

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ನಲ್ಲಿ ಜೈಷ್ ಇ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ ಐವರು ಉಗ್ರರನ್ನು ಭದ್ರತಾ ಪಡೆಗಳು ಸೆದೆಬಡಿದಿದ್ದಾರೆ.
ಶನಿವಾರ ರಾತ್ರಿ ಪುಲ್ವಾಮಾ ಮತ್ತು ಬುದ್ಗಮ್ ಜಿಲ್ಲೆಯಲ್ಲಿ ಉಗ್ರ ವಿರೋಧ ಕಾರ್ಯಾಚರಣೆ ನಡೆಸುವಾಗ ನಡೆದ ಎನ್ಕೌಂಟರ್ನಲ್ಲಿ ಉಗ್ರರು ಹತರಾಗಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಕೇವಲ 12 ಗಂಟೆಯಲ್ಲಿ ಪಾಕ್ ಪ್ರಾಯೋಜಕತ್ವದ ಲಷ್ಕರ್ ಇ ತೊಯ್ಬಾ ಮತ್ತು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಗಳಿಗೆ ಸೇರಿದ ಐವರನ್ನು ಹೊಡೆದುರುಳಿಸಲಾಗಿದೆ. ಮೃತರಲ್ಲಿ ಜೆಇಎಂ ಕಮಾಂಡರ್ ಉಗ್ರ ಜಾಹೀದ್ ವಾನಿ ಕೂಡ ಸೇರಿದ್ದು, ಇದೊಂದು ದೊಡ್ಡ ಯಶಸ್ಸು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು 12ಕ್ಕೂ ಅಧಿಕ ಎನ್ಕೌಂಟರ್ನಲ್ಲಿ 22 ಉಗ್ರರನ್ನು ಸೆದೆಬಡಿಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. (ಏಜೆನ್ಸೀಸ್)