More

    ಗುಪ್ತಾಂಗದಲ್ಲಿ ಮದ್ಯದ ಬಾಟಲ್​ ತೂರಿಸಿ ಚಿತ್ರಹಿಂಸೆ: ಸ್ಟಾರ್​ ನಟನ ವಿರುದ್ಧ ನಟಿಯಿಂದ ಗಂಭೀರ ಆರೋಪ

    ನವದೆಹಲಿ: ಸೆಲೆಬ್ರಿಟಿಗಳ ಮದುವೆಗಳು ಒಂದು ರೀತಿ ಕಾಲ್ಪನಿಕ ಕತೆಗಳಂತೆ ಅದನ್ನು ನೋಡಿ ಅಭಿಮಾನಿಗಳು ಎಷ್ಟು ಥ್ರಿಲ್​ ಆಗುತ್ತಾರೋ ಅದೇ ರೀತಿಯಲ್ಲಿ ಸೆಲಿಬ್ರಿಟಿಗಳ ವಿಚ್ಛೇದನಗಳು ಕೂಡ ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿ ಬಿಡುತ್ತದೆ. ಸ್ಟಾರ್​ ದಂಪತಿಯನ್ನು ನೋಡಿ ಖುಷಿಪಡುವ ಅಭಿಮಾನಿಗಳು ಅದೇ ಸ್ಟಾರ್​ ದಂಪತಿ ಬೇರೆಯಾಗಿ ಕಿತ್ತಾಡುವುದನ್ನು ನೋಡಿ ಸ್ವಂತದವರ ರೀತಿಯಲ್ಲಿ ಭಾವುಕರಾಗುತ್ತಾರೆ.

    ನಿಮಗೆ ಜಾನಿ ಡೆಪ್​ ಗೊತ್ತಿರಬಹುದು. ಇವರು ಹಾಲಿವುಡ್​ನ ಖ್ಯಾತ ನಟ. ಬ್ಲಾಕ್​ಬಸ್ಟರ್​ ಪೈರಟ್ಸ್​ ಆಫ್​ ದಿ ಕೆರೆಬ್ಬಿಯನ್​ ಚಿತ್ರದಲ್ಲಿ ನಟಿಸಿದ್ದಾರೆ. ಜಾನಿ ಡೆಪ್​ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅವರನ್ನು ಹೃದಯತುಂಬಿ ಆರಾಧಿಸುತ್ತಾರೆ. ಆದರೆ, ಇದೀಗ ಅವರ ವಿರುದ್ಧ ಕೇಳಿಬಂದಿರುವ ಆರೋಪ ಅಭಿಮಾನಿಗಳನ್ನು ದುಃಖದ ಕಡಲಿಗೆ ನೂಕಿದೆ.

    ಗುಪ್ತಾಂಗದಲ್ಲಿ ಮದ್ಯದ ಬಾಟಲ್​ ತೂರಿಸಿ ಚಿತ್ರಹಿಂಸೆ: ಸ್ಟಾರ್​ ನಟನ ವಿರುದ್ಧ ನಟಿಯಿಂದ ಗಂಭೀರ ಆರೋಪ

    ಜಾನಿ ಡೆಪ್​ 2015ರಲ್ಲಿ ಹಾಲಿವುಡ್​ ನಟಿ ಆ್ಯಂಬರ್​ ಹರ್ಡ್​ ಎಂಬುವರನ್ನು ಮದುವೆಯಾದರು. ಆದರೆ, ಕೇವಲ ಎರಡೇ ವರ್ಷದಲ್ಲಿ ಅಂದರೆ, 2017ರಲ್ಲಿ ಸ್ಟಾರ್​ ದಂಪತಿ ಬೇರೆಯಾದರು.

    ಇದಾದ ಬಳಿಕ ಕೌಟುಂಬಿಕ ಕಲಹದಿಂದ ಬಳಲಿದ್ದು, ಪರಿಹಾರವಾಗಿ 350 ಕೋಟಿ ರೂಪಾಯಿ ಕೊಡಬೇಕೆಂದು ಜಾನಿ ಡೆಪ್​ ವಿರುದ್ಧ ಆ್ಯಂಬರ್​ ಹರ್ಡ್​ ಕೋರ್ಟ್​ನದಲ್ಲಿ ದಾವೆ ಹೂಡಿದರು. ಇದಕ್ಕೆ ಪ್ರತಿಯಾಗಿ ಜಾನಿ ಡೆಪ್​ ಕೂಡ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಇನ್ನು ಹರ್ಡ್​ ತನ್ನ ಮಾಜಿ ಪತಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಬೆರಳನ್ನು ಕತ್ತರಿಸಿದ್ದಲ್ಲದೆ, ಮೃಗೀಯವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ.

    ಆ್ಯಂಬರ್​ ಪರ ವಕಾಲತ್ತು ವಹಿಸಿರುವ ವಕೀಲ ಎಲೈನ್​ ಬ್ರೆಡೆಹೊಫ್ಟ್​ ಹೇಳಿಕೆ ಪ್ರಕಾರ ಹರ್ಡ್​ ಅವರ ಮೇಲೆ ಕೆಲ ಹೀನ ಕೃತ್ಯಗಳನ್ನು ಜಾನಿ ಡೆಪ್​ ಎಸಗಿದ್ದಾರಂತೆ. ನೈಟ್​ಗೌನ್​ ಹರಿದು ವಿಚಿತ್ರವಾಗಿ ವರ್ತಿಸಿದ್ದಾನೆ. ಅಲ್ಲದೆ, ಆಕೆಯ ಗುಪ್ತಾಂಗಕ್ಕೆ ಮದ್ಯದ ಬಾಟಲ್​ ತೂರಿಸಿ ಮೃಗೀಯವಾಗಿ ನಡೆದುಕೊಂಡಿದ್ದಾನೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.

    ಗುಪ್ತಾಂಗದಲ್ಲಿ ಮದ್ಯದ ಬಾಟಲ್​ ತೂರಿಸಿ ಚಿತ್ರಹಿಂಸೆ: ಸ್ಟಾರ್​ ನಟನ ವಿರುದ್ಧ ನಟಿಯಿಂದ ಗಂಭೀರ ಆರೋಪ

    58 ವರ್ಷದ ಡೆಪ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಡೆಪ್​​ ಪರ ವಕೀಲರಾದ ಕ್ಯಾಮಿಲ್ಲೆ ವಾಸ್ಕ್ವೆಜ್ ಹೇಳಿಕೆ ಪ್ರಕಾರ ಹರ್ಡ್​ ತನ್ನ ಸಾರ್ವಜನಿಕ ಚಿತ್ರದ ಬಗ್ಗೆ ಗೀಳನ್ನು ಹೊಂದಿದ್ದಾಳೆ. ಅವಳು ಸಂತ್ರಸ್ತೆ ಎಂಬ ಪಾತ್ರದಲ್ಲೇ ಹಲವು ವರ್ಷಗಳಿಂದ ಬದುಕುತ್ತಿದ್ದಾರೆ. ಸಂತ್ರಸ್ತೆಯಾಗಿ ತಮ್ಮ ಅಭಿನಯವನ್ನು ನೀಡಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಮೂಲಕ ಹರ್ಡ್​ ಆರೋಪ ಸುಳ್ಳು ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)

    ಮೊಟ್ಟ ಮೊದಲ ಬಾರಿಗೆ ಸಚಿವೆಯಾಗುವ ಮೂಲಕ ತನ್ನ ಮೇಲಿನ ಕಳಂಕ ತೊಡೆದು ಹಾಕಿದ ನಟಿ ರೋಜಾ!

    ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ನಟ ವಿಶಾಲ್​? ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಈ ಒಂದು ಟ್ವೀಟ್​!

    ಕೆಜಿಎಫ್​-2 ಚಿತ್ರತಂಡಕ್ಕೆ ಕೃತಜ್ಞತೆ ಇಲ್ಲವೇ? ನೀವು ಮಾಡಿದ್ದು ಸರಿನಾ ಎಂಬುದು ಕೆಜಿಎಫ್​ ಜನರ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts