ, ಈ ಸಿನಿಮಾ ಅವರಿಗೆ ಸ್ವಲ್ಪವೂ ಇಷ್ಟವಿಲ್ಲ.

    ಅಭಿಮಾನಿಗಳು ಅಸಮಾಧಾನಗೊಂಡಿರುವ ಸಂಗತಿ ಬ್ರಿಗಿದಾ ಅವರಿಗೆ ತಿಳಿದಿದ್ದು, ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿಕೊಂಡಿದ್ದು, ಒಂದು ಅಂಶವನ್ನು ಹೊರತುಪಡಿಸಿ ಎಲ್ಲವೂ ಸರಿಯಾಗಿದೆ. ಆ ಅಂಶವೇ ಬೆತ್ತಲೆ ದೃಶ್ಯ. ಆದರೆ, ನಾನು ಶಾರ್ಟ್ಸ್​ ಮತ್ತು ಟಾಪ್​ ಹಾಕಿಕೊಂಡಿದ್ದೆ. ಎಲ್ಲರು ಅಪಾರ್ಥ ಮಾಡಿಕೊಂಡಿದ್ದಾರೆ. ಥಂಬ್​ನೈಲ್​ಗಳಲ್ಲಿ ಫೋಟೋಗಳನ್ನು ಬಳಸುವ ಮೂಲಕ ನಾನು ಬೆತ್ತಲೆಯಾಗಿ ಕುಳಿತಿದ್ದೆ ಎಂದು ಅಪಪ್ರಚಾರ ಮಾಡಿದ್ದಾರೆ. ಸಾಧ್ಯವಾದರೆ ನಾನು ಹೇಳಿದ್ದನ್ನು ಇತರರಿಗೆ ತಿಳಿಸಿ ಇದನ್ನು ಹರಡಿ ಎಂದು ಬ್ರಿಗಿದಾ ಹೇಳಿದ್ದಾರೆ.

    ಬ್ರಿಗಿಡಾ ಅವರು ಚರ್ಮದ ಬಣ್ಣದ ಮೇಲ್ಭಾಗವನ್ನು ಬೆತ್ತಲೆ ಚರ್ಮದಂತೆ ಕಾಣುವ ಎಲೆಸ್ಟಿಕ್​ನೊಂದಿಗೆ ಧರಿಸಿದ್ದೆ ಎಂದು ವಿವರಿಸಿದ್ದಾರೆ. ಅಲ್ಲದೆ, ಈ ದೃಶ್ಯವನ್ನು ಮಾಡುವುದು ತುಂಬಾ ಅಹಿತಕರವಾಗಿತ್ತು. ಏಕೆಂದರೆ, ಅವರಿಗೆ ಕಡಿಮೆ ಬಟ್ಟೆಗಳನ್ನು ಧರಿಸಲು ತುಂಬಾ ಮುಜುಗರವಂತೆ ಮತ್ತು ದೇಹವನ್ನು ಬಹಿರಂಗಪಡಿಸುವ ಬಗ್ಗೆ ತುಂಬಾ ಜಾಗೃತರಂತೆ. ಆದರೂ, ಕತೆಗೆ ಅವಶ್ಯಕತೆ ಇದ್ದರಿಂದ ಈ ದೃಶ್ಯ ಮಾಡಬೇಕಾಯಿತು ಎಂದಿದ್ದಾರೆ.

    ಅಂದಹಾಗೆ ಬ್ರಿಗಿದಾ ಅವರು ಮಾಸ್ಟರ್​, ವೇಲನ್​ ಮತ್ತು ಅಯೋಗ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆಸ್ಸೀಸ್​)

    ದಾಳಿ ಮಾಡಿದಷ್ಟು ದುಡ್ಡಿನ ರಾಶಿ! ನಟಿ ಅರ್ಪಿತಾಳ ಮತ್ತೊಂದು ಫ್ಲ್ಯಾಟ್​ನಲ್ಲಿ 20 ಕೋಟಿ ನಗದು, 3 ಕೆಜಿ ಚಿನ್ನ ಪತ್ತೆ

    ಬೆಳ್ಳಾರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್​ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

    ಒಂದು ಚಪಾತಿ ಕೊಟ್ಟ ಮೇಲೂ ಇನ್ನೊಂದು ಕೇಳಿದ, ಕೊಡದಿದ್ದಕ್ಕೆ ನಡೆಯಿತು ಭೀಕರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts